ಪೋಲಿಸ್ ಮುಖಸ್ಥರು ರಾಜಕಾರಣಿಗಳ ಜೊತೆ ಧರಣಿ ಕುಳಿತುಕೊಳ್ಳುತ್ತಾರೆಂದರೆ ಏನರ್ಥ? ರವಿಶಂಕರ್ ಪ್ರಸಾದ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತಾರೆ ಎಂದರೆ ಏನರ್ಥ? ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. 

Last Updated : Feb 4, 2019, 06:19 PM IST
ಪೋಲಿಸ್ ಮುಖಸ್ಥರು ರಾಜಕಾರಣಿಗಳ ಜೊತೆ ಧರಣಿ ಕುಳಿತುಕೊಳ್ಳುತ್ತಾರೆಂದರೆ ಏನರ್ಥ? ರವಿಶಂಕರ್ ಪ್ರಸಾದ್ title=

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತಾರೆ ಎಂದರೆ ಏನರ್ಥ? ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. 

ಈಗ ಈ ಧರಣಿ ಸತ್ಯಾಗ್ರಹಕ್ಕೆ ಪೋಲಿಸರು ಕೂಡ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ರವಿಶಂಕರ್ ಪ್ರಸಾದ್ ಕೆಂಡಾಮಂಡಲವಾಗಿದ್ದಾರೆ." ಏನಾಗುತ್ತಿದೆ? ಪೋಲಿಸ್ ಕಮಿಷನರ್ ರಾಜಕಾರಣಿಗಳ ಜೊತೆ ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಂಡಿದ್ದಾರೆ? ಇದರರ್ಥವೇನು? ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವ ಮೂಲಕ ಪ.ಬಂಗಾಳ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹಾದಿಯನ್ನು ತುಳಿದಿದ್ದಾರೆ" ಎಂದು ಮಮತಾ ಬ್ಯಾನರ್ಜಿ ನಡೆಗೆ ಕೇಂದ್ರ ಸಚಿವರು ಕಿಡಿಕಾರಿದ್ದಾರೆ.

ಇದೇ ವೇಳೆ ಮಮತಾ ನಡೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ನೀಡಿರುವುದಕ್ಕೆ ಅವರನ್ನು ರವಿಶಂಕರ್ ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ. ಮಮತಾ ಬ್ಯಾನರ್ಜೀ ಅವರ ಮೇಲೆ ಬಂದಿರುವ  ಶಾರದಾ ಮತ್ತು ರೋಸ್ ವ್ಯಾಲಿ ಹಗರಣಗಳ ಆರೋಪದ ವಿಚಾರಣೆಗಳು ನರೇಂದ್ರ ಮೋದಿ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲು ಇವೆ ಎಂದರು.

Trending News