Eknath Shinde Camp goes with Shiv Sena Balasaheb Gut : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ರಾಜ್ಯದ ರಾಜಕೀಯ ಯಾವ ದಿಕ್ಕಿಗೆ ತಿರುವು ಪಡೆಯಲಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ, ಈ ನಡುವೆ ಸಿಎಂ ಉದ್ಧವ್ ಠಾಕ್ರೆಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಏಕನಾಥ್ ಶಿಂಧೆ ಪಾಳಯದಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನಡೆದಿದೆ.
ಶಿಂಧೆ ಬೆಂಬಲಿಗರಿಂದ ಹೊಸ ಪಾರ್ಟಿ!
ಶಿಂಧೆ ಬೆಂಬಲಿಗರು ತಮ್ಮ ಪ್ರತ್ಯೇಕ ಬಣದ ಹೆಸರನ್ನು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು 'ಶಿವಸೇನೆ-ಬಾಳಾಸಾಹೇಬ್ ಠಾಕ್ರೆ ಬಣ' (Shiv Sena (Balasaheb)) ಎಂಬ ಹೆಸರನ್ನು ಇಡಲು ನಿರ್ಧರಿಸಿದೆ. ಸದ್ಯ ಸುಮಾರು 40 ಶಾಸಕರು ಈ ಬಂಡಾಯ ಪಾಳೆಯದಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಹೀಗಾಗಿ, ಶಿಂಧೆ ಬೆಂಬಲಿಗರು ಈ ಹೆಸರಿನ ಬಗ್ಗೆ ಔಪಚಾರಿಕ ಘೋಷಣೆಯನ್ನು ಶೀಘ್ರದಲ್ಲೇ ಮಾಡಬಹುದು.
ಇದನ್ನೂ ಓದಿ : "ಮೋದಿ, ಶಿವನು ವಿಷ ಕುಡಿದಂತೆ ನೋವು ಸಹಿಸಿಕೊಂಡಿದ್ದರು"
ಎರಡು ಭಾಗವಾಗಲಿದೆ ಶಿವಸೇನೆ ತಜ್ಞರ ಪ್ರಕಾರ, ಈಗ ಶಿವಸೇನೆಯು ಬಾಳಾಸಾಹೇಬ್ ಬಣ ಮತ್ತು ಇನ್ನೊಂದು (ಉದ್ಧವ್) ಬಣ ಎಂದು ಎರಡು ಭಾಗಗಳಾಗಿ ವಿಭಜನೆಯಾಗಲಿದೆ ಎಂಬುದು ಈ ಹೆಸರಿನಿಂದ ಸ್ಪಷ್ಟವಾಗಿದೆ. ಈ ಮೂಲಕ ಹೆಚ್ಚೆಚ್ಚು ಶಿವಸೇನೆ ಕಾರ್ಯಕರ್ತರು, ನಾಯಕರು ತಮ್ಮ ಬಣದೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುತ್ತಾರೆ ಎಂದು ಏಕನಾಥ್ ಶಿಂಧೆ ಬಣ ಊಹಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.