ಕಮಲನಾಥ್ ಸರ್ಕಾರವನ್ನು 'ರಣಛೋಡದಾಸ್' ಸರ್ಕಾರ ಎಂದು ಕರೆದ ಶಿವರಾಜ್

ತನ್ನ ಬೆಂಬಲಿಗ ಶಾಸಕರೊಂದಿಗೆ ಮಧ್ಯ ಪ್ರದೇಶದ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ರಾಜ್ಯದ ಮಾಜಿ ಮುಖ್ಯಮಂತ್ರಿ ಶಿರ್ವರಾಜ್ ಸಿಂಗ್ ಚೌಹಾನ್, ಕಮಲನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ರಾಜ್ಯಪಾಲರ ಆದೇಶವನ್ನು ಪಾಲಿಸದೇ  'ರಣಛೋಡದಾಸ್' ಆಗಿದೆ ಎಂದಿದ್ದಾರೆ.  

Last Updated : Mar 16, 2020, 05:52 PM IST
ಕಮಲನಾಥ್ ಸರ್ಕಾರವನ್ನು 'ರಣಛೋಡದಾಸ್' ಸರ್ಕಾರ ಎಂದು ಕರೆದ ಶಿವರಾಜ್ title=

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಮಾರ್ಚ 26ರವರೆಗೆ ಸ್ಥಗಿತಗೊಂಡ ಬಳಿಕ ಭಾರತೀಯ ಜನತಾ ಪಕ್ಷದ 106 ಶಾಸಕರು ಶಿವರಾಜ್ ಸಿಂಗ್ ಚೌಹಾನ್ ನೆತ್ರುತ್ವದಲ್ಲಿ ರಾಜಭವನ ತಲುಪಿ, ರಾಜ್ಯಪಾಲರಾದ ಲಾಲಾಜಿ ಟಂಡನ್ ಅವರನ್ನು ಭೇಟಿಯಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದರೊಂದಿಗೆ BJP ಮುಖಂಡರು ತಮ್ಮ ಬಳಿ ಬಹುಮತ ಇದೆ ಎಂದು ರಾಜ್ಯಪಾಲರಿಗೆ ಹೇಳಿ ಬಹುಮತ ಸಿದ್ಧಪಡಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, "ಕಮಲನಾಥ್ ಸರ್ಕಾರ ಬಹುಮತ ಕಳೆದುಕೊಂಡು ಅಲ್ಪಮತಕ್ಕೆ ಬಂದು ತಲುಪಿದೆ ಹೀಗಾಗಿ ರಾಜ್ಯಪಾಲರು ಇಂದು ತಮ್ಮ ಭಾಷಣದ ಬಳಿಕ ಕಮಲನಾಥ್ ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸುವಂತೆ ಆದೇಶ ನೀಡಿದ್ದರು" ಎಂದು ಹೇಳಿದ್ದಾರೆ. ಈ ವೇಳೆ ಉಪಸ್ಥಿತರಿದ್ದ ಬಿಜೆಪಿಯ ಒಟ್ಟು 106 ಶಾಸಕರು ತಮ್ಮ ಹಸ್ತಾಕ್ಷರವನ್ನು ನಮೂದಿಸಿ ರಾಜ್ಯಪಾಲರಿಗೆ ಪ್ರಮಾಣ ಪತ್ರ ಕೂಡ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಿವರಾಜ್ ಸಿಂಗ್ " ಒಂದು ವೇಳೆ ಸರ್ಕಾರದ ಬಳಿ ಬಹುಮತವಿದ್ದರೆ, ಶಕ್ತಿ ಪ್ರದರ್ಶಿಸಲು ಯಾವ ತೊಂದರೆ ಎದುರಾಗಿದೆ? ಆದರೆ, ಮುಖ್ಯಮಂತ್ರಿಗಳು ಇದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದು, ಕಾಲಹರಣ ಮಾಡುತ್ತಿದ್ದಾರೆ. ಏಕೆಂದರೆ ಅವರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬುದು ಅವರಿಗೆ ತಿಳಿದಿದೆ. ಹೀಗಾಗಿ ರಾಜ್ಯಪಾಲರು ನೀಡಿರುವ ಆದೇಶವನ್ನು ಪಾಲಿಸದೆ ಪಲಾಯಿನಗೈದು 'ರಣಛೋಡದಾಸ್' ಸರ್ಕಾರ ಎಂದು ಕರೆಯಿಸಿಕೊಂಡಿದೆ" ಎಂದಿದ್ದಾರೆ.

"ಸದ್ಯ ಸರ್ಕಾರದ ಬಳಿ ಅಧಿಕಾರದಲ್ಲಿ ಒಂದು ಕ್ಷಣ ಕೂಡ ಮುಂದುವರೆಯುವ ಸಾಂವಿಧಾನಿಕ ಹಕ್ಕನ್ನು ಕಮಲನಾಥ್ ಸರ್ಕಾರ ಕಳೆದುಕೊಂಡಿದೆ. ಸದನದಲ್ಲಿ ಇಂದು ಇದ್ದ ದೃಶ್ಯಗಳಿಂದ ಇದು ಸಾಬೀತಾಗಿದ್ದು, ಕಾಂಗ್ರೆಸ್ ಬಳಿ ಕೇವಲ 92 ಶಾಸಕರಿದ್ದು, BJP ಬಳಿ 106 ಶಾಸಕರ ಸಂಖ್ಯಾಬಲ ಇದೆ. ಹೀಗಾಗಿ ಇದೀಗ ಬಹುಮತ ಕೇವಲ BJP ಬಳಿ ಮಾತ್ರ ಇದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ" ಎಂದು ಚೌಹಾನ್ ಹೇಳಿದ್ದಾರೆ.

Trending News