ನಾವು ಅಧಿಕಾರಕ್ಕೆ ಬಂದರೆ ಮೋದಿ ಮಾರ್ಕೆಟಿಂಗ್ ಗಷ್ಟೇ ಸೀಮಿತವಿರುವ ನೀತಿ ಆಯೋಗವನ್ನು ರದ್ದುಪಡಿಸುತ್ತೇವೆ-ರಾಹುಲ್ ಗಾಂಧಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇವಲ ಪ್ರಧಾನಿ ಮೋದಿ ಮಾರ್ಕೆಟಿಂಗ್ ಗಷ್ಟೇ ಸೀಮಿತವಾಗಿರುವ ನೀತಿ ಆಯೋಗವನ್ನು ರದ್ದು ಪಡಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಈ ನೀತಿ ಆಯೋಗದ ಬದಲು ಈ ಹಿಂದಿನ ಯೋಜನಾ ಆಯೋಗವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

Last Updated : Mar 30, 2019, 02:08 PM IST
ನಾವು ಅಧಿಕಾರಕ್ಕೆ ಬಂದರೆ ಮೋದಿ ಮಾರ್ಕೆಟಿಂಗ್ ಗಷ್ಟೇ ಸೀಮಿತವಿರುವ ನೀತಿ ಆಯೋಗವನ್ನು ರದ್ದುಪಡಿಸುತ್ತೇವೆ-ರಾಹುಲ್ ಗಾಂಧಿ  title=

ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇವಲ ಪ್ರಧಾನಿ ಮೋದಿ ಮಾರ್ಕೆಟಿಂಗ್ ಗಷ್ಟೇ ಸೀಮಿತವಾಗಿರುವ ನೀತಿ ಆಯೋಗವನ್ನು ರದ್ದು ಪಡಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಈ ನೀತಿ ಆಯೋಗದ ಬದಲು ಈ ಹಿಂದಿನ ಯೋಜನಾ ಆಯೋಗವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಈಗ ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ " ಒಂದು ವೇಳೆ ಅಧಿಕಾರಕ್ಕೆ ಬಂದರೆ ನಾವು ನೀತಿ ಆಯೋಗವನ್ನು ರದ್ದುಪಡಿಸುತ್ತೇವೆ.ಇದರಿಂದ ಪ್ರಧಾನಿ ಮೋದಿ ಮಾರ್ಕೆಟಿಂಗ್ ನಿರೂಪಣೆ ಮಾಡುವುದನ್ನು ಬಿಟ್ಟರೆ ಯಾವುದೇ ಉದ್ದೇಶವು ಈಡೇರುತ್ತಿಲ್ಲ" ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.ಇನ್ನು ಮುಂದುವರೆದು " ನಾವು ನೀತಿ ಆಯೋಗದ ಬದಲು ಯೋಜನಾ ಆಯೋಗವನ್ನು ಜಾರಿಗೆ ತರುತ್ತೇವೆ ಇದರಲ್ಲಿ ಪ್ರಮುಖ ಆರ್ಥಿಕ ತಜ್ಞರನ್ನು ಒಳಗೊಂಡ 100ಕ್ಕೂ  ಕಡಿಮೆ ಸಿಬ್ಬಂಧಿ ಇದರಲ್ಲಿ ಇರುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದಕ್ಕೂ ಮೊದಲು ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಾರ್ಷಿಕವಾಗಿ ಬಡವರಿಗೆ 72.000 ರೂಗಳ ಸಹಾಯಧನವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು.ಇದಾದ ಬೆನ್ನಲ್ಲೇ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ಯೋಜನೆ ಬಗ್ಗೆ ಕಿಡಿ ಕಾರಿದ್ದರು.ಈ ಹಿನ್ನಲೆಯಲ್ಲಿ ಈಗ ರಾಹುಲ್ ಗಾಂಧಿ ನೀತಿ ಆಯೋಗವನ್ನು ರದ್ದು ಪಡಿಸಿ ಅರ್ಥಿಕ ತಜ್ನರನ್ನೋಳಗೊಂಡ ಯೋಜನಾ ಆಯೋಗವನ್ನು ಜಾರಿಗೆ ತರಲಾಗುವುದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇನ್ನೊಂದೆಡೆ ರಾಹುಲ್ ಗಾಂಧಿಯವರ ಟ್ವೀಟ್ ಗೆ ತೀರುಗೇಟು ನೀಡಿರುವ ಬಿಜೆಪಿಯ ವಿಕೆ ಸಿಂಗ್ ಯೋಜನಾ ಆಯೋಗದ ಪರಿಣಾಮದ ಕುರಿತು ಪ್ರಶ್ನಿಸಿದ್ದಾರೆ.60 ವರ್ಷಗಳ ಕಾಲ ಜಾರಿಯಲ್ಲಿದ್ದರೂ ಕೂಡ ಅದು ಹೆಚ್ಚೇನೂ ಪರಿಣಾಮವನ್ನುಂಟು ಮಾಡಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

 

Trending News