ದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, 84 ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ತಡರಾತ್ರಿ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಹಿರಿಯ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಕುಲದೀಪ್ ಬಿಷ್ಣೋಯ್ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಗಾರ್ಹಿ ಸಂಪ್ಲಾ-ಕಿಲೋಯಿ ಕ್ಷೇತ್ರದಿಂದ ಹೂಡಾ, ಕೈತಾಲ್ನಿಂದ ಸುರ್ಜೆವಾಲಾ ಮತ್ತು ಅಡಾಂಪುರದ ಬಿಷ್ಣೋಯ್ ಮತ್ತು ಪಂಚಕುಲದಿಂದ ಅವರ ಸಹೋದರ ಚಂದ್ರ ಮೋಹನ್ ಸ್ಪರ್ಧಿಸಲಿದ್ದಾರೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಕರ್ನಾಲ್ ನಿಂದ ಪಕ್ಷವು ತಾರ್ಲೋಚನ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ.
INC COMMUNIQUE
The Central Election Committee has selected following candidates for the ensuing general elections to the Legislative Assembly of HARYANA. pic.twitter.com/sgAvNzI5jP
— INC Sandesh (@INCSandesh) October 2, 2019
ಇವರಲ್ಲದೆ ತೋಶಮ್ ನಿಂದ ಕಿರಣ್ ಚೌಧರಿ, ಕಲ್ಕಾದಿಂದ ಪ್ರದೀಪ್ ಚೌಧರಿ, ಗುಹ್ಲಾದಿಂದ ದಿಲ್ಲು ರಾಮ್, ಬರೋಡಾದಿಂದ ಕ್ರಿಶನ್ ಹೂಡಾ, ಜಿಂದ್ ನಿಂದ ಅನ್ಶುಲ್ ಸಿಂಗಲಾ, ಸಿರ್ಸಾದಿಂದ ಹೊಶಿಯಾರಿ ಲಾಲ್ ಶರ್ಮಾ, ಹನ್ಸಿಯಿಂದ ಓಂ ಪ್ರಕಾಶ್ ಪಂಗಲ್, ಹಿಸಾರ್ ನಿಂದ ರಾಮ್ ನಿವಾಸ ರಾಡಾ ಮತ್ತು ಫರಿದಾಬಾದ್ನಿಂದ ಲಖನ್ ಕುಮಾರ್ ಸಿಂಗ್ಲಾ ಸ್ಪರ್ಧಿಸಲಿದ್ದಾರೆ.
ಹರಿಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಉಳಿದ 6 ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಪಕ್ಷ ತಿಳಿಸಿದೆ.