ಬಿಲ್ ಪಾವತಿಸಿಲ್ಲವೆಂದು ರೋಗಿಯನ್ನು ಆಸ್ಪತ್ರೆಯಲ್ಲೇ ಉಳಿಸುವ ಹಾಗಿಲ್ಲ -ಬಾಂಬೆ ಹೈಕೋರ್ಟ್

     

Last Updated : Jan 13, 2018, 06:36 PM IST
ಬಿಲ್ ಪಾವತಿಸಿಲ್ಲವೆಂದು ರೋಗಿಯನ್ನು ಆಸ್ಪತ್ರೆಯಲ್ಲೇ ಉಳಿಸುವ ಹಾಗಿಲ್ಲ -ಬಾಂಬೆ ಹೈಕೋರ್ಟ್  title=

ನವದೆಹಲಿ: ಆಸ್ಪತ್ರೆಯ ಬಿಲ್ ಪಾವತಿಸಿಲ್ಲ ಎಂದು ರೋಗಿಗಳನ್ನು ದವಾಖಾನೆಯಲ್ಲಿಯೇ ಉಳಿಸಿಕೊಳ್ಳುವ ಹಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಎಲ್ಲ ಆಸ್ಪತ್ರೆಗಳಿಗೆ ತಾಕೀತು ಮಾಡಿದೆ.

ಈ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ವಿಚಾರಣೆಗೆ ತೆಗೆದುಕೊಂಡ ಎಸ್.ಸಿ.ಧರ್ಮಾಧಿಕಾರಿ ಮತ್ತು ಭಾರತಿ ದಾಂಗ್ರೆ ಪೀಠ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಇಲಾಖೆಗೆ ತನ್ನ ವೆಬ್ ಸೈಟ್ ನಲ್ಲಿ ರೋಗಿಗಳ ಹಕ್ಕುಗಳ ಕುರಿತಾಗಿ ಪ್ರಕಟಿಸಬೇಕೆಂದು ಅದು ಆದೇಶ ನೀಡಿದೆ. ಆ ಮೂಲಕ ರೋಗಿಗಳ ಹಕ್ಕುಗಳನ್ನು ಉಲ್ಲಂಘಿಸಿದ ಆಸ್ಪತ್ರೆಗಳ ವಿರುದ್ದ ಕ್ರಮ ತೆಗೆದುಕೊಳ್ಳಲು ಈ ಆದೇಶ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ವಿಚಾರಣೆಯ ವೇಳೆಯಲ್ಲಿ ಪೀಠವು  ಅದೇಗೆ ಆಸ್ಪತ್ರೆಗಳು ಆರೋಗ್ಯವಂತ ಎಂದು ಘೋಷಿಸಿರುವ  ವ್ಯಕ್ತಿಯನ್ನು ಗುಣಮುಖವಾದ ನಂತರ ಉಳಿಸಿಕೊಳ್ಳುತ್ತದೆ ಮತ್ತು ಬಿಲ್ ನೀಡಿಲ್ಲವೆನ್ನುವ ಕಾರಣದಿಂದಾಗಿ ಅದೇಗೆ ರೋಗಿಯನ್ನು ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಿರುವ ಪೀಠವು ಈ ರೀತಿಯ ಆಸ್ಪತ್ರೆಯ ಕ್ರಮವು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರವನ್ನು ಕಬಳಿಸುತ್ತದೆ ಎಂದು ಕೋರ್ಟ್ ತೀರ್ಪು ನೀಡಿದೆ.

ಇದೆ ಸಂದರ್ಭದಲ್ಲಿ ಆಸ್ಪತ್ರೆಗಳ ವಿರುದ್ದ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಕೋರ್ಟ್ ತಿರಸ್ಕರಿಸಿದೆ.ಅಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ಸರ್ಕಾರದ ಕೆಲಸ ಎಂದು ಅಭಿಪ್ರಾಯಪಟ್ಟಿದೆ.

Trending News