ಶಬರಿಮಲೈ ವಿವಾದ: ಕೇರಳ ಸಿಎಂ ಕರೆದ ಸಂಧಾನ ಸಭೆ ತಿರಸ್ಕರಿಸಿದ ಅರ್ಚಕರು!

ಪಾಂಡುಲಂ ಅರಮನೆ ಮತ್ತು ಶಬರಿಮಲೈ ದೇವಸ್ಥಾನದ ಪುರೋಹಿತರ ಪ್ರತಿನಿಧಿಗಳು ಸೋಮವಾರ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರ ಸಂಧಾನದ ಸಭೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Last Updated : Oct 7, 2018, 06:12 PM IST
ಶಬರಿಮಲೈ ವಿವಾದ: ಕೇರಳ ಸಿಎಂ ಕರೆದ ಸಂಧಾನ ಸಭೆ ತಿರಸ್ಕರಿಸಿದ ಅರ್ಚಕರು!  title=

ತಿರುವನಂತಪುರಂ: ಪಾಂಡುಲಂ ಅರಮನೆ ಮತ್ತು ಶಬರಿಮಲೈ ದೇವಸ್ಥಾನದ ಪುರೋಹಿತರ ಪ್ರತಿನಿಧಿಗಳು ಸೋಮವಾರ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರ ಸಂಧಾನದ ಸಭೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಸೋಮವಾರದಂದು ಕೇರಳ ಸರ್ಕಾರವು ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತಾಗಿ ಚರ್ಚಿಸಲು ಅವರು ದೇವಸ್ತಾನ ಮತ್ತು ರಾಜಪ್ರತಿನಿಧಿಗಳನ್ನು ಆಹ್ವಾನಿಸಿದ್ದರು.ಆದರೆ ದೇವಸ್ತಾನದ ಒಳಗೆ ಮಹಿಳೆಯರಿಗೆ ಪ್ರವೇಶದ ಅವಕಾಶ ನೀಡಿರುವ ಸುಪ್ರಿಂಕೋರ್ಟ್ನ ತೀರ್ಪಿನ ಕುರಿತಾಗಿ ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಶಬರಿಮಲೈ ಅಯಪ್ಪ ದೇವಸ್ತಾನದ ಮುಖ್ಯ ಅರ್ಚಕರಾದ 'ಥಝಾಮೋನ್ ತಂತ್ರಿಗಳು  ತಿಳಿಸಿದ್ದಾರೆ ಎನ್ನಲಾಗಿದೆ. 

ಅಯ್ಯಪ್ಪ ದೇವಸ್ಥಾನಕ್ಕೆ ಸಂಬಂಧಿಸಿದ ರಾಜ ಮನೆತನವಾದ ಪಾಂಡಲಂ ಕುಟುಂಬವು ಹೇಳುವಂತೆ ಈಗಾಗಲೇ ಸರಕಾರವು  ಸುಪ್ರಿಂಕೋರ್ಟ್  ಆದೇಶವನ್ನು ಜಾರಿಗೆ ತರುವ ನಿರ್ಧಾರ ತೆಗೆದುಕೊಂಡಿದೆ ಆದ್ದರಿಂದ ಈ ವಿಚಾರವಾಗಿ ಚರ್ಚೆನಡೆಸುವಲ್ಲಿ ಯಾವುದೇ ಅಂಶವಿಲ್ಲ ಎಂದು ಹೇಳಿದರು. ಅಲ್ಲದೆ ಸುಪ್ರಿಂ ನಿರ್ಧಾರವನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿಯನ್ನು ಅರಮನೆ ಟ್ರಸ್ಟ್ ಕೋರ್ಟ್ ಗೆ ಸಲ್ಲಿಸಲಿದೆ ಎಂದು ತಿಳಿಸಿದೆ.  

ಏತನ್ಮಧ್ಯೆ, ಹಳೆಯ ಅಯ್ಯಪ್ಪ ಭಕ್ತರು ದೇವಸ್ತಾನದ ಹಳೆಯ ಸಂಪ್ರದಾಯ,ಆಚರಣೆಗಳನ್ನು ಮತ್ತು ಬೆಟ್ಟದ ದೇವಾಲಯದ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ, ರಾಜ್ಯದ ಅನೇಕ ಭಾಗಗಳಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

 

Trending News