ಬಾಲಕನ ಸಾವಿಗೆ ಕಾರಣವಾಯಿತು ಪೂರಿ ! ಪೋಷಕರೇ ಶಾಲೆಗೆ ಬುತ್ತಿ ಕಟ್ಟುವ ಮುನ್ನ ಈ ವಿಷಯ ತಿಳಿದುಕೊಳ್ಳಿ !

11 ವರ್ಷದ ಮಗು ಗಂಟಲಲ್ಲಿ ಪೂರಿ ಸಿಕ್ಕಿ ಹಾಕಿಕೊಂಡು ಉಸಿರುಗಟ್ಟಿ ಪ್ರಾಣವನ್ನೇ ಬಿಟ್ಟಿದೆ.

Written by - Ranjitha R K | Last Updated : Nov 26, 2024, 04:02 PM IST
  • ಪೋಷಕರನ್ನು ಬೆಚ್ಚಿ ಬೀಳಿಸುವ ಘಟನೆ
  • ಊಟ ಮಾಡುತ್ತಿದ್ದ ವೇಳೆ ಮೃತಪಟ್ಟ ಬಾಲಕ
  • ಗಂಟಲಲ್ಲಿ ಪೂರಿ ಸಿಲುಕಿ ಸಾವು
ಬಾಲಕನ ಸಾವಿಗೆ ಕಾರಣವಾಯಿತು ಪೂರಿ ! ಪೋಷಕರೇ ಶಾಲೆಗೆ ಬುತ್ತಿ ಕಟ್ಟುವ ಮುನ್ನ ಈ ವಿಷಯ ತಿಳಿದುಕೊಳ್ಳಿ ! title=

ಹೈದರಾಬಾದ್‌ನಲ್ಲಿ ನಡೆದಿರುವ ಈ ಘಟನೆ ಪೋಷಕರನ್ನು ಬೆಚ್ಚಿ ಬೀಳಿಸುವ ಹಾಗಿದೆ.  ಹೈದರಾಬಾದ್‌ನಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಊಟ ಮಾಡುತ್ತಿದ್ದ ವೇಳೆ ಮೃತಪಟ್ಟಿರುವ ಘಟನೆ ನಡೆದಿದೆ. ಹಸಿವಾಗುತ್ತಿದೆ ಎಂದು ಮನೆಯಿಂದ ತಂದ ಪೂರಿಯನ್ನು ತಿನ್ನುತ್ತಿದ್ದ ಬಾಲಕ ಮೃತಪಟ್ಟಿದ್ದಾನೆ.

ಸಾಮಾನ್ಯವಾಗಿ ಆಹಾರವು ಗಂಟಲಲ್ಲಿ ಸಿಕ್ಕಿಕೊಂಡಾಗ, ಜನರು ನೀರು ಕುಡಿಯುತ್ತಾರೆ. ಆದರೆ ಈ 11 ವರ್ಷದ ಮಗು ಗಂಟಲಲ್ಲಿ ಪೂರಿ ಸಿಕ್ಕಿ ಹಾಕಿಕೊಂಡು ಉಸಿರುಗಟ್ಟಿ ಪ್ರಾಣವನ್ನೇ ಬಿಟ್ಟಿದೆ. ವಿದ್ಯಾರ್ಥಿಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ತನ್ನ ಮಗ ಒಂದೇ ಬಾರಿಗೆ 'ಮೂರಕ್ಕಿಂತ ಹೆಚ್ಚು ಪೂರಿ' ಸೇವಿಸಿದ್ದಾನೆ ಎಂದು ಶಾಲೆಯಿಂದ ತನಗೆ ಫೋನ್ ಕರೆ ಬಂದಿತ್ತು.ಈ ಕಾರಣದಿಂದ ಬಾಲಕನ ಉಸಿರಾಟಕ್ಕೆ ತೊಂದರೆ ಉಂಟಾಗಿದೆ. ಇದುವೇ ಆತನ ಸಾವಿಗೂ ಕಾರಣವಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : ಭಾರತದಲ್ಲಿ ನಕಲಿ ₹500 ನೋಟುಗಳ ಪ್ರಮಾಣದಲ್ಲಿ 317% ಏರಿಕೆ: ಹಣಕಾಸು ಸಚಿವಾಲಯ

6ನೇ ತರಗತಿ ವಿದ್ಯಾರ್ಥಿಯನ್ನು ಶಾಲೆಯ ಸಿಬ್ಬಂದಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಬಾಲಕ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. 

ಮಕ್ಕಳಿಗೆ ಈ ವಿಚಾರದ ಅರಿವು ಮೂಡಿಸಬೇಕು : 
ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಊಟ ಮಾಡುವಾಗ ಆತುರಪಡದಂತೆ  ವಿವರಿಸುವುದು ಅನಿವಾರ್ಯ ಎನ್ನುವುದನ್ನು ಈ ಘಟನೆ ಸಾರಿ ಹೇಳುತ್ತದೆ.   ಸಾಮಾನ್ಯವಾಗಿ ಜನರು ಮಾತನಾಡುತ್ತಾ ಅಥವಾ ಟಿವಿ ನೋಡುತ್ತಾ ತಿನ್ನುತ್ತಾರೆ. ಇದರಿಂದ ಆಹಾರ ಸರಿಯಾಗಿ ಅಗಿಯದೆ ಗಂಟಲಲ್ಲಿ ಆಹಾರ ಸಿಕ್ಕಿಹಾಕಿಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ಮನೆಯಲ್ಲಾಗಲೀ ಶಾಲೆಯಲ್ಲಾಗಲೀ ಆಹಾರ ಸೇವಿಸುವಾಗ ಅವಸರ ಮಾಡದೆ ನಿಧಾನವಾಗಿ ಸರಿಯಾಗಿ ಜಗಿದು ತಿನ್ನುವುದು ಎಷ್ಟು ಮುಖ್ಯ ಎನ್ನುವುದನ್ನು ಮಕ್ಕಳಿಗೆ ತಿಳಿಸಿ ಹೇಳಬೇಕಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News