ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು ಇದೀಗ ವಾರೆನ್ ಬಫೇಗಿಂತ ಹೆಚ್ಚಾಗಿದೆ. ಬ್ಲೂಮ್‌ಬರ್ಗ್ ಬಿಲಿನರ್ಸ್ ಸೂಚ್ಯಂಕದ ಪ್ರಕಾರ, ಅಂಬಾನಿಯ ಸಂಪತ್ತು ಇದೀಗ US $ 68.3 ಬಿಲಿಯನ್ ಆಗಿದ್ದು, ಇದು ವಾರೆನ್ ಬಫೇ ಅವರ US $ 67.9 ಬಿಲಿಯನ್ ಗಿಂತ ಹೆಚ್ಚಾಗಿದೆ. ಬ್ಲೂಮ್‌ಬರ್ಗ್ ಪ್ರಕಾರ, ಮಾರ್ಚ್‌ನಲ್ಲಿನ ಪತನದ ನಂತರ ಅಂಬಾನಿಯ ಸಮೂಹ ಷೇರುಗಳು ದ್ವಿಗುಣಗೊಂಡಿವೆ, ಏಕೆಂದರೆ ಅವರ ಡಿಜಿಟಲ್ ಘಟಕ, ಫೇಸ್‌ಬುಕ್ ಇನ್ ಕಾರ್ಪೋರೇಶನ್ ಹಾಗೂ ಸಿಲ್ವರ್ ಲೇಕ್ ಸೇರಿದಂತೆ ವಿವಿಧ ಕಂಪನಿಗಳಿಂದ 15 ಬಿಲಿಯನ್ ಗಿಂದ ಹೆಚ್ಚಿನ ಮೌಲ್ಯದ ಹೂಡಿಕೆಯನ್ನು ಆಕರ್ಶಿಸಿದೆ.
ವಿಶ್ವದ ಟಾಪ್ 10 ಶ್ರೀಮಂತರ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಏಕಮಾತ್ರ ಭಾರತೀಯರು
ಇದೇ ವಾರದಲ್ಲಿ BP Plc, ರಿಲಯನ್ಸ್ ನ ಇಂಧನ ವ್ಯಾಪಾರದಲ್ಲಿ ಪಾಲುದಾರಿಕೆ ಪಡೆಯಲು ಒಂದು ಬಿಲಿಯನ್ ಡಾಲರ್ ಪಾವತಿಸಿದೆ. ಇದರಿಂದ ಅಂಬಾನಿ ಸಂಪತ್ತಿನಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ತಿಂಗಳವಷ್ಟೇ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಸೇರಿದ ಏಕಮಾತ್ರ ಭಾರತೀಯ ಮತ್ತು ಏಷ್ಯಾದ ಏಕಮಾತ್ರ ಉದ್ಯಮಿ ಎಂಬ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಪಾತ್ರರಾಗಿದ್ದರು. ಇದೇ ವೇಳೆ ವಾರೆನ್ ಬಫೇ ಅವರು ತಮ್ಮ ಆಸ್ತಿಯಲ್ಲಿ 2.9 ಬಿಲಿಯನ್ ಡಾಲರ್ ಆಸ್ತಿಯನ್ನು ಚ್ಯಾರಿಟಿ ಕಾರ್ಯಕ್ಕೆ ನೀಡಿದ ಕಾರಣ ಅವರ ಒಟ್ಟು ಆಸ್ತಿಯಲ್ಲಿ ಇಳಿಕೆಯಾಗಿದೆ.
89 ವರ್ಷದ ವಾರೆನ್ ಬಫೇ ಅವರನ್ನು Oracle of Omah ಎಂದು ಕರೆಯಲಾಗುತ್ತದೆ. 2006ರಲ್ಲಿ ಅವರು ಬರ್ಕ್ ಶೈರ್ ಹ್ಯಾತ್ ವೇ ಇನ್ ಕಾರ್ಪೋರೇಶನ್ ಕಂಪನಿಯ 37 ಬಿಲಿಯನ್ ಡಾಲರ್ ಗೂ ಅಧಿಕ ಮೌಲ್ಯದ ಷೇರುಗಳನ್ನು ದಾನದ ರೂಪದಲ್ಲಿ ನೀಡಿದ್ದರು. ಇದರಿಂದ ಶ್ರೇಯಾಂಕ ಪಟ್ಟಿಯಲ್ಲಿ ಅವರ ಸ್ಥಾನದಲ್ಲಿ ಇಳಿಕೆಯಾಗಿತ್ತು. ಇತ್ತೀಚಿಗೆ ಬರ್ಕ್ ಶೈರ್ ಹ್ಯಾತ್ ವೇ ಕಂಪನಿಯ ಶೇರುಗಳು ಉತ್ತಮ ಪ್ರದರ್ಶನ ನೀಡಿರಲಿಲ್ಲ.
ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕ ಪಟ್ಟಿಯಲ್ಲಿ ಅಂಬಾನಿ 8ನೇ ಸ್ಥಾನದಲ್ಲಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿನರ್ಸ್ ಸೂಚ್ಯಂಕದ ಪ್ರಕಾರ, 63 ವರ್ಷದ ಮಕೇಶ್ ಅಂಬಾನಿ ವಿಶ್ವದ ಎಂಟನೇ ಶ್ರೀಮಂತ ವ್ಯಕ್ತಿ ಮತ್ತು ಬಫೆಟ್ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಈ ಸೂಚ್ಯಂಕವು 2012 ರಲ್ಲಿ ಪ್ರಾರಂಭವಾಗಿದೆ. ಅಂಬಾನಿಯ ಒಪ್ಪಂದಗಳಿಂದಾಗಿ, ಎಂ & ಎ ವಿಭಾಗದಲ್ಲಿ ಭಾರತವು ಈ ವರ್ಷ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ. ಏಷ್ಯಾ ಪೆಸಿಫಿಕ್‌ನಲ್ಲಿ ಘೋಷಿಸಲಾದ ಒಪ್ಪಂದದಲ್ಲಿ ಶೇಕಡಾ 12 ಕ್ಕಿಂತ ಹೆಚ್ಚು ಪಾಲನ್ನು ಭಾರತ ಹೊಂದಿದೆ. ಈ ಅನುಪಾತವು 1998 ರ ನಂತರ ಅತಿ ಹೆಚ್ಚಿನ ಅನುಪಾತವಾಗಿದೆ.