ಡಿಯರ್ ಜಿಂದಗಿ : 'ಅವನು' ಹೇಳಿದ್ದು ಇನ್ನೂ ನೆನಪಿದೆ...!

ಎಲ್ಲಾ ರೀತಿಯ ಸ್ಪೀಡ್ ಬ್ರೇಕರ್ಗಳು, ಆಲೋಚನೆಯಲ್ಲಿನ ಅಡೆತಡೆಗಳು ಮತ್ತು ಇತರ ಸಂಬಂಧಗಳಿಂದಾಗಿ ಜೀವನ ನಿಂತ ನೀರಂತಾಗಿದೆ. ಅದು ನಮ್ಮ ಹೃದಯವನ್ನು ಪ್ರತಿದಿನವೂ ಸುತ್ತುವರೆದು ಆಲೋಚಿಸುವಂತೆ ಮಾಡುತ್ತಿದೆ. ಯಾವಾಗ ಹೃದಯ ಈ ಎಲ್ಲಾ ಚಿಂತೆಗಳಿಂದ ತುಂಬಿಹೋಗುತ್ತದೆಯೋ, ಆಗ ಇದನ್ನು ವೈದ್ಯ ಭಾಷೆಯಲ್ಲಿ 'ಹಾರ್ಟ್ ಅಟ್ಯಾಕ್' ಎನ್ನುತ್ತೇವೆ. 

Last Updated : Jun 29, 2018, 11:46 AM IST
ಡಿಯರ್ ಜಿಂದಗಿ : 'ಅವನು' ಹೇಳಿದ್ದು ಇನ್ನೂ ನೆನಪಿದೆ...! title=

ಮೂಲ ಲೇಖಕರು: ದಯಾಶಂಕರ್ ಮಿಶ್ರಾ

ನಿಮಗೆ ಮತ್ತೊಬ್ಬರ ಬಗ್ಗೆ ಇರುವ ಕಾಳಜಿ ಎಂತಹುದು, ಯಾವ ಮಾತು ಜನರಿಗೆ ಕೆಟ್ಟದ್ದು ಎನಿಸುತ್ತದೆ, ಯಾವುದು ಅವರ ಹೃದಯದಲ್ಲಿ ಉಳಿಯುತ್ತದೆ ಮತ್ತು ಯಾವ ರೀತಿಯ ಮಾತುಗಳನ್ನು ಮನದಿಂದ ಸುಲಭವಾಗಿ ಅಳಿಸಿಹಾಕಬಹುದು ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ಈ ಬಗ್ಗೆ ಅರಿತಿಲ್ಲ ಎಂದಾದರೆ, ಅಂತಹ ಮಾತುಗಳು ಜನರ ಮನಸ್ಸನ್ನು ಘಾಸಿಗೊಳಿಸಿ, ಸಂಬಂಧಗಳಲ್ಲಿ ಬಿರುಕುಂಟಾಗಿ, ಖಿನ್ನತೆಗೆ ಒಳಗಾಗುವಂತೆ ಮಾಡುತ್ತವೆ!

10 ವರ್ಷಗಳ ಹಿಂದೆ ಜೀವನ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಆಗ ಈಗಿನಂತೆ ಮೊಬೈಲ್ ಫೋನ್ ಇರಲಿಲ್ಲ. ಎಲ್ಲರಲ್ಲೂ ತಮ್ಮವರೊಂದಿಗೆ ಮಾತನಾಡಲು ಬಕಪಕ್ಷಿಗಳಂತೆ ಕಾದು ಕುಳಿತಿರುತ್ತಿದ್ದರು. ಮತ್ತೊಬ್ಬರ ಜೊತೆ ಮಾತನಾಡುವುದೆಂದರೆ ಪರೀಕ್ಷೆ ಎದುರಿಸಿದಂತೆ ಭಾಸವಾಗುತ್ತಿತ್ತು. ಹಾಗಾಗಿ ಮಾತನಾಡುವುದಕ್ಕೂ ಮೊದಲು ಏನು ಮಾತನಾಡಬೇಕು ಎಂಬ ಬಗ್ಗೆ ತಯಾರಿ ನಡೆಸುವುದು ಜೀವನದ ಒಂದು ಭಾಗವೇ ಆಗಿತ್ತು. ನಮ್ಮ ಸಂಬಂಧಗಳು ನಾವು ಹೇಗೆ ಸಂವಾದ ನಡೆಸುತ್ತೇವೆ ಎಂಬುದರ ಮೇಲೆ ಹೆಚ್ಚು ಕಾಲ ಉಳಿಯುತ್ತಿತ್ತು. ಯಾವ ವ್ಯಕ್ತಿ ತನ್ನ ಮಾತು, ವಿಚಾರಗಳಿಗೆ ತಕ್ಕಂತೆ ಬದುಕುತ್ತಿದ್ದನೋ, ಆತನನ್ನು ಹೃದಯವಂತ, ಪ್ರಾಮಾಣಿಕ ಮತ್ತು ಪ್ರತಿಷ್ಠಿತ ವ್ಯಕ್ತಿಯಾಗಿ ಜನ ಪರಿಗಣಿಸುತ್ತಿದ್ದರು.

ಡಿಯರ್ ಜಿಂದಗಿ: ಅತಿ ಬುದ್ದಿವಂತಿಕೆಯನ್ನು ಬಿಟ್ಟು ಹೊರಬರುವುದು ಅವಶ್ಯಕ

ಆದರೆ ಈ ಮೊಬೈಲ್, ಚಾಟಿಂಗ್ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ನಮ್ಮ ಜೀವನದಲ್ಲಿ 'ಫ್ರೀ ಟಾಕ್ ಟೈಮ್'ನ ಗದ್ದಲ ಆರಂಭವಾಗಿದೆ. ಎಲ್ಲಾ ವಿಚಾರಕ್ಕೂ ಜಸ್ಟ್ ಒಂದು ಫೋನ್ ಮಾಡು, ಮಾತಾಡು ಎಂಬಂತಾಗಿದೆ. ಹೀಗಾಗಿ ಬೆಳಿಗ್ಗೆಯಿಂದ ಸಂಜೆ ತನಕ ನಾವು ಸಾಕಷ್ಟು ವಿಚಾರಗಳನ್ನು, ಸಾಕಷ್ಟು ಜನರೊಂದಿಗೆ ಮಾತನಾಡುತ್ತೇವೆ. ಆದರೆ, ಯಾರೊಂದಿಗೆ, ಯಾವಾಗ, ಏನು ಮಾತನಾಡಿದೆವು ಎಂಬುದೇ ಮರೆತು ಹೋಗುತ್ತಿದೆ. ಆದರೆ, ನಾವು ಆಡಿದ ಮಾತನ್ನು ನಾವೇ ಮರೆತರೆ, ಇನ್ನು ನಮ್ಮೊಂದಿಗೆ ಮಾತನಾಡಿದವರ ಮೇಲೆ ಎಲ್ಲಾ ಜವಾಬ್ದಾರಿಯನ್ನು ಹೇಗೆ ಹೊರಿಸಲು ಸಾಧ್ಯ. ಆ ರೀತಿ ಮಾಡಿದರೆ ಅದು ಪ್ರಕೃತಿ ನಿಯಮವನ್ನು ಪುನರಾವರ್ತಿಸಿದಂತೆ ಆಗುತ್ತದೆ. 

ಡಿಯರ್ ಜಿಂದಗಿ: ಬಿಡುವಿದ್ದರೆ ಮನೆಗೆ ಬಂದು ಹೋಗಿ...

ನಮ್ಮಲ್ಲಿ ಕೆಲವರು ಹಿಂದಿ ಭಾಷೆಯಲ್ಲೇ ಓದಿ ಕಾಲೇಜು ಸೇರಿದರು. ಅವರಿಗೆ ಬಹುಶಃ ಚಂದ್ರಧರ್ ಶರ್ಮಾ ಗುಲೆರಿ ಅವರ ಕಥೆ, 'उसने कहा था' (ಅವನು ಹೇಳಿದ್ದ) ನೆನಪಿರಬಹುದು. ಈ ಕಥೆಯ ಉಳಿದ ಭಾಗವನ್ನು ಸಮಯದ ಪರಿಪೂರ್ಣತೆ ಎಂಬುದು ಹಿಡಿದಿಡಬಹುದು. ಆದರೆ, ಓದುಗನ ಮನಸ್ಸಿನಲ್ಲಿ ಶಾಶ್ವತವಾಗಿ ಒಂದು ಸಂವಾದವನ್ನೇ ಹುಟ್ಟುಹಾಕುತ್ತದೆ. ಆ ವಿಷಯವೆಂದರೆ, ತನ್ನ ಪತಿ ಮತ್ತು ಮಗನನ್ನು ನಾಯಕನಿಂದ ರಕ್ಷಿಸುವುದಾಗಿ ಮಾತುಕೊಟ್ಟ ರಾಣಿಯ ಬಗ್ಗೆ. ತಮ್ಮ ಮನಸ್ಸಿನಲ್ಲಿ ಬರುವ ಪರಿಶುದ್ಧ ಚಿಂತನೆಯಗಳನ್ನು ಆ ಸಮಯ ಸಂದರ್ಭಕ್ಕೆ ತಕ್ಕಂತೆ ಹೇಗೆ ನಿಭಾಯಿಸಬಹುದು ಎಂಬುದೇ 'ಅವನು ಹೇಳಿದ್ದ' ಕಥೆಯ ಸಾರಾಂಶವಾಗಿತ್ತು..

ಡಿಯರ್ ಜಿಂದಗಿಯಲ್ಲಿ  'ಅವನು ಹೇಳಿದ್ದ' (उसने कहा था) ಎಂಬ ಕಥೆಯನ್ನು ನಮ್ಮಲ್ಲಿರುವ ನಂಬಿಕೆಯನ್ನು ಬಲಪಡಿಸಲು ಬಳಸುತ್ತಿದ್ದೇವೆ. ಅವನ ಹೆಸರು ವಿಶ್ವಾಸ. ಪ್ರೀತಿ, ಸ್ನೇಹ, ಆತ್ಮೀಯತೆಯನ್ನು ಪಡೆಯುವ ಹಾದಿಯಲ್ಲಿ ವಿಶ್ವಾಸವನ್ನು ಗಳಿಸುತ್ತೇವೆ. ಈ ಹಂತದಲ್ಲಿ ನಾವು ಕೆಲವರೊಂದಿಗೆ ಸಹಜವಾಗಿ ಮಾತನಾಡಿದ್ದರೂ, ಅವರ ಮನದಾಳದಲ್ಲಿ ಬೇರೂರಿ ವಿಶ್ವಾಸ ಗಳಿಸುತ್ತೇವೆ. 

ಡಿಯರ್ ಜಿಂದಗಿ: ಯಾರಿಂದ ಸೋಲುತ್ತಿದೆ ಈ ಲಕ್ಷಾಧಿಪತಿಗಳ ಮನಸ್ಸು

ಸಮಯ ಕಳೆಯುತ್ತಾ ಹೋದಂತೆ ನಾವು ಜೀವನವೆಂಬ ಸ್ಪರ್ಧೆಯಲ್ಲಿ ತೊಡಗುತ್ತೇವೆ. ಸ್ವತಃ ಜೀವನ ಸಂಘರ್ಷದಲ್ಲಿ ತೊಡಗುತ್ತೇವೆ. ನಂತರ ಆ ಸಂಘರ್ಷದಿಂದ ಹೊರಬರಲು ಸ್ವತಃ ಪ್ರಯತ್ನಿಸಿದಾಗ, ಎಲ್ಲವೂ ನೆನಪಿಗೆ ಬರುತ್ತದೆ. ಆದರೆ ಆ ಸಂಘರ್ಷದಿಂದ ಸ್ವಲ್ಪ ಹೊರಬಂದು ಉನ್ನತ ಹಂತ ತಲುಪುತ್ತಿದ್ದಂತೆ ನಮ್ಮ ಉದ್ದೇಶಗಳು, ಪ್ರಮಾಣಗಳು ಮತ್ತು ಹೇಳಿಕೆಗಳಿಂದ ದೂರ ಸರಿಯುತ್ತೇವೆ. 

ಇಲ್ಲಿ 'ಅವನು'(उसने) ಎಂಬುದರ ಸುತ್ತ ಜೀವನದ ತಿರುವಿನಲ್ಲಿ ಭರವಸೆ ನೀಡಿದವರೆಲ್ಲರೂ ಇದ್ದಾರೆ. ಆದರೆ, ನಾವು ನಮ್ಮ ಜನರ ನಡುವೆ ಆ ಸಂದರ್ಭದಲ್ಲಿ ಮಾಡಿಕೊಂಡಿದ್ದ ಒಪ್ಪಂದಗಳೇನಾದವು? ಜೀವನದ ಹಾದಿಯಲ್ಲಿ ನೀಡಿದ ಭರವಸೆಗಳನ್ನು ಮತ್ತೊಂದು ತಿರುವಿನಲ್ಲಿ ಮರೆಯುತ್ತಿರುವ ನಾವು ಅಂತರಂಗದ ಶಾಂತಿಗಾಗಿ ಹವಣಿಸುತ್ತಿದ್ದೇವೆ. 

ಇವೆಲ್ಲವೂ ನಾವು ದಿನನಿತ್ಯ ಭೇಟಿ ಮಾಡುವವರೊಂದಿಗೇ ಇವೆಲ್ಲಾ ನಡೆಯುತ್ತದೆ. ಅವರು ಹೇಳಿದ್ದ ದಿನಗಳು ಆಗಲೇ ಸರಿಯುತ್ತಿವೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ಕಾಣಲು ಅಂದು ನೀವು ಏನು ಹೇಳಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಲು, ವಾರದಲ್ಲಿ ಒಂದು ಗಂಟೆಯನ್ನಾದರೂ ವಿನಿಯೋಗಿಸಿ. ಅದು ನೀವು ಅವರಿಗೆ ಮರಳಿ ನೀಡುವ ಉಡುಗೊರೆಗಿಂತ ಹೆಚ್ಚು.

ಡಿಯರ್ ಜಿಂದಗಿ: ಅಂತಹ ಸ್ನೇಹಿತನೊಬ್ಬ ಇರಲೇಬೇಕು....

ಎಲ್ಲಾ ರೀತಿಯ ಸ್ಪೀಡ್ ಬ್ರೇಕರ್ಗಳು, ಆಲೋಚನೆಯಲ್ಲಿನ ಅಡೆತಡೆಗಳು ಮತ್ತು ಇತರ ಸಂಬಂಧಗಳಿಂದಾಗಿ ಜೀವನ ನಿಂತ ನೀರಂತಾಗಿದೆ. ಅದು ನಮ್ಮ ಹೃದಯವನ್ನು ಪ್ರತಿದಿನವೂ ಸುತ್ತುವರೆದು ಆಲೋಚಿಸುವಂತೆ ಮಾಡುತ್ತಿದೆ. ಯಾವಾಗ ಹೃದಯ ಈ ಎಲ್ಲಾ ಚಿಂತೆಗಳಿಂದ ತುಂಬಿಹೋಗುತ್ತದೆಯೋ, ಆಗ ಇದನ್ನು ವೈದ್ಯ ಭಾಷೆಯಲ್ಲಿ 'ಹಾರ್ಟ್ ಅಟ್ಯಾಕ್' ಎನ್ನುತ್ತೇವೆ. 
 
ವೈದ್ಯರಿಗೆ ಅವರ ಕೆಲಸ ತಿಳಿದಿದೆ, ಆದರೆ ಅವರಿಗೆ ಅಗತ್ಯವಾದ ಕೆಲವು ಸಹಾಯವನ್ನು ನಮ್ಮಿಂದ ಮಾಡಲು ಸಾಧ್ಯವಿದೆ. ನಿಮ್ಮ ನೆನಪೆಂಬ ಕಿಟಕಿಯ ಮೇಲಿನ ಪರದೆಗಳನ್ನು ಸರಿಸಿ. ಜೀವನವನ್ನು ಸರಳ, ಸುಂದರ, ಉದಾರ ಮತ್ತು ಸ್ನೇಹಮಾಯಿಯಾಗಿಸಿ. ಮತ್ತೊಬ್ಬರಿಂದ ನಿಮ್ಮ ಕೆಲಸಗಳನ್ನು ಪೂರೈಸಿಕೊಳ್ಳುವ ಮುನ್ನ, ನೀವು ಅವರಿಗೆ ನೀಡಿದ ಭರವಸೆಗಳನ್ನು ಪೂರೈಸಿ, ಹೇಳಿದಂತೆ ನಡೆದುಕೊಳ್ಳಿ.

ಕನ್ನಡದಲ್ಲಿ 'ಡಿಯರ್ ಜಿಂದಗಿ' ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ: ಡಿಯರ್ ಜಿಂದಗಿ

ಹಿಂದಿ ಭಾಷೆಯಲ್ಲಿ ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ  : डियर जिंदगी
(https://twitter.com/dayashankarmi)

(ಈ ಲೇಖನದ ಕುರಿತಾಗಿ ನಿಮ್ಮ ಪ್ರಶ್ನೆ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಮೆಸೇಜ್ ಮಾಡಿ:  https://www.facebook.com/dayashankar.mishra.54)

Trending News