ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗದ ಸಿದ್ಧತೆ ಹೇಗಿದೆ ಗೊತ್ತಾ?

ಏಪ್ರಿಲ್ 11 ರಿಂದ ಪ್ರಾರಂಭವಾಗುವ ಲೋಕಸಭಾ ಚುನಾವಣೆ ಒಟ್ಟು ಏಳು ಹಂತದಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.

Last Updated : Mar 10, 2019, 06:33 PM IST
ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗದ ಸಿದ್ಧತೆ ಹೇಗಿದೆ ಗೊತ್ತಾ? title=

ನವದೆಹಲಿ: ಏಪ್ರಿಲ್ 11 ರಿಂದ ಪ್ರಾರಂಭವಾಗುವ ಲೋಕಸಭಾ ಚುನಾವಣೆ ಒಟ್ಟು ಏಳು ಹಂತದಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಜಗತ್ತಿನ ಅತಿ ದೊಡ್ಡ ಸಾರ್ವತ್ರಿಕ ಚುನಾವಣೆಯ ದಿನಾಂಕ ವನ್ನು ಘೋಷಣೆ ಮಾಡಿರುವ ಚುನಾವಣಾ ಆಯೋಗ, ಮತದಾನದ ದಿನಾಂಕವನ್ನು ಘೋಷಣೆ ಮಾಡಿದ ತಕ್ಷಣವೇ ಅದು ಚುನಾವಣಾ ನೀತಿ ಸಂಹಿತೆಯನ್ನು ಜಾರಿ ಮಾಡಿದೆ.ಈ ಬಾರಿ ಚುನಾವಣೆಯಲ್ಲಿ ಒಟ್ಟು 10 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದೆ.

ಈ ಬಾರಿಯ ಚುನಾವಣೆಯಲ್ಲಿ ಆಯೋಗ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.ಅದರ ಪ್ರಕಾರವಾಗಿ ಸೋಶಿಯಲ್ ಮೀಡಿಯಾದ ವೇದಿಕೆಗಳು ಕೂಡ ಚುನಾವಣಾ ಆಯೋಗದ ಜೊತೆಗೆ ಕೈ ಜೋಡಿಸಿ ನಕಲಿ ಸುದ್ದಿಗಳನ್ನು ತಡೆಯಲು  ವಿಶೇಷ ಶೆಲ್ ವೊಂದನ್ನು ತೆರೆದಿವೆ ಎಂದು ಸುನಿಲ್ ಆರೋರಾ ತಿಳಿಸಿದರು.

ಮತಯಂತ್ರಗಳನ್ನು ಸಾಗಿಸುವ ಗಾಡಿಗಳಿಗೆ ಜಿಪಿಎಸ್ ಟ್ರಾಕರ್ಗಳನ್ನು ಅಳವಡಿಸಲಾಗುವುದು.ಎಲ್ಲ ಇವಿಎಮ್ ಗಳನ್ನು ಮತ್ತು ವಿವಿಪ್ಯಾಟ್ ಗಳನ್ನು ಸೂಕ್ಷ್ಮವಾಗಿ ನಿರ್ವಹಿಸಲಾಗುವುದು ಎಂದು ಹೇಳಿದರು.ಇದೇ ವೇಳೆ ಅವರು ಜಮ್ಮು ಕಾಶ್ಮೀರದ ವಿಧಾನಸಭೆ ಚುನಾವಣೆ ಲೋಕಸಭೆಯೊಂದಿಗೆ ನಡೆಯುವುದಿಲ್ಲ ಎಂದು ತಿಳಿಸಿದರು.

ಜೂನ್ 3 ರಂದು ಪ್ರಸಕ್ತ ಲೋಕಸಭಾ ಅವಧಿ ಮುಕ್ತಾಯಗೊಳ್ಳುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ 17ನೇ ಲೋಕಸಭೆಗಾಗಿ ದಿನಾಂಕವನ್ನು ಘೋಷಣೆ ಮಾಡಿದೆ.

 

Trending News