ಕೊನೆಗೂ 280 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಬಂದಿಳಿದ ಫ್ರಾನ್ಸ್ ವಶದಲ್ಲಿದ್ದ ವಿಮಾನ!

Human Trafficking: ಮಾನವ ಕಳ್ಳ ಸಾಗಾಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಪ್ಯಾರಿಸ್ (ಫ್ರಾನ್ಸ್‌) ವಶದಲ್ಲಿದ್ದ ವಿಮಾನ ಇಂದು (ಮಂಗಳವಾರ) 280 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ತಲುಪಿದೆ...

Written by - Savita M B | Last Updated : Dec 26, 2023, 01:45 PM IST
  • ಮಾನವ ಕಳ್ಳ ಸಾಗಾಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಪ್ಯಾರಿಸ್ (ಫ್ರಾನ್ಸ್‌) ವಶದಲ್ಲಿದ್ದ ವಿಮಾನ
  • ಪ್ಯಾರಿಸ್ (ಫ್ರಾನ್ಸ್‌) ವಶದಲ್ಲಿದ್ದ ವಿಮಾನ ಇಂದು (ಮಂಗಳವಾರ) 280 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ತಲುಪಿದೆ...
 ಕೊನೆಗೂ 280 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಬಂದಿಳಿದ ಫ್ರಾನ್ಸ್ ವಶದಲ್ಲಿದ್ದ ವಿಮಾನ!   title=

Mumbai news: ಈ ಏರ್‌ಬಸ್ A340 ವಿಮಾನವು ಸೋಮವಾರ ಮಧ್ಯಾಹ್ನ 2:20 ಕ್ಕೆ ಮುಂಬೈ ತಲುಪಬೇಕಿತ್ತು.. ಆದರೆ ಅದು ತಡವಾಗಿ ಅಂದರೆ 4 ಗಂಟೆಗೆ ಮುಂಬೈ ವಿಮಾನ ನಿಲ್ದಾಣ ತಲುಪಿತು... ಫ್ರಾನ್ಸ್‌ನಿಂದ ಭಾರತಕ್ಕೆ ಬಂದು ತಲುಪಿದ ಈ ವಿಮಾನದಲ್ಲಿದ್ದ 50 ಪ್ರಯಾಣಿಕರು ಫ್ರಾನ್ಸ್‌ನಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ ಕಾರಣ ಹಿಂತಿರುಗಿಲ್ಲ ಎನ್ನಲಾಗಿದ್ದು.. ಆದರೆ 276 ಭಾರತೀಯ ಪ್ರಯಾಣಿಕರು ಸ್ವದೇಶಕ್ಕೆ ಬಂದು ಸೇರಿದ್ದಾರೆ ಎಂದು ವರದಿಯಾಗಿದೆ.. 

ರೊಮೇನಿಯಾದ ಲೆಜೆಂಡ್ ಏರ್‌ಲೈನ್ಸ್‌ನ ಈ ವಿಮಾನ ಒಟ್ಟು 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದು.. ಅದರಲ್ಲಿ ಹೆಚ್ಚಿನವರು ಭಾರತಿಯರೇ ಎಂದು ಹೇಳಲಾಗಿದೆ.. ಈ ವಿಮಾನ ದುಬೈನಿಂದ ನಿಕರಾಗುವಾಗೆ ಹೊರಟು  ವತ್ರಿ ವಿಮಾನ ನಿಲ್ದಾಣದಲ್ಲಿ ತೈಲ ತುಂಬಲು ನಿಲ್ಲಿಸಿದ ಸಮಯದಲ್ಲಿ ಫ್ರೆಂಚ್ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.. 

ಇದನ್ನೂ ಓದಿ-ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಅತಿಥಿ: ಭಾರತದ ರಫೇಲ್, ನ್ಯೂಕ್ಲಿಯರ್ ಗುರಿ ಸಾಧನೆಗೆ ಫ್ರಾನ್ಸ್ ಸ್ನೇಹದ ಶಕ್ತಿ

ಹೌದು ಆ ವಿಮಾನದಲ್ಲಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಫ್ರೆಂಚ್ ಅಧಿಕಾರಿಗಳಿಗೆ ಬಂದಿತ್ತು.. ಹೀಗಾಗಿ ವಿಮಾನವನ್ನು ಟೇಕ್ ಆಫ್ ಮಾಡುವುದನ್ನು ತಡೆಹಿಡಿಯಲಾಗಿದ್ದು.. ವಿಚಾರಣೆ ನಡೆಸಿದ ನಂತರ ಫ್ರೆಂಚ್ ಅಧಿಕಾರಿಗಳು ಈ ವಿಮಾನಕ್ಕೆ ಪ್ರಯಾಣವನ್ನು ಪುನರಾರಂಭಿಸಲು ಅನುಮತಿ ನೀಡಿದ್ದಾರೆ.. 

ಇದನ್ನೂ ಓದಿ-ಜಿರಳೆಗೂ ‘ಬಂಗಾರದ ಬೆಲೆ’... ಈ ಮಾರ್ಕೆಟ್’ನಲ್ಲಿ ಜಿರಳೆ ಮಾರಿದ್ರೆ ಸಿಗುತ್ತೆ ಲಕ್ಷ ಲಕ್ಷ ದುಡ್ಡು!

ಇನ್ನು ಆ ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಮಧ್ಯ ಅಮೆರಿಕದ ನಿಕರಾಗುವಾಗೆ ತಮ್ಮ ಪ್ರಯಾಣ ಮುಂದುವರೆಸಲು ಬಯಸಿದ್ದರಿಂದ ವಾಪಸಾತಿಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿದೆ.. 

ಮಾನವ ಕಳ್ಳಸಾಗಣೆ ಶಂಕೆಯಿಂದ ನಿಲ್ಲಿಸಲಾಗಿದ್ದ ಈ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ವತ್ರಿ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ಹಾಸಿಗೆ, ಶೌಚಾಲಯ ಮತ್ತು ಸ್ನಾನ ಮಾಡುವ ಸೌಲಭ್ಯ ಅಲ್ಲದೇ ಬಿಸಿ ಪಾನೀಯಗಳ ಜೊತೆಗೆ ಆಶ್ರಯ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News