ನವದೆಹಲಿ: ಜೂನ್ 1 ರ ಸುಮಾರಿಗೆ ಕೇರಳಕ್ಕೆ ತಲುಪಬೇಕಾಗಿದ್ದ ಮಾನ್ಸೂನ್ ಜೂನ್ 6 ಕ್ಕೆ ದಕ್ಷಿಣ ಕರಾವಳಿಗೆ ಆಗಮಿಸಲಿದೆ ಎಂದು ಇಂದು ಹವಾಮಾನ ಇಲಾಖೆ ಹೇಳಿದೆ.
"ಪ್ರಸ್ತುತ, ಮಾನ್ಸೂನ್ ಅರೇಬಿಯನ್ ಸಮುದ್ರದ ಕೆಲವು ದಕ್ಷಿಣದ ಭಾಗವನ್ನು ಮತ್ತು ಬಂಗಾಳ ನೈರುತ್ಯ-ಆಗ್ನೇಯ-ಪೂರ್ವ ಕೇಂದ್ರದ ಭಾಗಗಳಾದ ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ಒಳಗೊಂಡಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ, ಅರೇಬಿಯನ್ ಸಮುದ್ರಕ್ಕೆ ಆವರಿಸುತ್ತದೆ ಎಂದು ಹವಾಮಾನ ಇಲಾಖೆಯ ಎಂ.ಮಹಾಪತ್ರಾ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶುಕ್ರವಾರವಷ್ಟೇ ಹವಾಮಾನ ಇಲಾಖೆ ಸಾಧಾರಣ ಮಾನ್ಸೂನ್ ಆಗಲಿದೆ ಎಂದು ಹೇಳಿದ ಬೆನ್ನಲ್ಲೇ ಈಗ ಮಾನ್ಸೂನ್ ಪ್ರವೇಶದ ಬಗ್ಗೆ ಖಚಿತ ಪಡಿಸಿದೆ.ಮಾನ್ಸೂನ್ ಮಳೆ ಸುದೀರ್ಘಾವಧಿಯ ಸರಾಸರಿ 96 ರಷ್ಟು (LPA) ನಿರೀಕ್ಷಿಸಲಾಗಿದೆ ಎಂದು ಹವಾಮಾನ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಮಾನ್ಸೂನ್ ಋತುವಿನಲ್ಲಿ ದೇಶದ ವಾರ್ಷಿಕ ಮಳೆ ಶೇ 70 ರಷ್ಟು ಇದೆ, ಇದು ಕೃಷಿ ಕ್ಷೇತ್ರದ ಯಶಸ್ಸಿಗೆ ಪ್ರಮುಖವಾಗಿದೆ ಎನ್ನಲಾಗಿದೆ.
"ಈಶಾನ್ಯ ರಾಜ್ಯಗಳಲ್ಲಿ ಮತ್ತು ತೀವ್ರ ದಕ್ಷಿಣದ ಪರ್ಯಾಯ ದ್ವೀಪದ ಮೇಲೆ ಮುಂದಿನ 3-5 ದಿನಗಳ ಕಾಲ ಚಂಡಮಾರುತ ಚಟುವಟಿಕೆ ಮುಂದುವರಿಯಲಿದೆ" ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. "ದೆಹಲಿಯಲ್ಲಿ ಯಾವುದೇ ಮಳೆಯ ನಿರೀಕ್ಷೆ ಇಲ್ಲ, ಇಲ್ಲಿ ಗರಿಷ್ಟ ತಾಪಮಾನವು 46 ಡಿಗ್ರಿಗಳಷ್ಟಾಗಿದ್ದು, ಕ್ರಮೇಣ ಕೆಳಗಿಳಿಯಲಿದೆ" ಎಂದು ಮಹಾಪಾತ್ರಾ ಹೇಳಿದರು.