ನವದೆಹಲಿ: PM Kisan 10th Installment Update - ಶೀಘ್ರದಲ್ಲಿಯೇ ರೈತರಿಗೆ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಲಿದೆ. ಒಂದು ವೇಳೆ ನೀವೂ ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) ಫಲಾನುಭವಿಗಳಾಗಿದ್ದರೆ, ಈ ಸುದ್ದಿ ನಿಮಗಾಗಿ. ಮಾಧ್ಯಮ ವರದಿಗಳ ಪ್ರಕಾರ ಪಿಎಂ ಕಿಸಾನ್ (PM Kisan) ಸಮಾನ್ ನಿಧಿ ಯೋಜನೆಯ ಅಡಿ 10ನೇ ಕಂತಿನ ಹಣವನ್ನು (PM Kisan 10th Installment) ಬಿಡುಗಡೆ ಮಾಡಲು ಸರ್ಕಾರ ದಿನಾಂತ ನಿಗದಿಪಡಿಸಿದೆ ಎನ್ನಲಾಗಿದ್ದು, ಇದಕ್ಕಾಗಿ ಸರ್ಕಾರ ಸಕಲ ಅಗತ್ಯ ವ್ಯವಸ್ಥೆಗಳನ್ನು ಕೂಡ ಮಾಡಿಕೊಂಡಿದೆ ಎನ್ನಲಾಗಿದೆ.
ಕಂತು ಬಿಡುಗಡೆ ಮಾಡಲು ಸರ್ಕಾರ ದಿನಾಂಕ ನಿಗದಿಪಡಿಸಿದೆ!
ಸರ್ಕಾರ ಇದುವರೆಗೆ ಸುಮಾರು 11.37 ಕೋಟಿ ರೈತರ ಖಾತೆಗೆ 1.58 ಕೋಟಿ ರೂ. ವರ್ಗಾಯಿಸಿದೆ. ಇದೀಗ ಕೇಂದ್ರ ಸರ್ಕಾರ ಡಿಸೆಂಬರ್ 15, 2021ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISAN Scheme) ಯೋಜನೆಯ ಮುಂದಿನ ಅಂದರೆ, 10ನೇ ಕಂತನ್ನು ಬಿಡುಗಡೆ ಮಾಡಲು ಯೋಜನೆಯನ್ನು ರೂಪಿಸುತ್ತಿದೆ. ಕಳೆದ ವರ್ಷ ಸರ್ಕಾರ ಡಿಸೆಂಬರ್ 2020ರಂದು ಈ ಯೋಜನೆಯ ಅಡಿ ಕಂತನ್ನು ವರ್ಗಾಯಿಸಿತ್ತು.
ರೈತರ ಖಾತೆಗೆ ಬರಲಿವೆ 4 ಸಾವಿರ ರೂ.
ಈ ಯೋಜನೆಯ ಅಡಿ ಯಾವ ರೈತರ ಖಾತೆಗೆ 9 ನೇ ಕಂತಿನ ಹಣ ಇನ್ನೂ ಬಂದಿಲ್ಲವೋ, ಅವರಿಗೆ ಮುಂದಿನ ಕಂತಿನಲ್ಲಿ ಹಿಂದಿನ ಬಾಕಿ ಉಳಿದ ಕಂತೂ ಕೂಡ ವರ್ಗಾವಣೆಯಾಗಲಿದೆ. ಅಂದರೆ, ಅಂತಹ ರೈತರಿಗೆ ಒಟ್ಟು 4 ಸಾವಿರ ಹಣ ಸಿಗಲಿದೆ.
ಇದನ್ನೂ ಓದಿ-PM Kisan ಯೋಜನೆಯ ₹2,000 ಈ ತಿಂಗಳಲ್ಲಿ ಖಾತೆಗೆ ಜಮಾ, ಅದಕ್ಕೆ ಈ ಕೆಲಸ ಮಾಡಿ
ಆದರೆ, ಸೆಪ್ಟೆಂಬರ್ 30ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿದ ರೈತರಿಗೆ ಮಾತ್ರ ಈ ಅವಕಾಶ ಸಿಗಲಿದೆ. ಒಂದು ವೇಳೆ ನೀವೂ ಕೂಡ ಅರ್ಜಿ ಸಲ್ಲಿಸಿದ್ದು, ನಿಮ್ಮ ಅರ್ಜಿ ಸ್ವೀಕೃತಗೊಂಡಿದ್ದರೆ, ನಿಮ್ಮ ಖಾತೆಗೆ ರೂ.4000 ಬಂದು ಸೇರಲಿವೆ.
ಇದನ್ನೂ ಓದಿ-PM Kisan ಯೋಜನೆಯಲ್ಲಿ ಧನವೃಷ್ಟಿ! 6000 ವಾರ್ಷಿಕ ಕಂತಿನ ಜೊತೆಗೆ ಸಿಗಲಿದೆ 5000 ರೂ.ಗಳ ಮಾಸಿಕ ಪಿಂಚಣಿ
ರೈತರು 10ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನಯೇ (PM Kisan Samman Nidhi Yojana) ಅಡಿ ರೈತರು ಪ್ರಸ್ತುತ 10ನೇ ಕಂತಿಗಾಗಿ ಕಾಯುತ್ತಿದ್ದಾರೆ. ಇದುವರೆಗೆ ಈ ಯೋಜನೆಯ ಒಟ್ಟು 9 ಕಂತುಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯ ಅಡಿ ಕೇಂದ್ರ ಸರ್ಕಾರವು ತಲಾ 2,000 ರಂತೆ ವಾರ್ಷಿಕವಾಗಿ ಒಟ್ಟು 6000 ರೂಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸುತ್ತದೆ. ರೈತರ ಆದಾಯ ಹೆಚ್ಚಿಸುವುದು ಮತ್ತು ರೈತರಿಗೆ ನೇರ ಆರ್ಥಿಕ ಸಹಾಯ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.