ನವದೆಹಲಿ: ದೇಶದ ವಿವಿಧೆಡೆ ರೈಲ್ವೆ ದುರಸ್ತಿ ಕಾರ್ಯಾಚರಣೆ ಕಾರಣದಿಂದಾಗಿ ಭಾರತೀಯ ರೈಲ್ವೆ ಭಾನುವಾರ 300ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಿ ಪ್ರಕಟಣೆ ಹೊರಡಿಸಿದೆ.
ರದ್ದುಗೊಂಡ ರೈಲುಗಳಲ್ಲಿ ಹೆಚ್ಚಿನವು ಪ್ರಯಾಣಿಕ ರೈಲುಗಳಾಗಿದ್ದು, ಗೂಡ್ಸ್, ಎಕ್ಸಪ್ರೆಸ್
ರೈಲು'ಗಳೊಂದಿಗೆ ಕೆಲವು ವಿಶೇಷ ರೈಲುಗಳನ್ನೂ ರದ್ದುಗೊಳಿಸಲು ನಿರ್ಧರಿಸಲಾಗಿದೆ. ವಿವಿಧ ರೈಲು ಮಾರ್ಗಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ರೈಲು ಸಂಚಾರ ನಿರ್ಬಂಧಿಸಲಾಗಿದೆ. ರದ್ದು ಮಾಡಲಾಗಿರುವ ರೈಲುಗಳ ವಿವರಗಳನ್ನು ರೈಲ್ವೆ ವೆಬ್ಸೈಟ್ https://enquiry.indianrail.gov.inನಲ್ಲಿ ಪ್ರಕಟಿಸಲಾಗಿದೆ.
ರಿಸರ್ವೇಶನ್ ಟಿಕೆಟ್'ಗಳ ಪೂರ್ಣ ಹಣ ವಾಪಸ್
ರೈಲ್ವೆ ಇಲಾಖೆ ರದ್ದು ಮಾಡಿರುವ ರೈಲುಗಳ ಸಂಪೂರ್ಣ ವಿವರಗಳನ್ನು 139ಗೆ ಕರೆ ಮಾಡಿಯೂ ಸಹ ತಿಳಿದುಕೊಳ್ಳಬಹುದು. ಒಂದು ವೇಳೆ ನೀವು ಈಗಾಗಲೇ ರದ್ದಾದ ರೈಲುಗಳ ಪ್ರಯಾಣಕ್ಕಾಗಿ ಟಿಕೆಟ್ ರಿಸರ್ ಮಾಡಿದ್ದರೆ, ಅದನ್ನು ಕ್ಯಾನ್ಸಲ್ ಮಾಡಿ ಪೂರ್ಣ ಹಣ ಮರುಪಾವತಿಯಾಗಲಿದೆ.