ನವದೆಹಲಿ: ಲೋಕಸಭಾ ಚುನಾವಣೆ 2019 ರ ಸಿದ್ಧತೆಗಳ ಪಟ್ಟಿಯಲ್ಲಿ ಹೊಸ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಫೇಸ್ ಬುಕ್ ನಲ್ಲಿ ಶೇರ್ ಆದ ಕೇವಲ ಒಂದು ಗಂಟೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಹಂಚಿಕೊಂಡಿದ್ದಾರೆ. ಈ ವೀಡಿಯೊವು ತಂದೆಯ ಮತ್ತು ಮಗನ ನಡುವೆ ಬರುವ ಲೋಕಸಭಾ ಚುನಾವಣೆಗಳ ಬಗ್ಗೆ ಸಂಭಾಷಣೆಯನ್ನು ತೋರಿಸುತ್ತದೆ. ಇದು ಮಧ್ಯಮ ವರ್ಗದ ಕುಟುಂಬದೊಂದಿಗೆ ಬೆಳಿಗ್ಗೆ ಪ್ರಾರಂಭವಾಗಿದೆ. ಈ ವಿಡಿಯೋದಲ್ಲಿ ತಾಯಿ ದೇವಸ್ಥಾನಕ್ಕೆ ತೆರಳಲು ಸಿದ್ಧರಾಗುತ್ತಿದ್ದಾರೆ. ತಂದೆ ಡೈನಿಂಗ್ ಟೇಬಲ್ ಮೇಲೆ ಪತ್ರಿಕೆ ಓದುತ್ತಿದ್ದಾರೆ. ಅದೇ ವೇಳೆ ಅವರ ಮಗ (ಇನ್ನೂ 18 ವರ್ಷ ವಯಸ್ಸಿನವನು) ಬೆಳಿಗ್ಗೆ 10 ಗಂಟೆಗೆ ಎದ್ದು ಆಗಮಿಸುತ್ತಾನೆ.
ತಂದೆ ತಡವಾಗಿ ಬಂದ ಮಗನನ್ನೇ ನೋಡುತ್ತಾ ಗಡಿಯಾರದಲ್ಲಿ ಕಣ್ಣಾಯಿಸುತ್ತಾನೆ. ತಂದೆ ತಡವಾಗಿ ಬಂದ ಮಗನಿಗೆ ಏನನ್ನೋ ಹೇಳಲು ಬಯಸುತ್ತಾರೆ,ಅಷ್ಟರಲ್ಲಿ ತಾಯಿ ಅವರನ್ನು ತಡೆಯುತ್ತಾಳೆ. ಬಳಿಕ ಆಕೆ ದೇವಸ್ಥಾನಕ್ಕೆ ತೆರಳುತ್ತಾರೆ. ಬಳಿಕ ಅಪ್ಪ-ಮಗನ ನಡುವೆ ಸಂಭಾಷಣೆ ನಡೆಯುತ್ತದೆ. ನೀವೂ ಈ ವಿಡಿಯೋವನ್ನು ವೀಕ್ಷಿಸಿ...
ಈ ವೀಡಿಯೊವನ್ನು ಪ್ರಧಾನಿ ಮೋದಿ ಅವರ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿಗೆ ಮತ ಚಲಾಯಿಸಲು ಯುವ ಮತದಾರರಿಗೆ ಮನವಿ ಮಾಡಲಾಗಿದೆ.