ಸರ್ಕಾರಿ ನೌಕರರಿಗೆ ಹೊಸ ಡ್ರೆಸ್ ಕೋಡ್! ಜೀನ್ಸ್, ಟೀ ಶರ್ಟ್ ಧರಿಸಿ ಕಚೇರಿಗೆ ಬರುವಂತಿಲ್ಲ

ಸರ್ಕಾರಿ ನೌಕರರು ಯಾವ ರೀತಿ ಬಟ್ಟೆ ಧರಿಸಬೇಕು ಎಂದು ಡ್ರೆಸ್ ಕೋಡ್ ಬಿಡುಗಡೆ

Last Updated : Dec 12, 2020, 01:50 PM IST
  • ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರಿಗೆ ಡ್ರೆಸ್ ಕೋಡ್
  • ಸರ್ಕಾರಿ ನೌಕರರು ಯಾವ ರೀತಿ ಬಟ್ಟೆ ಧರಿಸಬೇಕು ಎಂದು ಡ್ರೆಸ್ ಕೋಡ್ ಬಿಡುಗಡೆ
  • ಅಧಿಕಾರಿಗಳು ಮತ್ತು ನೌಕರರ ಉಡುಪು ವೃತ್ತಿಪರವಾಗಿ ಇಲ್ಲದಿದ್ದರೆ ಅದರಿಂದ ಅವರ ಕೆಲಸದ ಮೇಲೆ ಪರೋಕ್ಷ ಪರಿಣಾಮ
ಸರ್ಕಾರಿ ನೌಕರರಿಗೆ ಹೊಸ ಡ್ರೆಸ್ ಕೋಡ್! ಜೀನ್ಸ್, ಟೀ ಶರ್ಟ್ ಧರಿಸಿ ಕಚೇರಿಗೆ ಬರುವಂತಿಲ್ಲ title=
File Image

ಮುಂಬೈ: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರಿಗೆ ಡ್ರೆಸ್ ಕೋಡ್ ಬಿಡುಗಡೆ ಮಾಡಿರುವ ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಕಛೇರಿಗಳಲ್ಲಿ ಜೀನ್ಸ್, ಟೀ ಶರ್ಟ್ ನಿಷೇಧಿಸಿದೆ. ಇದಲ್ಲದೆ ವಾರಕ್ಕೊಮ್ಮೆ ಖಾದಿ ಧರಿಸಲು ಸಿಬ್ಬಂದಿಗೆ ಸಲಹೆ ನೀಡಿದೆ.

ಅನೇಕ ಉದ್ಯೋಗಿಗಳು, ವಿಶೇಷವಾಗಿ ಗುತ್ತಿಗೆ ನೌಕರರು ಮತ್ತು ಸರ್ಕಾರಿ ಕೆಲಸಕ್ಕೆ (Government Job) ನೇಮಕಗೊಂಡ ಸಲಹೆಗಾರರು ಸೂಕ್ತವಲ್ಲದ ರೀತಿಯಲ್ಲಿ ಬಟ್ಟೆಗಳನ್ನು ಧರಿಸುತ್ತಾರೆ. ಇದು ಸರ್ಕಾರಿ ನೌಕರರ ಬಗ್ಗೆ ಜನರ ಮನಸ್ಸಿನಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಸಾಮಾನ್ಯ ಆಡಳಿತ ಇಲಾಖೆ ಡಿಸೆಂಬರ್ 8 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಕಚೇರಿಗಳಲ್ಲಿ ಜೀನ್ಸ್ (Jeans) ಮತ್ತು ಟೀ ಶರ್ಟ್ ಧರಿಸುವಂತಿಲ್ಲ ಎಂದು ನೌಕರರಿಗೆ ಆದೇಶಿಸಿದೆ.

ಇದರೊಂದಿಗೆ ಸರ್ಕಾರಿ ನೌಕರರು ಯಾವ ರೀತಿ ಬಟ್ಟೆ ಧರಿಸಬೇಕು ಎಂದು ಡ್ರೆಸ್ ಕೋಡ್ ಬಿಡುಗಡೆ ಮಾಡಿದ್ದು, ಮಹಿಳೆಯರು ಸೀರೆ, ಸಲ್ವಾರ್, ಚೂಡಿದಾರ್-ಕುರ್ತಾ ಧರಿಸಬಹುದು. ಅಗತ್ಯವಿದ್ದರೆ ದುಪಟ್ಟಾ ಧರಿಸಬೇಕು. ಪುರುಷರು ಔಪಚಾರಿಕ ಪ್ಯಾಂಟ್ ಮತ್ತು ಶರ್ಟ್ ಧರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ವಿದ್ಯಾರ್ಥಿನಿಯರ ತುಂಡು ಬಟ್ಟೆಗೆ ಬ್ರೇಕ್; ಈ ಮೆಡಿಕಲ್ ಕಾಲೇಜಿನಲ್ಲಿ ಸ್ಕರ್ಟ್, ಜೀನ್ಸ್ ಧರಿಸುವಂತಿಲ್ಲ!

ಅಲ್ಲದೆ ಖಾದಿಯನ್ನು ಉತ್ತೇಜಿಸುವ ಉದ್ದೇಶದಿಂದ ನೌಕರರು ಶುಕ್ರವಾರ ಖಾದಿ ಉಡುಪನ್ನು ಧರಿಸುವ ಅವಶ್ಯಕತೆಯಿದೆ ಎಂದು ಹೇಳಲಾಗಿದೆ. ಅಧಿಕಾರಿಗಳು ಮತ್ತು ನೌಕರರ ಉಡುಪು ಸೂಕ್ತವಾಗಿಲ್ಲದಿದ್ದರೆ ಮತ್ತು ವೃತ್ತಿಪರವಾಗಿ ಇಲ್ಲದಿದ್ದರೆ ಅದು ಅವರ ಕೆಲಸದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನ ಈ ದೇವಸ್ಥಾನಕ್ಕೆ ಮಿನಿಸ್ಕರ್ಟ್ ಧರಿಸಿ ಹೋಗುವಂತಿಲ್ಲ!

ಈ ರೀತಿ ಸರ್ಕಾರಿ ನೌಕರಿಗೆ ಡ್ರೆಸ್ ಕೋಡ್ (Dress Code) ಜಾರಿ ಮಾಡುತ್ತಿರುವುದು ಇದೇ ಮೊದಲ ರಾಜ್ಯವಲ್ಲ. ಇದಕ್ಕೂ ಮುನ್ನ ಕರ್ನಾಟಕ, ತಮಿಳುನಾಡು, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಲ್ಲಿ ಈ ನಿಯಮ ಜಾರಿಯಲ್ಲಿದೆ. 
 

Trending News