ಹೈದರಾಬಾದ್ನ ಪ್ರಖ್ಯಾತ ಅನ್ನಪೂರ್ಣ ಸ್ಟುಡಿಯೋದಲ್ಲಿ ಸೋಮವಾರ ಅಗ್ನಿ ಅನಾಹುತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ತೆಲುಗು ಚಿತ್ರರಂಗದ ಪ್ರಸಿದ್ಧ ನಟ ನಾಗಾರ್ಜುನ ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ 1975ರಲ್ಲಿ ತಮ್ಮ ಪತ್ನಿಯ ಹೆಸರಿನಲ್ಲಿ ಈ ಸ್ಟುಡಿಯೋವನ್ನು ನಿರ್ಮಿಸಿದರು. ಈ ಸ್ಟುಡಿಯೋದಲ್ಲಿ ಅಕ್ಕಿನೇನಿ ಅವರ ಹಲವಾರು ಚಿತ್ರಗಳು ಪ್ರದರ್ಶನಗೊಂಡಿವೆ. ಈ ಸ್ಟುಡಿಯೋವು ಪ್ರಸ್ತುತ ವೆಂಕಟ್ ಮತ್ತು ನಾಗಾರ್ಜುನ ಇಬ್ಬರ ಒಡೆತನದಲ್ಲಿದೆ.
Hyderabad: Fire broke out in Annapurna studios in Banjara Hills. Four fire tenders at the spot pic.twitter.com/lbY1M0fp0T
— ANI (@ANI) November 13, 2017