ಮಹಾ ಶಿವರಾತ್ರಿ ದಿನ ಮನೆಗೆ ಈ 5 ವಸ್ತುಗಳನ್ನು ತಂದರೆ ತುಂಬಾ ಒಳ್ಳೆಯದು..!

Maha Shivratri 2025 : ಮಹಾ ಶಿವರಾತ್ರಿಯಂದು ಶಿವನಿಗಾಗಿ ಉಪವಾಸ ಮಾಡಿದರೆ ಎಲ್ಲವೂ ಸಿಗುತ್ತದೆ ಎಂದು ಅರ್ಥವಲ್ಲ. ನಾವು ಮಾಡಿದ ಪಾಪ, ಕರ್ಮಗಳು ನಾಶವಾಗಿ.. ಮುಂದೆ ಮಾಡುವ ಒಳ್ಳೆಯ ಕೆಲಸಗಳಿಗೆ ಶಿವಾನುಗ್ರಹವಾಗುತ್ತದೆ ಅಂತ ಅರ್ಥ. ಈ ದಿನ ನಾವು ಶಂಕರನ ಕೃಪೆಗೆ ಒಳಗಾಗಲು ಏನು ಮಾಡಬೇಕು.. ಏನು ಮಾಡಬಾರದು..? ಎಂಬುದನ್ನು ತಿಳಿಯೋಣ ಬನ್ನಿ.

1 /8

ಮಹಾಶಿವರಾತ್ರಿಯು ಶಿವನಿಗೆ ಅರ್ಪಿತವಾದ ಅತ್ಯಂತ ಪ್ರಮುಖ ಮತ್ತು ವಿಶೇಷ ದಿನ. ಇದೇ ತಿಂಗಳು ಫೆಬ್ರವರಿ 26 ರಂದು ದೇಶಾದ್ಯಂತ ಶಿವರಾತ್ರಿಯನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ. ಮಹಾ ಶಿವರಾತ್ರಿಯಂದು ಶಿವನನ್ನು ಪೂಜಿಸುವ ಪ್ರತಿಯೊಬ್ಬ (Mahashivratri Ke Upay) ಭಕ್ತನ ಜೀವನದ ಅತ್ಯಂತ ಸಂತೋಷಮಯವಾಗಿರುತ್ತದೆ ಎಂದು ನಂಬಲಾಗಿದೆ...  

2 /8

ಶಿವರಾತ್ರಿಯಂದು ಭಗವಂತನ ಪರಿಪೂರ್ಣ ಅನುಗ್ರಹವನ್ನು ಪಡೆಯಲು ಭಕ್ತರು ಉಪವಾಸ ಮಾಡುತ್ತಾರೆ. ಇದರ ಜೊತೆಗೆ ಮಹಾಶಿವರಾತ್ರಿಯಂದು ಮನೆಗೆ ಕೆಲವು ವಸ್ತುಗಳನ್ನು ತರುವುದರಿಂದ ಶಿವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಇದರಿಂದ ಭಕ್ತರು ಶಿವನ ಆಶೀರ್ವಾದ ಪಡೆಯಬಹುದು ಎಂದು ಹೇಳಲಾಗುತ್ತದೆ.. ಮಹಾಶಿವರಾತ್ರಿಯಂದು ಈ 5 ವಸ್ತುಗಳಲ್ಲಿ ಯಾವುದನ್ನಾದರೂ ಒಂದು ನಿಮ್ಮ ಮನೆಗೆ ತನ್ನಿ.  

3 /8

ಮನೆಯಲ್ಲಿ ಶಿವಲಿಂಗವನ್ನು ಇಟ್ಟು ಪೂಜಿಸಬಾರದು ಎಂದು ಹೇಳುತ್ತಾರೆ. ಆದರೂ, ಕೆಲವು ಧರ್ಮಗ್ರಂಥಗಳು ಬೆಳ್ಳಿ ಅಥವಾ ಪಾದರಸದಿಂದ ಮಾಡಿದ ಶಿವಲಿಂಗವನ್ನು ಮನೆಯಲ್ಲಿ ಇಡಬಹುದು ಎಂದು ಹೇಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮಹಾಶಿವರಾತ್ರಿಯಂದು ಮನೆಯಲ್ಲಿ ಬೆಳ್ಳಿ ಅಥವಾ ಪಾದರಸದಿಂದ ಮಾಡಿದ ಶಿವಲಿಂಗವನ್ನು ತಂದು ಪ್ರತಿಷ್ಠಾಪಿಸುವುದರಿಂದ ಭಗವಂತನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.   

4 /8

ನಂದಿ ಶಿವನಿಗೆ ಪ್ರಿಯ. ಭೋಲೆನಾಥ ಎಲ್ಲಿರುತ್ತಾನೋ ಅಲ್ಲಿ ನಂದಿಯೂ ಇರಲೇಬೇಕು. ಈ ಕಾರಣಕ್ಕಾಗಿಯೇ ನಂದಿಯನ್ನು ಪೂಜಿಸಲಾಗುತ್ತದೆ. ಮಹಾಶಿವರಾತ್ರಿಯಂದು ನಂದಿ ವಿಗ್ರಹವನ್ನು ಮನೆಗೆ ತರುವುದು ಬಹಳ ಶುಭ ಎಂದು ನಂಬಲಾಗಿದೆ. ಇದರಿಂದ ಪಾರ್ವತಿ ಪತಿ ತುಂಬಾ ಸಂತೋಷಪಡುತ್ತಾನೆ. ಅಷ್ಟೇ ಅಲ್ಲ ಹಣವನ್ನು ಇಡುವ ಸ್ಥಳದಲ್ಲಿ ನಂದಿ ಪ್ರತಿಮೆಯನ್ನು ಇಡುವುದರಿಂದ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.  

5 /8

ರುದ್ರಾಕ್ಷಿ ಪರಮೇಶ್ವರನ ಕಣ್ಣೀರಿನಿಂದ ಹುಟ್ಟಿದೆ ಎಂದು ಹೇಳಲಾಗುತ್ತದೆ. ರುದ್ರಾಕ್ಷಿ ಧರಿಸುವುದನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಮಹಾಶಿವರಾತ್ರಿಯ ಶುಭ ಸಮಯದಲ್ಲಿ ಇದನ್ನು (Maha Shivratri 2025 puja timings) ಮನೆಗೆ ತರುವುದು ತುಂಬಾ ಶುಭಕರ ಎಂದು ಪರಿಗಣಿಸಲಾಗಿದೆ. ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತ ಕನಿಷ್ಠ ಒಂದು ರುದ್ರಾಕ್ಷಿಯನ್ನು ಧರಿಸಿ.   

6 /8

ಬಿಲ್ವಪತ್ರೆಯಿಲ್ಲದೆ ಶಿವಪೂಜೆ ಅಪೂರ್ಣ ಎಂದು ನಂಬಲಾಗಿದೆ. ಪೂಜಾ ಸಾಮಗ್ರಿಗಳಲ್ಲಿ ಇದು ಇರುವುದು ಬಹಳ ಮುಖ್ಯ ಎಂಬುದನ್ನು ಗಮನಿಸಿ. ಮಹಾಶಿವರಾತ್ರಿಯಂದು, ನೀವು ಅರ್ಧನಾರೀಶ್ವರನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ ಮನೆಗೆ ತಂದರೆ, ಭೋಲೇನಾಥನ ಸಂಪೂರ್ಣ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.  

7 /8

ಶಾಸ್ತ್ರಗಳ ಪ್ರಕಾರ, ಮಹಾಮೃತ್ಯುಂಜಯ ಯಂತ್ರವನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿಯಂದು ಮನೆಯಲ್ಲಿ ಮಹಾಮೃತ್ಯುಂಜಯ ಯಂತ್ರವನ್ನು ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಇದು ಅನಾರೋಗ್ಯ, ತಪ್ಪುಗಳು, ಭಯ ಮತ್ತು ಆರ್ಥಿಕ ತೊಂದರೆಗಳಿಂದ ಮುಕ್ತವಾಗುತ್ತದೆ ಎಂದು ನಂಬಲಾಗಿದೆ.  

8 /8

(ಸೂಚನೆ: ಇಲ್ಲಿ ಬರೆಯಲಾದ ಎಲ್ಲಾ ಮಾಹಿತಿಗಳು ಆಧ್ಯಾತ್ಮಿಕ ಮತ್ತು ಶಾಸ್ತ್ರಗಳ ನಂಬಿಕೆಯ ಪ್ರಕಾರ ಮಾತ್ರ. ಈ ಮಾಹಿತಿಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಅಥವಾ ವಿವರಣೆಗಳಿಲ್ಲ. ಇಲ್ಲಿರುವ ಸಂಗತಿಗಳ ನಿಖರತೆಗೆ Zee Kannada News ಯಾವುದೇ ರೀತಿಯಲ್ಲಿ ಜವಾಬ್ದಾರನಾಗಿರುವುದಿಲ್ಲ)