ನವದೆಹಲಿ: ದೇಶದ ಮೂಲೆ ಮೂಲೆಯಲ್ಲೂ ಇಂಟರ್ನೆಟ್ ಕಲ್ಪಿಸಬಲ್ಲ ಭಾರತದ ಅತಿದೊಡ್ಡ ಉಪಗ್ರಹ ಜಿಸ್ಯಾಟ್ -11 ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಜಿಸ್ಯಾಟ್ -11 ನ್ನು ಫ್ರೆಂಚ್ ಗಯಾನಾದಿಂದ ಆಯರಿಯಾನ್-5 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಅತ್ಯಂತ ದೈತ್ಯ ಮತ್ತು ಹೆಚ್ಚು ತೂಕದ ಉಪಗ್ರಹ ಇದಾಗಿದ್ದು, ಇದು 5,854 ಕೆ.ಜಿ. ತೂಕವಿದೆ. ಇಷ್ಟು ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ರಾಕೆಟ್ ಇಸ್ರೊ ಬಳಿ ಇಲ್ಲವಾದ್ದರಿಂದ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆಯರಿಯಾನ್-5 ರಾಕೆಟ್ ಮೂಲಕ ಉಡಾವಣೆ ಮಾಡಲಾಗಿದೆ.
Update #4#ISROMissions
Here's the video of #Ariane5 VA-246 lift off from Kourou Launch Base early today morning carrying India's #GSAT11 and South Korea’s GEO-KOMPSAT-2A satellites, as scheduled.
Video: @Arianespace pic.twitter.com/h0gjApbHHd
— ISRO (@isro) December 5, 2018
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಿಸ್ಯಾಟ್ -11 ದೇಶದಲ್ಲಿ ಬ್ರಾಡ್ಬ್ಯಾಂಡ್ ಸೇವೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಇಂಟರ್ನೆಟ್ ವೇಗವನ್ನು ಹೆಚ್ಚಿಸುವುದು ಇದರ ಉದ್ದೇಶ. ಇದರ ಅಡಿಯಲ್ಲಿ, ಮೂರು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ 18 ತಿಂಗಳಲ್ಲಿ ಕಳುಹಿಸಬೇಕು. ಕಳೆದ ವರ್ಷ ಜೂನ್ನಲ್ಲಿ ಮೊದಲ ಉಪಗ್ರಹ ಜಿಸಾಟ್ -19 ಅನ್ನು ಯಶಸ್ವಿಯಾಗಿ ಉಡಾಯಿಸಲಾಗಿದ್ದರೆ, ಜಿಸ್ಯಾಟ್-29 ಅನ್ನು ಇದೇ ನವೆಂಬರ್ 14ರಂದು ಕಕ್ಷೆಗೆ ಸೇರಿಸಲಾಗಿತ್ತು. GSAT-11 ಇದೀಗ ಉಡಾವಣೆಗೊಂಡಿದೆ. ಇದರ ನಂತರ, ಶೀಘ್ರದಲ್ಲೇ GSAT-20 ಅನ್ನು ಉಡಾವಣೆ ಮಾಡಲು ಯೋಜಿಸಿದೆ.
ಈ ಬದಲಾವಣೆಯ ನಂತರ, ನೀವು ಒಂದು ಸೆಕೆಂಡ್ನಲ್ಲಿ ಮೂರು ಜಿಬಿಗಳ ಮೂರು ಚಿತ್ರಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ,ಭಾರತ್ ನೆಟ್ ಯೋಜನೆ ಅಡಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಬ್ರಾಡ್ಬ್ಯಾಂಡ್ ಸಂಪರ್ಕ 16 ಜಿಬಿಪಿಎಸ್ ವೇಗದಲ್ಲಿ ಲಭ್ಯವಾಗಲಿದೆ.
GSAT-11 ವಿಶೇಷ ಲಕ್ಷಣಗಳು:
- GSAT-11 ಅಂತರ್ಜಾಲದ ವೇಗವನ್ನು ಹೆಚ್ಚಿಸುತ್ತದೆ.
- ಇದು 5,854 ಕೆ.ಜಿ. ತೂಕವಿದೆ.
- ಈ ಉಪಗ್ರಹದ ಲೈಫ್ 15 ವರ್ಷಗಳಿಗಿಂತ ಹೆಚ್ಚು.
- GSAT-11 ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಪ್ರತಿ ಸೆಕೆಂಡಿಗೆ 100 ಗಿಗಾಬೈಟ್ಗಳಷ್ಟು ಒದಗಿಸುತ್ತದೆ. ಇದು ದೇಶದಲ್ಲಿ ಇಂಟರ್ನೆಟ್ ಕ್ರಾಂತಿಯನ್ನು ತರುವುದು.