ನಿತಿನ್ ಗಡ್ಕರಿ ಅತಂತ್ರ ಲೋಕಸಭೆಗಾಗಿ ಕಾಯುತ್ತಿದ್ದಾರೆ-ಶಿವಸೇನಾ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅತಂತ್ರ ಲೋಕಸಭೆಗಾಗಿ ಕಾಯುತ್ತಿದ್ದಾರೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ತಿಳಿಸಿದ್ದಾರೆ.

Last Updated : Jan 7, 2019, 06:05 PM IST
ನಿತಿನ್ ಗಡ್ಕರಿ ಅತಂತ್ರ ಲೋಕಸಭೆಗಾಗಿ ಕಾಯುತ್ತಿದ್ದಾರೆ-ಶಿವಸೇನಾ title=

ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅತಂತ್ರ ಲೋಕಸಭೆಗಾಗಿ ಕಾಯುತ್ತಿದ್ದಾರೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ತಿಳಿಸಿದ್ದಾರೆ.

ಸಾಮ್ನಾ ಪತ್ರಿಕೆಯ ಕಾರ್ಯಕಾರಿ ಸಂಪಾದಕರೂ ಆಗಿರುವ ಸಂಜಯ್ ರಾವತ್ ತಮ್ಮ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕುಂದುತ್ತಿದ್ದು ರಾಹುಲ್ ಗಾಂಧಿಯವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.

ದೇಶವು ಅತಂತ್ರ ಫಲಿತಾಂಶದತ್ತ ಹೆಜ್ಜೆ ಇರಿಸಿದೆ, ಅದಕ್ಕೆ ಪ್ರಧಾನಿ ಮೋದಿಯೇ ಕಾರಣ. 2014 ರಲ್ಲಿ ಪ್ರಧಾನಿ ಮೋದಿಗೆ ಸಿಕ್ಕ ಅವಕಾಶ ವಿಫಲವಾಯಿತು ಎಂದಿದ್ದಾರೆ. 2014 ರಲ್ಲಿ ಕಾಂಗ್ರೆಸ್ ಸೋಲಿಸಬೇಕೆನ್ನುವ ಸಂಕಲ್ಪವೇ ಮೋದಿ ಅಲೆಗೆ ಕಾರಣವಾಗಿತ್ತು, ಆದರೆ ಈಗ ಆ ಚಿತ್ರಣ ಬದಲಾಗಿದೆ ಎಂದರು.

ಬಿಜೆಪಿಯಲ್ಲಿನ ಹಿರಿಯ ನಾಯಕರು ಮುಂಬರುವ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಬಹುದೆನ್ನುವ ಆತಂಕವಿದೆ. ಇದಕ್ಕೆ ಇತ್ತೀಚಿಗೆ ನಿತಿನ್ ಗಡ್ಕರಿ ನೀಡಿರುವ ಹೇಳಿಕೆ ಬದಲಾವಣೆಯ ಗಾಳಿ ಬಿಸುತ್ತಿರುವುದಕ್ಕೆ ನಿದರ್ಶನ ಎನ್ನಬಹುದು. ನಿತಿನ್ ಗಡ್ಕರಿ ಬಿಜೆಪಿ ಮತ್ತು ಆರೆಸೆಸ್ಸ್ ನಲ್ಲಿ ಒಪ್ಪಿತವಾಗಿರುವ ನಾಯಕ ಎಂದರು ರಾವತ್ ತಿಳಿಸಿದರು.

Trending News