ಮೇ 31ರ ಬಳಿಕ‌ ಜಾರಿಯಾಗಲಿರುವ 5ನೇ ಹಂತದ ಲಾಕ್​ಡೌನ್ ಹೇಗಿರಲಿದೆ ಗೊತ್ತಾ?

ಕರ್ನಾಟಕದಲ್ಲಿ ಈಗಾಗಲೇ ಜೂನ್ 1ರಿಂದ ದೇವಸ್ಥಾನಗಳನ್ನು ತೆರೆಯಲು ಅನುಮತಿ ಕೊಡಲಾಗಿದೆ.‌ ಇದೇ ರೀತಿ ಕೇಂದ್ರ ಸರ್ಕಾರ ಕೂಡ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಲಿದೆ. ಆದರೆ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುಮತಿ ನಿರಾಕರಿಸಲಿದೆ.

Written by - Yashaswini V | Last Updated : May 28, 2020, 09:05 AM IST
ಮೇ 31ರ ಬಳಿಕ‌ ಜಾರಿಯಾಗಲಿರುವ 5ನೇ ಹಂತದ  ಲಾಕ್​ಡೌನ್ ಹೇಗಿರಲಿದೆ ಗೊತ್ತಾ? title=

ನವದೆಹಲಿ: COVID 19  ಕರೋನವೈರಸ್ (Coronavirus) ನಿಯಂತ್ರಿಸಲು ಜಾರಿಗೊಳಿಸಲಾದ ನಾಲ್ಕನೇ ಹಂತದ  ಲಾಕ್​ಡೌನ್ ಮೇ  31ಕ್ಕೆ ಮುಕ್ತಾಯವಾಗಲಿದ್ದು ಅಂದೇ ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ  ಪ್ರಧಾನಿ ನರೇಂದ್ರ ಮೋದಿ ಐದನೇ ಹಂತದ ಲಾಕ್​ಡೌನ್ (Lockdown) ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಕೇಂದ್ರ ಗೃಹ ಇಲಾಖೆಯ ಮಾಹಿತಿಗಳ ಪ್ರಕಾರ ಐದನೇ ಹಂತದ ಲಾಕ್​ಡೌನ್ ಜೂನ್ 15ರವರೆಗೂ ವಿಸ್ತರಣೆ ಆಗುವ ಸಾಧ್ಯತೆ ಇದೆ. ಜೊತೆಗೆ ಐದನೇ ಹಂತದ ಲಾಕ್​ಡೌನ್ ಮೊದಲಿನ ಎಲ್ಲಾ ಲಾಕ್​ಡೌನ್ ಗಳಿಗಿಂತಲೂ ಭಿನ್ನವಾಗಿರಲಿದೆ. ಬಹಳ ಮುಖ್ಯವಾಗಿ ಇದು ನಗರ ಕೇಂದ್ರಿತವಾಗಿರಲಿದೆ ಎಂದು ಹೇಳಲಾಗುತ್ತಿದೆ.

ಇಂದಿನಿಂದ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವ ಅಭಿಯಾನ ಕೈಗೆತ್ತಿಕೊಂಡ ಕಾಂಗ್ರೆಸ್

ಐದನೇ ಹಂತದ  ಲಾಕ್​ಡೌನ್ ಮಾರ್ಗಸೂಚಿಗಳನ್ನು ಪ್ರಮುಖವಾಗಿ ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಇಂದೂರ್, ದೆಹಲಿ, ಪುಣೆ, ಥಾಣ, ಜೈಪುರ್ ಮತ್ತು ಸೂರತ್ ನಗರಗಳ ದೃಷ್ಟಿಯಿಂದ ರೂಪಿಸಲಾಗುತ್ತೆ. ಏಕೆಂದರೆ ಇಡೀ ದೇಶದ COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಈ‌ 11ನಗರಗಳ ಪಾಲು ಶೇಕಡಾ 70ರಷ್ಟಿದೆ. ಆದುದರಿಂದ ಈ 11ನಗರಗಳಿಗೆ ಕೇಂದ್ರಿಕೃತವಾದ ಮಾರ್ಗಸೂಚಿ ರಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈಗಲೂ ದೇಶದಲ್ಲಿ ಗ್ರಾಮೀಣ ಭಾಗದಲ್ಲಿ COVID 19 ವೈರಸ್ ಪೀಡಿತರ ಸಂಖ್ಯೆ ಅಥವಾ ಸೋಂಕು ಹರಡುವಿಕೆ ಕಡಿಮೆ ಪ್ರಮಾಣದಲ್ಲಿದೆ. ಆದುದರಿಂದ ಕೇಂದ್ರ ಗೃಹ ಇಲಾಖೆ ಇದಕ್ಕೂ ಮೊದಲು ದೇಶದ ಎಲ್ಲಾ ನಗರಗಳನ್ನು ಗುರಿಯಾಗಿರಿಸಿಕೊಂಡು ಐದನೇ ಹಂತದ ಮಾರ್ಗಸೂಚಿ ರಚಿಸಲು ಮುಂದಾಗಿತ್ತು. ಆನಂತರ 6 ಮೆಟ್ರೋ ಸಿಟಿಗಳು ಮತ್ತು ಉಳಿದ ಐದು ಮಹಾನಗರಗಳನ್ನು ಹೊರತುಪಿಡಿಸಿ ಬೇರೆ ನಗರಗಳಿಗೆ ಅಗತ್ಯ ಇಲ್ಲ ಎಂದು ಈಗ 11 ಮಹಾನಗರಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೂತನ ಮಾರ್ಗಸೂಚಿ ರೂಪಿಸಲಾಗುತ್ತಿದೆ ಎನ್ನಲಾಗಿದೆ.

ಮೇ 31ರಂದು 'ಮನ್ ಕಿ ಬಾತ್ 'ನಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ನೀಡಲಿರುವ ಮೋದಿ

ಈ‌ 11 ನಗರಗಳನ್ನು ಹೊರತುಪಡಿಸಿ ಉಳಿದೆಡೆಗೆ ಹಲವಾರ ರೀತಿಯ ವಿನಾಯಿತಿ ನೀಡುವ ಸಾಧ್ಯತೆ ಇದೆ. ಬೆಳಿಗ್ಗೆ 7ರಿಂದ‌ ಸಂಜೆ 7ರವರೆಗೆ ಎಲ್ಲಾ ವ್ಯವಹಾರಗಳನ್ನು ನಡೆಸಲು, ಆಟೋ, ಟ್ಯಾಕ್ಸಿ ಮತ್ತಿತರ ಸಾರ್ವಜನಿಕ ಸಾರಿಗೆಗೆ ಅವಕಾಶ‌ ನೀಡಲಾಗುತ್ತದೆ. ಕೇವಲ ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಕಟ್ಟುನಿಟ್ಟಿನ ಕ್ರಮ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.‌

ಕರ್ನಾಟಕದಲ್ಲಿ ಈಗಾಗಲೇ ಜೂನ್ 1ರಿಂದ ದೇವಸ್ಥಾನಗಳನ್ನು ತೆರೆಯಲು ಅನುಮತಿ ಕೊಡಲಾಗಿದೆ.‌ ಇದೇ ರೀತಿ ಕೇಂದ್ರ ಸರ್ಕಾರ ಕೂಡ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಲಿದೆ. ಆದರೆ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುಮತಿ ನಿರಾಕರಿಸಲಿದೆ.

ಮೊದಲು ಜಿಮ್ ಮತ್ತು ಉದ್ಯಾನವನಗಳನ್ನು ನಿಷೇಧಿಸಲಾಗಿತ್ತು. ನೂತನ‌ ಮಾರ್ಗಸೂಚಿಯಲ್ಲಿ ಜಿಮ್ ಮತ್ತು ಉದ್ಯಾನವನಗಳನ್ನು ತೆರೆಯುವ ನಿರ್ಧಾರವನ್ನು ಕೂಡ ರಾಜ್ಯ ಸರ್ಕಾರಕ್ಕೆ ಬಿಡುವ ಸಾಧ್ಯತೆಗಳಿವೆ.

ಮಕ್ಕಳಿಂದ  ಲಾಕ್​ಡೌನ್ ನಿಯಮಗಳ ಪಾಲನೆ‌ ಕಷ್ಟವಾಗಲಿದೆ ಮತ್ತು COVID 19 ವೈರಸ್ ವ್ಯಾಪಕವಾಗಿ ಹರಡುತ್ತಿದೆ ಎಂಬ ಕಾರಣಕ್ಕೆ ಶಾಲೆಗಳು, ಕಾಲೇಜುಗಳು ಮತ್ತು ಟುಟೋರಿಯಲ್ ಗಳನ್ನು ತೆರೆಯುವಂತಿಲ್ಲ ಎಂದು ಆದೇಶಿಸುವ ಸಾಧ್ಯತೆ ಇದೆ.

ಇದೇ ರೀತಿ ಹೆಚ್ಚು ಜನ ಸೇರಲು ಅವಕಾಶ ಇರುವ ಶಾಪಿಂಗ್ ಮಾಲ್ ಮತ್ತು‌ ಚಿತ್ರಮಂದಿರಗಳನ್ನು ತೆರೆಯಲು ನಿಷೇಧ ಏರುವ ಸಾಧ್ಯತೆಗಳಿವೆ.
 

Trending News