ನವದೆಹಲಿ: ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ಬ್ಲೂಮ್ ಬರ್ಗ್ ಬಿಲಿಯನರ್ ಇಂಡೆಕ್ಸ್ ನ ಪ್ರಕಾರ ಅಂಬಾನಿ ಒಟ್ಟು 44.3 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದರೆ, ಅಲಿಬಾಬಾ ಗ್ರೂಪ್ ನ ಮುಖ್ಯಸ್ತ ಜಾಕ್ ಮಾ ಅವರು 44 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ವರದಿ ಹೇಳುವಂತೆ ರಿಲಯನ್ಸ್ ನ ಸಂಪತ್ತಿನ ಏರಿಕೆಯಲ್ಲಿ 1.6 ರಷ್ಟು ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.
ಈ ವರ್ಷದ ಅವಧಿಯಲ್ಲಿ ಮುಖೇಶ್ ಅಂಬಾನಿ ಪೆಟ್ರೋ ಕೆಮಿಕಲ್ಸ್ ನಲ್ಲಿ ಹೆಚ್ಚಿನ ಹೂಡಿಕೆದಾರರು ಬಂದಿದ್ದರಿಂದಾಗಿ ಒಟ್ಟು 4 ಬಿಲಿಯನ್ ಡಾಲರ್ ಆಸ್ತಿ ಹೆಚ್ಚಳವಾಗಿದೆ.ಅಲ್ಲದೆ ಅಂಬಾನಿ ಪ್ರಮುಖವಾಗಿ ಈ ಜಿಯೋ ಮೂಲಕ ಟೆಲಿಕಾಂ ನಲ್ಲಿ ಅತಿ ಹೆಚ್ಚಿನ ರೆತಿಯ ಲಾಭವನ್ನು ಅವರು ಗಳಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಮುಂಬರುವ ದಿನಗಳಲ್ಲಿ ಈ ಕಾಮರ್ಸ್ ಅನ್ನು ಅಮೆಜಾನ್ ವಾಲ್ ಮಾರ್ಟ್ ರೀತಿಯಲ್ಲಿ ರಿಲಯನ್ಸ್ ಕೂಡ ವಿಸ್ತರಿಸುವ ಸಾಧ್ಯತೆಯನ್ನು ಅವರು ಇತ್ತೀಚೆಗಷ್ಟೇ ತಿಳಿಸಿದ್ದರು. ಮುಂಬೈ ಮೂಲದ ಕೆ.ಆರ್ ಚೋಸ್ಕೆ ಶೇರ್ ನ ಮ್ಯಾನೇಜಿಂಗ್ ಡೈರಕ್ಟರ್ ಹೇಳುವಂತೆ " ಜಿಯೋ ರಿಲಯನ್ಸ್ ಆದಾಯದಲ್ಲಿ ಪ್ರಮುಖ ಪಾತ್ರ ವಹಿಸಿದೆ" ಎನ್ನುತ್ತಾರೆ.