ಪಾಕುರ್ ಜಿಲ್ಲೆ: ಜಾರ್ಖಂಡ್ ರಾಜ್ಯದಲ್ಲಿ ಶಾಸಕರ ಉಪಸ್ಥಿತಿಯಲ್ಲೆಯೇ ಬುಡಕಟ್ಟು ಜನಾಂಗದ ಸದಸ್ಯರ ಚುಂಬನ ಸ್ಪರ್ಧೆ ನಡೆದಿದ್ದು ಹಲವಾರು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.
ಈ ಘಟನೆಯು ಜಾರ್ಖಂಡ್ನ ಪಾಕುರ್ ಜಿಲ್ಲೆಯ ಲಿಟ್ಟಿಪರಾ ಬ್ಲಾಕ್ನಲ್ಲಿ ನಡೆದ ಸಿಡೋ-ಕನು ಉತ್ಸವದದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು . ಶಾಸಕರೇ ಈ ಸ್ಪರ್ಧೆಯ ರೂವಾರಿಗಳು ಎಂದು ತಿಳಿದು ಬಂದಿದೆ.
ಈ ಚುಂಬನ ಸ್ಪರ್ಧೆಯಲ್ಲಿ ಭಾಗವಹಿಸಿದವರು ಬಹುತೇಕ ಬುಡಕಟ್ಟು ಜನಾಂಗದವರಿಂದ ಮದುವೆಯಾದರು ಎಂದು ಪ್ರಭಾತ್ ಖಬರ್ ವರದಿ ಮಾಡಿದೆ. ಜಾನಪದ ನೃತ್ಯ ಗಾಯನ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಒಳಗೊಂಡಿರುವ ಈ ಸಿಡೋ-ಕನು ಉತ್ಸವವನ್ನು ಪ್ರತಿ ವರ್ಷ ಈ ಭಾಗದ ಶಾಸಕ ಸೈಮನ್ ಮರಾಂಡಿ ಅವರು ಆಯೋಜಿಸುತ್ತಾರೆ. ಜಾರ್ಖಂಡ್ ಮುಕ್ತಿ ಮೋರ್ಚಾದ ಶ್ಯಾಮ್ ಯಾದವ್ ಸೇರಿದಂತೆ ಹಲವಾರು ರಾಜಕಾರಣಿಗಳು ಇದನ್ನು ಪಾಲ್ಗೊಂಡಿದ್ದರು ಎಂದು ಪ್ರಭಾತ್ ಖಬರ್ ವರದಿ ಮಾಡಿದೆ.