ನವದೆಹಲಿ: ಸ್ಮಾರ್ಟ್ಫೋನ್ ತಯಾರಕ ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ ತನ್ನ ಹೊಸ ಪ್ರವೇಶ ಮಟ್ಟದ ಸ್ಮಾರ್ಟ್ಫೋನ್ 'ಲಾವಾ Z 41' (Lawa Z41) ಅನ್ನು 3,899 ರೂ.ಗೆ ಬಿಡುಗಡೆ ಮಾಡಿದೆ. ಫೋನ್ ಮಿಡ್ನೈಟ್ ಬ್ಲೂ ಮತ್ತು ಅಂಬರ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಸಾಮಾಜಿಕ ಮಾಧ್ಯಮಗಳ ಅಗತ್ಯಗಳನ್ನು ಪೂರೈಸಲಿರುವ ಫೋನ್:
ಲಾವಾ ಇಂಟರ್ನ್ಯಾಷನಲ್ ಪ್ರೊಡಕ್ಟ್ ಹೆಡ್ ತೇಜಿಂದರ್ ಸಿಂಗ್ ಅವರ ಪ್ರಕಾರ, ಈ ಸ್ಮಾರ್ಟ್ಫೋನ್ ಗ್ರಾಹಕರ ಎಲ್ಲಾ ಸಾಮಾಜಿಕ ಮಾಧ್ಯಮ ಅಗತ್ಯಗಳಾದ ಯೂಟ್ಯೂಬ್, ವಾಟ್ಸಾಪ್ ಮತ್ತು ಫೇಸ್ಬುಕ್ ಸೇರಿದಂತೆ ಇತ್ಯಾದಿಗಳನ್ನು ಪೂರೈಸುತ್ತದೆ. ಯೂಟ್ಯೂಬ್‌ನಂತಹ ಡೇಟಾ ಕುನ್ಸ್ಯುಮಿಂಗ್ ಅಪ್ಲಿಕೇಶನ್‌ಗಳನ್ನು ಸರ್ಫ್ ಮಾಡಲು ಫೋನ್ ಬಳಕೆದಾರರನ್ನು ಅನುಮತಿಸುತ್ತದೆ. ಇದರಲ್ಲಿ ಬಳಕೆದಾರರು ತಮ್ಮ ಡೇಟಾ ಬಳಕೆಯನ್ನು ನಿಯಂತ್ರಿಸಬಹುದು ಮತ್ತು ಸೂಪರ್-ಫಾಸ್ಟ್ ಇಂಟರ್ಫೇಸ್‌ನೊಂದಿಗೆ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.
ಈ ಸ್ಮಾರ್ಟ್‌ಫೋನ್ ವೈಶಿಷ್ಟ್ಯತೆ:
ಸ್ಮಾರ್ಟ್ಫೋನ್ 5 ಇಂಚಿನ ಡಿಸ್ಪ್ಲೇ ವೈಶಿಷ್ಟ್ಯವನ್ನು ಹೊಂದಿದೆ. 'ಲಾವಾ Z 41' 5 ಎಂಪಿ ಹಿಂಬದಿಯ ಕ್ಯಾಮೆರಾದೊಂದಿಗೆ 2500 mAh ಬ್ಯಾಟರಿಯನ್ನು ಹೊಂದಿದೆ. ಸಾಧನವು 1 ಜಿಬಿ RAM ಮತ್ತು 16 ಜಿಬಿ ರಾಮ್‌ನೊಂದಿಗೆ ಆಂಡ್ರಾಯ್ಡ್ 9 ಪೈ (ಗೋ ಎಡಿಷನ್) ಅನ್ನು ಚಾಲನೆ ಮಾಡುತ್ತದೆ.