ಸ್ವತಂತ್ರ ದಿನಾಚರಣೆ ಸಂಭ್ರಮಕ್ಕೆ ಸಡಗರದ ಸಿದ್ದತೆ

ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡುವ ಭಾಷಣವು ಕುತೂಹಲ ಮೂಡಿಸಿದೆ.  

Last Updated : Aug 15, 2018, 06:33 AM IST
ಸ್ವತಂತ್ರ ದಿನಾಚರಣೆ ಸಂಭ್ರಮಕ್ಕೆ ಸಡಗರದ ಸಿದ್ದತೆ title=
Pic: ANI

ನವದೆಹಲಿ: ಸ್ವತಂತ್ರ ದಿನ ಆಚರಿಸಲು ಸಿದ್ದಗೊಂಡಿದೆ ರಾಷ್ಟ್ರ ರಾಜಧಾನಿ ದೆಹಲಿ. ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡುವ ಭಾಷಣವು ಕುತೂಹಲ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದಿನಚರಿ ಹೀಗಿದೆ. 

  • 7 ಗಂಟೆಗೆ ರಾಜಘಾಟ್ ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರರಕ್ಕೆ ನಮನ ಸಲ್ಲಿಸಲಿದ್ದಾರೆ. 
  • 7:18 ಕ್ಕೆ ಕೆಂಪು ಕೋಟೆಗೆ ಆಗಮಿಸಲಿದ್ದಾರೆ.
  • 7:30 ಕ್ಕೆ ಸರಿಯಾಗಿ ಧ್ವಜಾರೋಹಣ ಮಾಡಲಿದ್ದಾರೆ. 
  • ನಂತರ ರಾಷ್ಟ್ರ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 
  • ಇಂದು ತಮ್ಮ ಅಧಿಕಾರದ ಅವಧಿಯ ಕಡೆಯ ಭಾಷಣವಾಗಿರುವುದರಿಂದ ಪ್ರಧಾನಿ ಮೋದಿ ಬರೊಬ್ಬರಿ ಒಂದು ಗಂಟೆ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ.

ಸ್ವತಂತ್ರ ದಿನಾಚರಣೆ ಅಂಗವಾಗಿ ಕೆಂಪು ಕೋಟೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ದೇಶವಿದೇಶಗಳ ಗಣ್ಯರು ಸಾಕ್ಷಿಯಾಗಲಿದ್ದಾರೆ. ರಾಷ್ಟ್ರಪತಿ ರಮಾನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್, ಎಚ್.ಡಿ. ದೇವೇಗೌಡ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಸುಪ್ರೀಂ ಕೋರ್ಟಿನ ಇತರೆ ನ್ಯಾಯಮೂರ್ತಿಗಳು, ಕೇಂದ್ರ ಸಚಿವರು, ಸೇನಾ ನಾಯಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

ಮೋದಿ 2019ರ ಚುನಾವಣೆ ದೃಷ್ಟಿಯಲ್ಲಿ ಮಾತನಾಡಲಿದ್ದಾರೆ. ಪರೋಕ್ಷವಾಗಿ ಕೆಲ ಜನಪ್ರಿಯ ವಿಷಯಗಳ ಘೋಷಣೆ ಮಾಡುವ ಸಾಧ್ಯತೆ ಇದೆ. ರೈತರು, ಮಹಿಳೆಯರು, ದಲಿತರ ಬಗ್ಗೆ ಮಾತನಾಡಲಿದ್ದಾರೆ. ಆಯುಷ್ ಮಾನ್, ಮೋದಿ ಕೇರ್, ಅಟಲ್ ಪಿಂಚಣಿ, ಉಜ್ವಲ ಮತ್ತಿತರ ಯೋಜನೆಗಳ ಬಗ್ಗೆ ಪ್ರಸ್ತಾಪಿಸಲು ಒತ್ತು ನೀಡಲಿದ್ದಾರೆ ಎನ್ನಲಾಗುತ್ತಿದೆ.

Trending News