ನವದೆಹಲಿ: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿರುವ 750 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆಯುತ್ತಿದ್ದು, ಆಯಾ ಸ್ಥಾನಗಳಿಂದ ನೇರ ಅಥವಾ ತ್ರಿಕೋನ ಸ್ಪರ್ಧೆಗಳಲ್ಲಿ ಲಾಕ್ ಆಗಿರುವ ಅಭ್ಯರ್ಥಿಗಳ ಭವಿಷ್ಯವನ್ನು ಈಗ ಇವಿಎಮ್ ಗಳಲ್ಲಿ ಭದ್ರವಾಗಿದೆ.
ಸಂಜೆ 5 ಗಂಟೆಗೆ, ಈ ಕೆಳಗಿನ ರಾಜ್ಯಗಳಲ್ಲಿ ಅಸ್ಸಾಂ (78.94%), ಕೇರಳ (69.95%), ತಮಿಳುನಾಡು (63.47%), ಪಶ್ಚಿಮ ಬಂಗಾಳ (77.68%), ಮತ್ತು ಪುದುಚೇರಿ (77.90%) ರಷ್ಟು ಮತದಾನ ದಾಖಲಾಗಿದೆ.
ಇದನ್ನೂ ಓದಿ: WB, Assam Polling:ಇಂದು ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ
ಬಂಗಾಳದಲ್ಲಿ, ಟಿಎಂಸಿ ನಾಯಕ ಗೌತಮ್ ಘೋಷ್ ಅವರ ನಿವಾಸದಲ್ಲಿ ಮೂರು ಇವಿಎಂಗಳು ಮತ್ತು ನಾಲ್ಕು ವಿವಿಪಿಎಟಿ ಯಂತ್ರಗಳು ಪತ್ತೆಯಾದ ನಂತರ ಚುನಾವಣಾ ಆಯೋಗವು ವಲಯದ ಅಧಿಕಾರಿಯನ್ನು ಅಮಾನತುಗೊಳಿಸಿತು.
ಇದನ್ನೂ ಓದಿ: West Bengal Assembly Election 2021: ರಾಂಪುರದಲ್ಲಿ ಬಾಂಬ್ ಸ್ಫೋಟ, 6 ಬಿಜೆಪಿ ಕಾರ್ಯಕರ್ತರಿಗೆ ಗಾಯ
ಏತನ್ಮಧ್ಯೆ, ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡ ಸುಜಾತಾ ಮೊಂಡಾಲ್ ಅವರನ್ನು ಮತದಾನ ಕೇಂದ್ರವೊಂದರ ಬಳಿ ಬೆನ್ನಟ್ಟಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಈ ವಿಚಾರವಾಗಿ ಗಮನ ಹರಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.