ಎರಡನೇ ಬಾರಿಗೆ ಪ್ರಧಾನಿಯಾಗಿ ಇಂದು ಸಂಜೆ 7 ಗಂಟೆಗೆ ಮೋದಿ ಪ್ರಮಾಣವಚನ

ಪ್ರತಿಜ್ಞಾವಿಧಿಗೂ ಮೊದಲು ರಾಜ್‌ ಘಾಟ್‌ ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಮಾಧಿ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.

Last Updated : May 30, 2019, 08:02 AM IST
ಎರಡನೇ ಬಾರಿಗೆ ಪ್ರಧಾನಿಯಾಗಿ ಇಂದು ಸಂಜೆ 7 ಗಂಟೆಗೆ ಮೋದಿ ಪ್ರಮಾಣವಚನ title=
Pic Courtesy: ANI

ನವದೆಹಲಿ: ನರೇಂದ್ರ ಮೋದಿ ಇಂದು ಎರಡನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನ ಮುಂಭಾಗ ಪದಗ್ರಹಣಕ್ಕೆ ಸಕಲ ಸಿದ್ಧತೆ ನಡೆದಿದೆ. ನರೇಂದ್ರ ಮೋದಿ ಅವರೊಂದಿಗೆ ಎನ್​ಡಿಎಯ 65ಕ್ಕೂ ಹೆಚ್ಚು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಜ್ಞಾವಿಧಿಗೂ ಮೊದಲು ನರೇಂದ್ರ ಮೋದಿ ರಾಜ್‌ ಘಾಟ್‌ ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಮಾಧಿ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದರು.

ಇಂಡಿಯಾ ಗೇಟ್‌ ಬಳಿಯಿರುವ ಅಮರ್ ಜವಾನ್ ಸ್ಮಾರಕಕ್ಕೂ ಭೇಟಿ ನೀಡಿದ ಮೋದಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. ಮೋದಿ ಅವರಿಗೆ ಬಿಜೆಪಿಯ ನೂತನ ಸಂಸದರು  ಸಾಥ್ ನೀಡಿದ್ದಾರೆ.

ಬಿಮ್ ಸ್ಟೇಕ್ ದೇಶಗಳ ಮುಖ್ಯಸ್ಥರು ಸೇರಿದಂತೆ ಹಲವು ವಿದೇಶಿ ಗಣ್ಯರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಪ್ರತಿಪಕ್ಷಗಳ ಮುಖಂಡರು, ಮಾಜಿ ಪ್ರಧಾನಿಗಳು, ಮಾಜಿ ರಾಷ್ಟ್ರಪತಿಗಳು, 100 ಮಂದಿ ಅನಿವಾಸಿ ಭಾರತೀಯರು ಸೇರಿದಂತೆ ಒಟ್ಟು ಸುಮಾರು 8,000 ಗಣ್ಯರು ಹಾಜರಾಗುವ ನಿರೀಕ್ಷೆಯಿದೆ.

Trending News