ನಮ್ಮ ಹೋರಾಟ ಆಕ್ರೋಶ ಮತ್ತು ಘನತೆಯಿಂದ ಕೂಡಿತ್ತು-ರಾಹುಲ್ ಗಾಂಧಿ

     

Last Updated : Dec 18, 2017, 06:02 PM IST
ನಮ್ಮ ಹೋರಾಟ ಆಕ್ರೋಶ ಮತ್ತು ಘನತೆಯಿಂದ ಕೂಡಿತ್ತು-ರಾಹುಲ್ ಗಾಂಧಿ title=

ನವದೆಹಲಿ: ಹಿಮಾಚಲ್ ಪ್ರದೇಶ ಮತ್ತು ಗುಜರಾತ್ ಚುನಾವಣೆಯ ಬಗ್ಗೆ ಪ್ರತಿಕ್ರಯಿಸಿರುವ ರಾಹುಲ್ ಗಾಂಧೀ, ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ತಮಗೆ ತೋರಿಸಿರುವ ಪ್ರೀತಿಗೆ ಅಭಾರಿಯಾಗಿದ್ದೇನೆ ಎಂದರು.

ಅಲ್ಲದೆ ತಾವು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎರಡು ದಿನಗಳ ನಂತರ ಬಂದಿರುವ ಈ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಟ್ವೀಟ್ ಮಾಡಿರುವ ಅವರು  ಕಾಂಗ್ರೆಸ್ ಪಕ್ಷವು  ಜನರ ನಿರ್ಧಾರವನ್ನು ಸ್ವೀಕರಿಸುತ್ತದೆ ಮತ್ತು ಎರಡು ರಾಜ್ಯಗಳಲ್ಲಿ ರಚನೆಯಾಗುವ ಸರ್ಕಾರಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಅಲ್ಲದೆ ಅಲ್ಲದೆ ಈ ಎರಡು ರಾಜ್ಯಗಳಲ್ಲಿ ಜನರು ತೋರಿಸಿದ ಪ್ರೀತಿಗೆ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈ ಎರಡು ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿರುವ ರಾಹುಲ್ ಗಾಂಧಿ  "ಕಾಂಗ್ರೆಸ್ ಪಕ್ಷದ ನನ್ನ ಸಹೋದರ ಸಹೋದರಿಯರೇ ನೀವು ನನ್ನನ್ನು ಹೆಮ್ಮೆ ಪಡುವಹಾಗೆ ಮಾಡಿದ್ದೀರಿ,ನೀವು ಖಂಡಿತ ಎಲ್ಲರಿಗಿಂತ ಭಿನ್ನ, ಕಾರಣ ,ನಿಮ್ಮ ಹೋರಾಟ ಅದು ಆಕ್ರೋಶ ಮಿಶ್ರಿತ ಘನತೆಯಿಂದ ಕೂಡಿತ್ತು .ಮತ್ತು ಎಲ್ಲ ಸಂಧರ್ಭದಲ್ಲಿ ನೀವು ಪ್ರತಿಯೊಬ್ಬರಿಗೂ ಕಾಂಗ್ರೆಸ್ ಪಕ್ಷದ ನಿಜವಾದ ಸಾಮರ್ಥ್ಯ ಸೌಮ್ಯತೆ ಮತ್ತು ಧೈರ್ಯ ಎಂದು ತೋರ್ಪಡಿಸಿದ್ದಿರಿ" ಎಂದು ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. 

Trending News