ಕೇವಲ 3 ದಿನಗಳಲ್ಲಿ ಆರೆಸೆಸ್ ಸೇನೆ ಸಿದ್ಧಪಡಿಸಲಿದೆ : ಮೋಹನ್ ಭಾಗವತ್

ಮುಜಫರ್ ಪುರ್ ನಗರದ ಆರು ದಿನಗಳ ಭೇಟಿಯ ಭೇಟಿಯ ಕೊನೆಯ ದಿನದಂದು ಜಿಲ್ಲಾ ಶಾಲೆಯ ಮೈದಾನದಲ್ಲಿ ಕಾರ್ಯಕಾರ್ತರನ್ನು ಉದ್ದೇಶಿಸಿ ಮಾತನಾಡಿದರು.

Last Updated : Feb 12, 2018, 12:45 PM IST
ಕೇವಲ 3 ದಿನಗಳಲ್ಲಿ ಆರೆಸೆಸ್ ಸೇನೆ ಸಿದ್ಧಪಡಿಸಲಿದೆ : ಮೋಹನ್ ಭಾಗವತ್ title=

ಮುಜಾಫರ್ಪುರ್ : ದೇಶದಲ್ಲಿ ಯುದ್ಧದ ಪರಿಸ್ಥಿತಿ ಉಂಟಾದರೆ, ದೇಶಕ್ಕಾಗಿ ಹೋರಾಡಲು ಮೂರೇ ದಿನದಲ್ಲಿ ಸೈನ್ಯವನ್ನು ತಯಾರಿಸುವ ಸಾಮರ್ಥ್ಯವನ್ನು ಸಂಸ್ಥೆಯು ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಗವತ್ ಹೇಳಿದ್ದಾರೆ.

ಮುಜಫರ್ ಪುರ್ ನಗರದ ಆರು ದಿನಗಳ ಭೇಟಿಯ ಭೇಟಿಯ ಕೊನೆಯ ದಿನದಂದು ಜಿಲ್ಲಾ ಶಾಲೆಯ ಮೈದಾನದಲ್ಲಿ ಕಾರ್ಯಕಾರ್ತರನ್ನು ಉದ್ದೇಶಿಸಿ ಮಾತನಾಡಿದರು.

"ಸೇನಾ ಸಿಬ್ಬಂದಿಗಳ ತಯಾರಿಗೆ ಭಾರತೀಯ ಸೇನೆಯು 6-7 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಆರ್ಎಸ್ಎಸ್ ಈ ಕೆಲಸವನ್ನು ಕೇವಲ ಮೂರೇ ದಿನಗಳಲ್ಲಿ ಮಾಡುವ ಸಾಮರ್ಥ್ಯ ಹೊಂದಿದೆ. ದೇಶಕ್ಕೆ ಅಂತಹ ಪರಿಸ್ಥಿತಿ ಎದುರಾದರೆ ಸ್ವಯಂ ಸೇವಕ ಸಂಘವು ಮುಂದೆ ಬರಲು ಸಿದ್ಧವಿದೆ(ಸಂವಿಧಾನದಲ್ಲಿ ಅನುಮತಿ ಇದ್ದರೆ) ಎಂದು ಭಾಗವತ್ ಹೇಳಿದರು. 

ಸಂಘವು ಮಿಲಿಟರಿ ಅಥವಾ ಸಂಸದೀಯ ಸಂಘಟನೆ ಅಲ್ಲದಿದ್ದರೂ, ಸೈನ್ಯದಂತೆಯೇ ಶಿಸ್ತು ಪಾಲಿಸುವ "ಪರಿವಾರಿಕ್ ಸಂಘಟನೆ" (ಕುಟುಂಬ ಸಂಘಟನೆ)ಯಾಗಿದ್ದು, ಸೇನೆಯಂತೆಯೇ ಶಿಸ್ತು ಪಾಲಿಸುವ, ದೇಶಕ್ಕಾಗಿ ಎಂತಹ ತ್ಯಾಗವನ್ನೂ ಸಂತೋಷದಿಂದ ಮಾಡಲು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.

Trending News