ಇನ್ನು ಆರೋಗ್ಯ ಸೇತು ಆಪ್ ನಲ್ಲೂ ಸಿಗಲಿದೆ ಪ್ಲಾಸ್ಮಾ ಡೋನರ್ ಲಿಸ್ಟ್

ಪ್ಲಾಸ್ಮಾ ದಾನಿಗಳಿಗಾಗಿ  ಕರೋನಾದಿಂದ ಚೇತರಿಸಿಕೊಳ್ಳುವ ಜನರ ಡೇಟಾಬೇಸ್ ಆರೋಗ್ಯ ಸೇತು ಅಪ್ಲಿಕೇಶನ್ ಶೀಘ್ರದಲ್ಲೇ ಸಿಗಲಿದೆ.

Written by - Ranjitha R K | Last Updated : May 13, 2021, 04:56 PM IST
  • ಕೋವಿಡ್ -19 ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ ಆಗಿ ಆರೋಗ್ಯ ಸೇತು ಆಪ್ ಬಿಡುಗಡೆ
  • ಶೀಘ್ರದಲ್ಲೇ ಆರೋಗ್ಯ ಸೇತು ಆಪ್ ನಲ್ಲಿ ಪ್ಲಾಸ್ಮಾ ಡೋನರ್ ಬಗ್ಗೆಯೂ ಮಾಹಿತಿ
  • ಲಿಸ್ಟ್ ಇದೆಯೆಂದು ಪ್ಲಾಸ್ಮಾ ದಾನ ಮಾಡುವಂತೆ ಒತ್ತಡ ಹೇರುವಂತಿಲ್ಲ.
ಇನ್ನು ಆರೋಗ್ಯ ಸೇತು ಆಪ್ ನಲ್ಲೂ ಸಿಗಲಿದೆ ಪ್ಲಾಸ್ಮಾ ಡೋನರ್ ಲಿಸ್ಟ್   title=
ಶೀಘ್ರದಲ್ಲೇ ಆರೋಗ್ಯ ಸೇತು ಆಪ್ ನಲ್ಲಿ ಪ್ಲಾಸ್ಮಾ ಡೋನರ್ ಬಗ್ಗೆಯೂ ಮಾಹಿತಿ (file photo)

ನವದೆಹಲಿ : ಕೋವಿಡ್ -19 (Covid-19) ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ ಆಗಿ ಕಳೆದ ವರ್ಷ ಭಾರತ ಸರ್ಕಾರ ಆರೋಗ್ಯ ಸೇತು (Aarogya Setu)  ಆಪ್ ಬಿಡುಗಡೆ ಮಾಡಿತ್ತು.  ಈಗ ಲಸಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೂಡಾ ಈ ಆಪ್ ಬಳಸಲಾಗುತ್ತದೆ. ಇನ್ನು ಶೀಘ್ರದಲ್ಲೇ ಆರೋಗ್ಯ ಸೇತು ಆಪ್ ನಲ್ಲಿ ಪ್ಲಾಸ್ಮಾ ಡೋನರ್ (Plasma donor) ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ.  ಅಂದರೆ ಪ್ಲಾಸ್ಮಾ ಡೋನರ್ ಲಿಸ್ಟ್ ಆರೋಗ್ಯ ಸೇತುವಿನಲ್ಲಿ ಸಿಗಲಿದೆ. 

ಪ್ಲಾಸ್ಮಾ ದಾನಿಗಳಿಗಾಗಿ (Plasma donor) ಕರೋನಾದಿಂದ ಚೇತರಿಸಿಕೊಳ್ಳುವ ಜನರ ಡೇಟಾಬೇಸ್ ಆರೋಗ್ಯ ಸೇತು (Aarogya Setu)  ಅಪ್ಲಿಕೇಶನ್ ಶೀಘ್ರದಲ್ಲೇ ಸಿಗಲಿದೆ. ಆದರೆ ಲಿಸ್ಟ್ ಇದೆಯೆಂದು ಪ್ಲಾಸ್ಮಾ ದಾನ ಮಾಡುವಂತೆ ಯಾರ ಮೇಲೂ ಒತ್ತಡ ಹೇರುವಂತಿಲ್ಲ. ಪ್ಲಾಸ್ಮಾ ದಾನ ಮಾಡಲು ಇಚ್ಛಿಸುವವರಿಂದ ಮಾತ್ರ ಪ್ಲಾಸ್ಮಾ ಸ್ವೀಕರಿಸಬಹುದು. 

ಇದನ್ನೂ ಓದಿ : Maharashtra Extends Restrictions : ಜೂನ್ 1 ರವರೆಗೆ 'ಲಾಕ್​ಡೌನ್' ವಿಸ್ತರಣೆ..!

ಯಾರಾದರೂ ಸ್ವಯಂಪ್ರೇರಣೆಯಿಂದ ಪ್ಲಾಸ್ಮಾ (Plasma) ದಾನ ಮಾಡಲು ಸಿದ್ಧರಿದ್ದರೆ, ಅವರು ಆರೋಗ್ಯ ಸೇತು ಆ್ಯಪ್ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಬಹುದು.  ಪ್ಲಾಸ್ಮಾ ದಾನ ಡೇಟಾಬೇಸ್ ವೈಶಿಷ್ಟ್ಯದ ಬಗ್ಗೆ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ  ಬಂದಿಲ್ಲ. ಅಲ್ಲದೆ, ಪ್ಲಾಸ್ಮಾ ಡೋನೇಟ್ ಫೀಚರ್ ಅಪ್ಡೇಟ್ (Update) ಮಾಡುವ ನಿಖರವಾದ ದಿನಾಂಕವನ್ನು ಕೂಡಾ ಬಹಿರಂಗಪಡಿಸಿಲ್ಲ. 

ಆರೋಗ್ಯ ಸೇತು (Aarogya Setu)  ಅಪ್ಲಿಕೇಶನ್‌ ನಲ್ಲಿ ಇತ್ತೀಚೆಗಷ್ಟೇ  ಹಲವು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಈ ಆಪ್ ಮೂಲಕ ಈಗ, ಲಸಿಕೆಯ ಬಗ್ಗೆ, ಲಸಿಕಾ ಕೇಂದ್ರದ ಬಗ್ಗೆ ಮತ್ತು ಲಸಿಕೆಗಾಗಿ ನೋಂದಣಿ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈ ಆಪ್ ಮೂಲಕ ರಿಜಿಸ್ಟ್ರೇಷನ್ ಕೂಡಾ ಮಾಡಿಸಿಕೊಳ್ಳಬಹುದು. ಈಗ ಇದರಲ್ಲಿ ಕೋವಿನ್ ಪೋರ್ಟಲ್ ನ ಟ್ಯಾಬ್ ಅನ್ನು ಕೂಡಾ ಸೇರಿಸಲಾಗಿದೆ.  ಹಾಗಾಗಿ ಕೋವಿನ್ ಪೋರ್ಟಲ್ ನಲ್ಲಿ ಮಾಡುವ ಎಲ್ಲಾ ಕೆಲಸಗಳನ್ನು ಇದರಲ್ಲಿ ಮಾಡಬಹುದಾಗಿದೆ.  

ಇದನ್ನೂ ಓದಿ : COVID-19 : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3.62 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News