Daily GK Quiz: ಕೃಷಿಕರಿಗೆ ದೀರ್ಘಾವಧಿ ಸಾಲ ನೀಡುವ ಬ್ಯಾಂಕ್ ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Dec 3, 2024, 05:19 PM IST
  • ತಾಳಗುಂದ ಶಾಸನದಲ್ಲಿ ಯಾರನ್ನು ಕದಂಬ ಕುಟುಂಬದ ಭೂಷಣ ಎಂದು ಕರೆಯಲಾಗಿದೆ?
  • ಜಹಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಜಮನೆತನದ ರಾಯಭಾರಿ ಯಾರು?
  • 1687ರಲ್ಲಿ ಮೊಘಲ್ ಸೇನಾನಿಯಿಂದ ಬೆಂಗಳೂರನ್ನು ವಶಪಡಿಸಿಕೊಂಡ ಮೈಸೂರಿನ ದೊರೆ ಯಾರು?
Daily GK Quiz: ಕೃಷಿಕರಿಗೆ ದೀರ್ಘಾವಧಿ ಸಾಲ ನೀಡುವ ಬ್ಯಾಂಕ್ ಯಾವುದು..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಯೂರೋಪಿಯನ್ನರು ಭಾರತಕ್ಕೆ ಪರಿಚಯಿಸಿದ ಪ್ರಮುಖ ಬೆಳೆ ಯಾವುದು..?

ಉತ್ತರ: ಮೆಕ್ಕೆ ಜೋಳ

ಪ್ರಶ್ನೆ 2: ಭಾರತದಲ್ಲಿ ನೀರಾವರಿಯ ಮುಖ್ಯ ಆಕರ ಯಾವುದು..?

ಉತ್ತರ: ಕೊಳವೆ ಬಾವಿಗಳು ಸೇರಿದಂತೆ ಇತರ ಬಾವಿಗಳು

ಪ್ರಶ್ನೆ 3: 1687ರಲ್ಲಿ ಮೊಘಲ್ ಸೇನಾನಿಯಿಂದ ಬೆಂಗಳೂರನ್ನು ವಶಪಡಿಸಿಕೊಂಡ ಮೈಸೂರಿನ ದೊರೆ ಯಾರು?

ಉತ್ತರ: ಚಿಕ್ಕದೇವರಾಜ ಒಡೆಯರ್

ಪ್ರಶ್ನೆ 4: ಕೃಷಿಕರಿಗೆ ದೀರ್ಘಾವಧಿ ಸಾಲ ನೀಡುವ ಬ್ಯಾಂಕ್ ಯಾವುದು?

ಉತ್ತರ: ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್

ಪ್ರಶ್ನೆ 5: ಮಹಿಳೆ ಮತ್ತು ಅಭಿವೃದ್ಧಿಗಾಗಿ ಮಾತ್ರ ರೂಪಿಸಲಾಗಿದ್ದ ಯೋಜನೆ ಯಾವುದು?

ಉತ್ತರ: DWACRA (ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ)

ಇದನ್ನೂ ಓದಿ: Daily GK Quiz: ಕರ್ನಾಟಕದ ಪ್ರಥಮ ಚುನಾಯಿತ ಮುಖ್ಯಮಂತ್ರಿ ಯಾರು..?

ಪ್ರಶ್ನೆ 6: ಭಾರತದಲ್ಲಿ ಸ್ಥಾಪಿತವಾದ ಮೊದಲ ಸಹಕಾರ ಸಂಘ ಯಾವುದು..?

ಉತ್ತರ: ಪತ್ತಿನ ಸಹಕಾರಿ ಸಂಘ

ಪ್ರಶ್ನೆ 7: ಭಾರತದ ಏಕೀಕರಣ ಕಾರ್ಯದಲ್ಲಿ ಸರ್ದಾರ್ ಪಟೇಲರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು ಯಾರು?

ಉತ್ತರ: ವಿ.ಪಿ.ಮೆನನ್

ಪ್ರಶ್ನೆ 8: ಜಹಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಜಮನೆತನದ ರಾಯಭಾರಿ ಯಾರು?

ಉತ್ತರ: ಥಾಮಸ್ ರೋ

ಪ್ರಶ್ನೆ 9: ಸುಲ್ತಾನ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು?

ಉತ್ತರ: ಗುಲಾಮಿ

ಪ್ರಶ್ನೆ 10: ತಾಳಗುಂದ ಶಾಸನದಲ್ಲಿ ಯಾರನ್ನು ಕದಂಬ ಕುಟುಂಬದ ಭೂಷಣ ಎಂದು ಕರೆಯಲಾಗಿದೆ?

ಉತ್ತರ: ಕಾಕುಸ್ಥ ವರ್ಮ

ಇದನ್ನೂ ಓದಿ: Daily GK Quiz: ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಥಮ ಸಂಸದ ಯಾರು..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News