ಅಹ್ಮದಾಬಾದ್: ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಇಂದು ದೇಶದ ಪ್ರಥಮ ಬುಲೆಟ್ ರೈಲಿಗೆ ಅಡಿಗಲ್ಲು ಹಾಕುವ ಮೂಲಕ ಚಾಲನೆ ದೊರೆಯಲಿದೆ.
ಹೈ-ಸ್ಪೀಡ್ ರೈಲು ಯೋಜನೆಯ ಮುಖ್ಯಾಂಶಗಳು:
* ಬುಲೆಟ್ ರೈಲು ಗಂಟೆಗೆ 320ಕಿ.ಮೀ ವೇಗವಾಗಿ ಚಲಿಸುತ್ತದೆ. ಗರಿಷ್ಠ ಮಿತಿ 350ಕಿ.ಮೀ ವರೆಗೂ ಸಂಚರಿಸಬಲ್ಲದು.
* 508 ಕಿ.ಮೀ ಉದ್ದದ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ 1,10,000 ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ.
* ಸಾಮಾನ್ಯವಾಗಿ ಬುಲೆಟ್ ರೈಲಿನಲ್ಲಿ 750 ಪ್ರಯಾಣಿಕರು ಸಂಚರಿಸಲು ಅನುಕೂಲಕರವಾದ 10 ಕೋಚ್ಗಳು ಇರುತ್ತವೆ. ಆದರೆ ಭಾರತದ ಮೊದಲ ಬುಲೆಟ್ ರೈಲಿನಲ್ಲಿ 1,250 ಪ್ರಯಾಣಿಕರು ಒಟ್ಟಿಗೆ ಸಂಚರಿಸಲು ಅನುಕೂಲವಾಗುವಂತಹ 16 ಕೋಚ್ಗಳಿಗೆ ಪ್ರಸ್ತಾವನೆ ಸಲ್ಲಿಸಲ್ಲಾಗಿದೆ.
* ಈ ಯೋಜನೆಗಾಗಿ 825 ಹೆಕ್ಟೇರ್ ಭೂಮಿಯನ್ನು ರೈಲ್ವೆಗಳಿಗೆ ಮಾತ್ರ ಅಗತ್ಯವಿರುತ್ತದೆ. ಮಾರ್ಗದಲ್ಲಿ ಶೇ. 92 ರಷ್ಟು ಏರಿಕೆಯಾಗಲಿದೆ. ಆರು ಶೇಕಡಾ ಸುರಂಗಗಳ ಮೂಲಕ ಹೋಗಲಿದೆ ಮತ್ತು ಉಳಿದ ಎರಡು ಶೇಕಡಾ ಮಾತ್ರ ನೆಲದ ಮೇಲೆ ಇರುತ್ತದೆ.
* ಹೆಚ್ಚಿನ ವೇಗದ ರೈಲು 21 ಕಿ.ಮೀ ಉದ್ದದ ದೇಶದ ದೊಡ್ಡ ಸುರಂಗಮಾರ್ಗದಲ್ಲಿ ಹಾದು ಹೋಗುತ್ತದೆ, ಅದರಲ್ಲಿ ಏಳು ಕಿ.ಮೀ ಸಮುದ್ರದ ಕೆಳಗಿರುತ್ತದೆ.
* ಜಪಾನ್ ಈ ಯೋಜನೆಯನ್ನು ಪ್ರಾಯೋಜಿಸಲು ಮತ್ತು ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಲು ಸಹ ಸಿದ್ಧವಾಗಿದೆ.
* ಅಹಮದಾಬಾದ್-ಮುಂಬೈ ಮಾರ್ಗದಲ್ಲಿ ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಪಿ, ಬಿಲಿಮೊರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರ್ಮತಿ ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ಪ್ರಸ್ತಾವಿಸಲಾಗಿದೆ.
* ಈ ಲಿಂಕ್ ನಲ್ಲಿ 351 ಕಿ.ಮೀ. ಪ್ರದೇಶವು ಗುಜರಾತ್ ನ ಮೂಲಕ ಮತ್ತು 156 ಕಿ.ಮೀ. ಪ್ರದೇಶವು ಮಹಾರಾಷ್ಟ್ರದ ಮೂಲಕ ಹಾದುಹೋಗುತ್ತದೆ.
* ಹೊಸದಾಗಿ ನೇಮಕಗೊಂಡಿರುವ ರೈಲ್ವೆ ಸಚಿವ ಪಿಯುಶ್ ಗೋಯಲ್ ಅವರು ಹೈಸ್ಪೀಡ್ ಬುಲೆಟ್ ಟ್ರೈನ್ನ ಶುಲ್ಕ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.