ಹರಿಯಾಣದ ಈ ಮತದಾನ ಕೇಂದ್ರದಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ

ಈ ಮತಗಟ್ಟೆಗೆ ಭೇಟಿ ನೀಡಿದ ಮತದಾರರನ್ನು ತಿಲಕವಿಟ್ಟು ಸ್ವಾಗತಿಸಲಾಯಿತು.

Last Updated : Oct 21, 2019, 12:29 PM IST
ಹರಿಯಾಣದ ಈ ಮತದಾನ ಕೇಂದ್ರದಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ title=

ಸೋನಿಪತ್: 2019 ರ ಹರಿಯಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಸೋನಿಪತ್‌ನಲ್ಲಿರುವ ಬೂತ್ ಸಂಖ್ಯೆ 108 ಮತ್ತು 109 ರ ಮಾದರಿ ಮತದಾನ ಕೇಂದ್ರದಲ್ಲಿ ಗುಲಾಬಿ ಮೂಲಕ ಮತದಾರರನ್ನು ಸ್ವಾಗತಿಸಲಾಗುತ್ತಿದೆ. ಈ ಮತಗಟ್ಟೆಗೆ ಬರುವ ಮತದಾರರಿಗಾಗಿ ರೆಡ್ ಕಾರ್ಪೆಟ್ ಕೂಡ ಹಾಕಲಾಗಿದೆ.

ಸೋನಿಪತ್‌ನ ಲಿಟಲ್ ಏಂಜಲ್ಸ್ ಶಾಲೆಯಲ್ಲಿ ಮಾಡೆಲ್ ಪೋಲಿಂಗ್ ಬೂತ್(ಮಾದರಿ ಮತಗಟ್ಟೆ) ಸ್ಥಾಪಿಸಲಾಗಿದ್ದು, ಬೂತ್ ಸಂಖ್ಯೆ 108 ಮತ್ತು 109ರಲ್ಲಿ ಮತದಾರರು ಬೆಳಿಗ್ಗೆ ಏಳು ಗಂಟೆಯಿಂದಲೇ ಬಹಳ ಉತ್ಸುಕರಾಗಿ ಬರುತ್ತಿರುವ ದೃಶ್ಯ ಕಂಡು ಬಂದಿದೆ. ಈ ಮತಗಟ್ಟೆಯಲ್ಲಿ ಮತದಾರರಿಗೆ ವಿಶೇಷವಾಗಿ ರೆಡ್ ಕಾರ್ಪೆಟ್ ಹಾಕಲಾಗಿದ್ದು, ಬ್ಯಾನರ್ ಹಾಕುವ ಮೂಲಕ ಮತದಾನದ ಹಕ್ಕಿನ ಸಂದೇಶವನ್ನು ನೀಡಲಾಗಿದೆ. ಇದೊಂದು ವಿಶೇಷ ಅನುಭವ ನೀಡುತ್ತಿದೆ ಎಂದು ಮತದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾದರಿ ಮತದಾನ ಕೇಂದ್ರದ ಪ್ರವೇಶದ್ವಾರದಲ್ಲಿ ಸ್ವಾಗತ ದ್ವಾರವನ್ನು ಸ್ಥಾಪಿಸಲಾಗಿದೆ. ಜೊತೆಗೆ ಪ್ರವೇಶದ್ವಾರದಲ್ಲಿ ಸ್ವಾಗತ ಫ್ಲೆಕ್ಸ್ ಫಲಕಗಳನ್ನು ನಿರ್ಮಿಸಲಾಗಿದೆ. ಮತದಾರನು ಸ್ವಾಗತ ದ್ವಾರವನ್ನು ತಲುಪಿದಾಗ, ಶಾಲಾ ವಿದ್ಯಾರ್ಥಿಗಳಿಂದ ವಿಶೇಷವಾಗಿ ತಿಲಕ ಮತ್ತು ಬ್ಯಾಡ್ಜ್‌ನೊಂದಿಗೆ ಮತದಾರರನ್ನು ಸ್ವಾಗತಿಸಲಾಗುತ್ತಿದೆ. ಬ್ಯಾಡ್ಜ್  ನಲ್ಲಿ ನಾನು ಹರಿಯಾಣಕ್ಕೆ ಮತ ಹಾಕಿದ್ದೇನೆ ಎಂದು ಹೆಮ್ಮೆಪಡುತ್ತೇನೆ ಎಂದು ಬರೆಯಲಾಗಿದೆ.  ಇದಲ್ಲದೆ ಮತದಾನ ಪ್ರದೇಶದಲ್ಲಿ ಲಘು ಸಂಗೀತ ಮತ್ತು ದೇಶಭಕ್ತಿ ಗೀತೆಗಳು ಮನೆಮಾಡಿವೆ.

ಇದಕ್ಕೂ ಪಿಎಂ ನರೇಂದ್ರ ಮೋದಿ ಟ್ವೀಟ್ ಮಾಡಿ ಮತದಾರರಿಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಎಲ್ಲಾ ಮತದಾರರು ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವದ ಈ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅವರು ಟ್ವೀಟ್ ನಲ್ಲಿ ಬರೆದಿದ್ದಾರೆ.

Trending News