Pakistan Terrorist: 20 ವರ್ಷಗಳಲ್ಲಿ ಮೊದಲ ಬಾರಿಗೆ ಭಯೋತ್ಪಾದಕನ ಶವ ಸ್ವೀಕರಿಸಿದ ಪಾಕಿಸ್ತಾನ!

ಸೇನಾ ಪೋಸ್ಟ್ ಮೇಲೆ ದಾಳಿ ಮಾಡಲು ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಿದ್ದ ಉಗ್ರನನ್ನು ಭಾರತೀಯ ಸೇನೆ ಸೆರೆಹಿಡಿದಿತ್ತು.

Written by - Bhavishya Shetty | Last Updated : Sep 6, 2022, 11:57 AM IST
    • ಎರಡು ದಶಕಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನವು ಭಯೋತ್ಪಾದಕನ ಶವ ಸ್ವೀಕರಿಸಿದೆ
    • ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಗುಂಪಿನ ತರಬೇತಿ ಪಡೆದ ಏಜೆಂಟ್ ತಬಾರಕ್ ಹುಸೇನ್
    • ಗಡಿಯಲ್ಲಿ ಒಳನುಸುಳುತ್ತಿದ್ದ ವೇಳೆ ಸೆರೆ ಹಿಡಿದಿದ್ದ ಭಾರತೀಯ ಸೇನೆ
Pakistan Terrorist: 20 ವರ್ಷಗಳಲ್ಲಿ ಮೊದಲ ಬಾರಿಗೆ ಭಯೋತ್ಪಾದಕನ ಶವ ಸ್ವೀಕರಿಸಿದ ಪಾಕಿಸ್ತಾನ! title=
India Pakistan War

Pakistan: ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಹಲವು ಬಾರಿ ಸಾಬೀತಾದರೂ, ಸಾಕ್ಷ್ಯಾಧಾರಗಳು ಸರಿಯಾಗಿ ಇಲ್ಲ ಎಂದು ಹೇಳುತ್ತಾ ತಮ್ಮ ಮೇಲಿರುವ ಆರೋಪಗಳನ್ನು ಎಂದಿಗೂ ಒಪ್ಪಿಕೊಂಡಿರಲಿಲ್ಲ. ಆದರೆ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನವು ಸೋಮವಾರ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ತರಬೇತಿ ಪಡೆದ ಏಜೆಂಟ್ ಮತ್ತು ಮಾರ್ಗದರ್ಶಿಯ ದೇಹವನ್ನು ಸ್ವೀಕರಿಸಿದೆ. ಈ ಮೂಲಕ ಮೊದಲ ಬಾರಿಗೆ ಭಯೋತ್ಪಾದಕ ಕೃತ್ಯ ಎಸಗಿದ್ದೇವೆ ಎಂದು ಒಪ್ಪಿಕೊಂಡಂತಾಗಿದೆ. 

ಇದನ್ನೂ ಓದಿ: Viral Video : I LOVE YOU ಎಂದು ವರನಿಗೆ ಮುತ್ತಿಟ್ಟ ವಧು, ವರನನ್ನು ನೋಡಿ ದಂಗಾದ ಜನ

ಸೇನಾ ಪೋಸ್ಟ್ ಮೇಲೆ ದಾಳಿ ಮಾಡಲು ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಿದ್ದ ಉಗ್ರನನ್ನು ಭಾರತೀಯ ಸೇನೆ ಸೆರೆಹಿಡಿದಿತ್ತು.

ತಬಾರಕ್ ಹುಸೇನ್ (32) ರಜೌರಿ ಜಿಲ್ಲೆಯ ಮಿಲಿಟರಿ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದು, ಎರಡು ದಿನಗಳ ನಂತರ ಮೃತದೇಹವನ್ನು ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿಯ ಸಬ್ಜ್‌ಕೋಟ್ ಗ್ರಾಮದ ನಿವಾಸಿ ಹುಸೇನ್ ಕಳೆದ ತಿಂಗಳು ಗಡಿಯಿಂದ ಈ ಭಾಗಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಗುಂಡು ಹಾರಿಸಿದ್ದರು. ಇದರಿಂದ ಗಾಯಗೊಂಡ ಆತನಿಗೆ ಆಸ್ಪತ್ರೆಯಲ್ಲೇ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿತ್ತು. ಆತನನ್ನು ಬದುಕಿಸಲು ಸೇನೆಯ ಸೈನಿಕರು ಸಹ ರಕ್ತದಾನ ಮಾಡಿದರು, ಆದರೆ ಅವನು ಬದುಕುಳಿಯಲಿಲ್ಲ.

ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿರುವ ಚಕನ್ ದ ಬಾಗ್ ಅಡ್ಡರಸ್ತೆಯಲ್ಲಿ ಪೊಲೀಸರು ಮತ್ತು ನಾಗರಿಕ ಅಧಿಕಾರಿಗಳ ಸಮ್ಮುಖದಲ್ಲಿ ಭಾರತೀಯ ಸೇನೆ ಹುಸೇನ್ ಮೃತದೇಹವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ದಶಕಗಳ ನಂತರ ಪಾಕಿಸ್ತಾನ ಭಯೋತ್ಪಾದಕನ ಶವವನ್ನು ಸ್ವೀಕರಿಸಿದೆ. ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ತನ್ನ ನಾಗರಿಕರ ಶವಗಳನ್ನು ಸ್ವೀಕರಿಸಲು ಪಾಕಿಸ್ತಾನ ನಿರಾಕರಿಸುತ್ತಿತ್ತು.

ವಿಚಾರಣೆ ವೇಳೆ ಹಲವು ಬೆಳಕಿಗೆ ಬಂದ ಪ್ರಮುಖಾಂಶಗಳು:

ಸೇನೆಯ 80 ಪದಾತಿ ದಳದ ಕಮಾಂಡರ್, ಬ್ರಿಗೇಡಿಯರ್ ಕಪಿಲ್ ರಾಣಾ ಈ ಬಗ್ಗೆ ಮಾತನಾಡಿದ್ದು, “ಹುಸೇನ್ ಸೇರಿ ಇತರ ಇಬ್ಬರೊಂದಿಗೆ ಆಗಸ್ಟ್ 24 ರಂದು ಭಾರತೀಯ ಸೇನಾ ಪೋಸ್ಟ್ ಮೇಲೆ ದಾಳಿ ಮಾಡುವ ಯೋಜನೆಯನ್ನು ರೂಪಿಸಿದ್ದರು” ಎಂದು ಹೇಳಿದರು.

ಇದನ್ನೂ ಓದಿ: Fire Accident: ಲಕ್ನೋದ ಹೋಟೆಲ್ ನಲ್ಲಿ ಭಾರೀ ಅಗ್ನಿ ದುರಂತ: ಇಬ್ಬರು ಬಲಿ, ಕಾರ್ಯಾಚರಣೆ ಮುಂದುವರಿಕೆ

“ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಎಂಬಾತ ತನಗೆ 30,000 ರೂಪಾಯಿ (ಪಾಕಿಸ್ತಾನದ ಕರೆನ್ಸಿ) ಕೊಟ್ಟು ಕಳುಹಿಸಿದ್ದನೆಂದು ಹುಸೇನ್ ವಿಚಾರಣೆಯ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾನೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News