ಮುಂಬೈ: ಇಲ್ಲಿನ ಡೋಂಗ್ರಿ ಪ್ರದೇಶದಲ್ಲಿ ಮಂಗಳವಾರ ಕುಸಿತಕ್ಕೊಳಗಾದ ನಾಲ್ಕು ಅಂತಸ್ತಿನ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಶತಮಾನಗಳಷ್ಟು ಹಳೆಯದಾದ ಕೇಸರ್ ಭಾಯ್ ಕಟ್ಟಡ ಮಂಗಳವಾರ ಕುಸಿತಗೊಂಡಿತ್ತು. ಬಳಿಕ ರಾತ್ರಿಯಿಡೀ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆಗಳು ನಡೆದ ಬಳಿಕ ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಗಾಯಗೊಂಡವರನ್ನು ನಗರದ ಜೆ.ಜೆ.ಆಸ್ಪತ್ರೆ ಮತ್ತು ಹಬೀಬ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನ ಕೇಸರ್ಭಾಯ್ ಕಟ್ಟಡ ಕುಸಿತ ಸ್ಥಳದಲ್ಲಿ ಎನ್ಡಿಆರ್ಎಫ್ ಪಡೆಯ ಶ್ವಾನದಳದ ಸಹಾಯದಿಂದ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.
#WATCH National Disaster Response Force (NDRF) carries out search operation with the help of sniffer dogs, at Kesarbhai building collapse site in Mumbai. pic.twitter.com/DAW5js9lCr
— ANI (@ANI) July 17, 2019
ಕಟ್ಟಡ ಸುಮಾರು 100 ವರ್ಷಗಳಷ್ಟು ಹಳೆಯದಾಗಿದ್ದು, ಅದನ್ನು ಖಾಲಿ ಮಾಡುವಂತೆ 2017ರಲ್ಲಿಯೇ ನೋಟಿಸ್ ನೀಡಲಾಗಿತ್ತಾದರೂ ಖಾಲಿ ಮಾಡಿರಲಿಲ್ಲ ಎನ್ನಲಾಗಿದೆ. ಈ ಕಟ್ಟಡದಲ್ಲಿ 16 ಕುಟುಂಬಗಳು ವಾಸವಿದ್ದು, ನೆಲಮಹಡಿಯಲ್ಲಿ 4 ಅಂಗಡಿಗಳೂ ಇದ್ದವು ಎನ್ನಲಾಗಿದೆ.