ನವದೆಹಲಿ: ಜನಸಾಮಾನ್ಯರಿಗೆ ಇನ್ನು ಮುಂದೆ ಅಡುಗೆಮನೆಯ ಬಜೆಟ್ ಹೆಚ್ಚಾಗಲಿದೆ. ಅನಿಲ ಕಂಪನಿಗಳು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಿವೆ. ಇಂದು ಫೆಬ್ರವರಿ 12 ರ ಬುಧವಾರದಿಂದ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳಲ್ಲಿ ಸುಮಾರು 150 ರೂಪಾಯಿಗಳ ಹೆಚ್ಚಳವಾಗಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14 ಕೆಜಿ ಇಂಡೇನ್ ಗ್ಯಾಸ್ ಸಿಲಿಂಡರ್ ಬೆಲೆ 144.50 ರೂ. ಏರಿಕೆಯಾಗಿ 858.50 ರೂ.ಗೆ ತಲುಪಿದೆ. ಜನವರಿ 1 ರಂದು ಇದರ ಬೆಲೆ ಪ್ರತಿ ಸಿಲಿಂಡರ್ಗೆ 714 ರೂ.
ದೇಶದ ದೊಡ್ಡ ಮಹಾನಗರಗಳ ಬಗ್ಗೆ ಮಾತನಾಡುವುದಾದರೆ, ಇಂಡಿಯನ್ ಆಯಿಲ್ನ ವೆಬ್ಸೈಟ್ ಪ್ರಕಾರ, ದೆಹಲಿಯಲ್ಲಿ 14 ಕೆಜಿ ಇಂಡೇನ್ ಗ್ಯಾಸ್ ಸಿಲಿಂಡರ್ ಬೆಲೆ 144.50 ರೂ. ಅಧಿಕವಾಗಿ 858.50 ರೂ.ಗೆ ಏರಿದೆ.
ಮುಂಬೈಯಲ್ಲಿ ಸಿಲಿಂಡರ್ನ ಬೆಲೆಯನ್ನು 145 ರೂ. ಹೆಚ್ಚಾಗಿ 829.50 ರೂ. ತಲುಪಿದ್ದರೆ, ಚೆನ್ನೈನಲ್ಲಿ 147 ರೂ. ಹೆಚ್ಚಾಗಿ 881ರೂ. ಮತ್ತು ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆಯನ್ನು 149 ರೂ. ಏರಿಕೆಯಾಗಿ 896 ರೂ.ಗೆ ಹೆಚ್ಚಿಸಲಾಗಿದೆ.
ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1466 ರೂ. ಕೋಲ್ಕತ್ತಾದಲ್ಲಿ ಈ ಸಿಲಿಂಡರ್ 1540 ರೂ, ಮುಂಬೈ 1416 ರೂ ಮತ್ತು ಚೆನ್ನೈ 1589 ರೂ. ಇದೆ.
6 ತಿಂಗಳಲ್ಲಿ 120 ರೂಪಾಯಿ ಹೆಚ್ಚಳವಾದ ಸಿಲಿಂಡರ್:
ಕಳೆದ 6 ತಿಂಗಳ ಬಗ್ಗೆ ಮಾತನಾಡುವುದಾದರೆ, ಜೂನ್ 1, 2019 ರಿಂದ 14 ಕೆಜಿ ಸಿಲಿಂಡರ್ಗಳ ಬೆಲೆ 8 ಬಾರಿ ಬದಲಾಗಿದೆ. ಈ ಸಿಲಿಂಡರ್ನ ಬೆಲೆ ಕಳೆದ ವರ್ಷ ಜೂನ್ನಲ್ಲಿ 737.50 ರೂ. ಒಟ್ಟಾರೆಯಾಗಿ, ಸಿಲಿಂಡರ್ನ ಬೆಲೆ 6 ತಿಂಗಳಲ್ಲಿ ಸುಮಾರು 120 ರೂಪಾಯಿಗಳಷ್ಟು ಹೆಚ್ಚಾಗಿದೆ.