ಕಾನ್ಪುರ: ಕೊರೊನಾವೈರಸ್, ಬರ್ಡ್ ಫ್ಲೂ ಬಳಿಕ ಈಗ ಪಾರ್ವೊ/ಪೆರ್ವೊವೈರಸ್ (Canine parvovirus) ಆತಂಕ ಸೃಷ್ಟಿಸಿದೆ. ಪಕ್ಷಿ ಜ್ವರ ನಂತರ, ಈಗ ಪೆರ್ವೊ ವೈರಸ್ (Parvo Virus) ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಅದರ ಮಾರಕ ಪರಿಣಾಮದಿಂದಾಗಿ 8 ನಾಯಿಗಳು ಸಾವನ್ನಪ್ಪಿವೆ. ಸತ್ತ 8 ನಾಯಿಗಳಲ್ಲಿ ಎರಡು ನಾಯಿಗಳ ಮರಣೋತ್ತರ ವರದಿ ಬಂದಿದ್ದು ಇವೆರಡರಲ್ಲೂ ಕರುಳು ಕೊಳೆತು ಹೋಗಿತ್ತು ಮತ್ತು ಈ ನಾಯಿಗಳು ಸಾಯುವ ಮುನ್ನ ರಕ್ತವನ್ನು ವಾಂತಿ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.
ಅಪಾಯಕಾರಿ ಸಾಂಕ್ರಾಮಿಕ ವೈರಸ್:
ಪಾರ್ವೊವೈರಸ್ (Parvo Virus) ಅಪಾಯಕಾರಿ ಸಾಂಕ್ರಾಮಿಕ ವೈರಸ್ ಆಗಿದೆ. ಇದು ನಾಯಿಮರಿ ಮತ್ತು ನಾಯಿಗಳಲ್ಲಿ ಸಾಂಕ್ರಾಮಿಕ ಜಿಐ ರೋಗವನ್ನು ಉಂಟುಮಾಡುತ್ತದೆ. ಚಿಕಿತ್ಸೆ ನೀಡದಿದ್ದರೆ ಅದು ಮಾರಕವಾಗಬಹುದು. ಹಾಗಾಗಿಯೇ ಈ ವೈರಸ್ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಾಯಿಗಳಲ್ಲಿ ಸುಲಭವಾಗಿ ಹರಡುತ್ತದೆ.
ಇದನ್ನೂ ಓದಿ - Bird flu ಮೊಟ್ಟೆ, ಚಿಕನ್ ತಿಂದರೆ ಕೋಳಿ ಜ್ವರ ಬರುತ್ತಾ..? ಈ ಹೊತ್ತಲ್ಲಿ ಗೊತ್ತಿರಲೇಬೇಕಾದ ವಾಸ್ತವಾಂಶಗಳು ಇವು..!
ಉತ್ತರ ಪ್ರದೇಶದ ಕಾನ್ಪುರದ ಭತರ್ಗಾಂವ್ ಬ್ಲಾಕ್ನ ಕಿಯೊಂಟಾರಾ ಗ್ರಾಮದಲ್ಲಿ ಈ ವೈರಸ್ ಸೋಂಕಿನಿಂದ ನಾಯಿಗಳು ಸಾವನ್ನಪ್ಪಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕೆಲವು ವಾರಗಳ ಹಿಂದೆ ಅದೇ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಕಾಗೆಗಳು (Bird Flu) ಸತ್ತಿದ್ದವು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಇದನ್ನೂ ಓದಿ - Bird Flu : ಗ್ರಿಲ್ಡ್ ಚಿಕನ್ ಸೇಫಾ..? ತಂದೂರಿ ತಿನ್ನಬಹುದಾ..? ಒವನ್ ನಲ್ಲಿ ವೈರಸ್ ಸಾಯುತ್ತಾ..?
ಈ ಸೋಂಕನ್ನು ತಡೆಗಟ್ಟುವ ಕ್ರಮ ಹೇಗೆ?
ಸೋಂಕಿತ ನಾಯಿಗಳಲ್ಲಿನ ನಡವಳಿಕೆಯ ಬದಲಾವಣೆಯ ಬಗ್ಗೆ ತಿಳಿಯಲು ಪಶುವೈದ್ಯಕೀಯ ತಜ್ಞರ ತಂಡ ಗ್ರಾಮಕ್ಕೆ ಭೇಟಿ ನೀಡುತ್ತಿದೆ. ವೈರಸ್ ಮುಖ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳುತ್ತಾರೆ.
ಆದರೆ ಗಮನಸಬೇಕಾದ ಅಂಶವೆಂದರೆ ಪಾರ್ವೊವೈರಸ್ (Parvovirus) ದೊಡ್ಡ ಪ್ರಾಣಿಗಳ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ನಾಯಿಗಳಿಗೆ ಮಾರಕವಾಗಿದೆ ಎಂದು ಪಶುವೈದ್ಯ ಸರ್ವೇಂದ್ರ ಸಚನ್ ಹೇಳಿದ್ದಾರೆ. ತಂಡದ ಇನ್ನೊಬ್ಬ ಪಶುವೈದ್ಯ ಒ.ಪಿ. ವರ್ಮಾ ನಾಯಿಗಳನ್ನು ವೈರಸ್‌ನಿಂದ ರಕ್ಷಿಸಲು, ಜನಿಸಿದ ಮೂರು ತಿಂಗಳೊಳಗೆ ಅಗತ್ಯವಾದ ಲಸಿಕೆ ನೀಡಬೇಕು ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.