ಪೋರ್ಟ್ ಬ್ಲೇರ್: ಅಂಡಮಾನ್ ದ್ವೀಪದಲ್ಲಿ ಸೋಮವಾರ ಬೆಳಿಗ್ಗೆ 6.44ರಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಗರ್ಭ ಅಧ್ಯಯನ ಕೇಂದ್ರ ತಿಳಿಸಿದೆ.
Earthquake of Magnitude:4.8, Occurred on:11-03-2019,06:44:30 IST, Lat:11.9 N & Long: 93.6 E, Depth: 95 Km Region:Andaman Islands Region pic.twitter.com/d1K48MMXjs
— India Met. Dept. (@Indiametdept) March 11, 2019
ಫೆಬ್ರವರಿ 28 ರಂದು ಬೆಳಿಗ್ಗೆ 5.30ರ ಸಮಯದಲ್ಲಿ ನಿಕೊಬಾರ್ ದ್ವೀಪಗಳಲ್ಲಿ 4.8ರಷ್ಟು ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಇದಕ್ಕೂ ಮುನ್ನ ಫೆಬ್ರವರಿ 13ರಂದು ಬೆಳಗಿನ ಜಾವ 1.51ಕ್ಕೆ 4.5 ತೀವ್ರತೆಯಲ್ಲಿ ಅಂಡಮಾನ್ ದ್ವೀಪಗಳಲ್ಲಿ ಸಂಭವಿಸಿದ್ದ ಭೂಕಂಪದಿಂದಾಗಿ ಸುಮಾರು 10 ಕಿ.ಮೀ ವರೆಗೆ ಭೂಮಿ ನಲುಗಿತ್ತು.