ಕೊಲ್ಕತ್ತಾ:ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಹೆಮರಾಜಿಕ್ ಸ್ಟ್ರೋಕ್ ದಿಂದ ಬಳಲುತ್ತಿದ್ದಾರೆ ಎಂದು ಕೋಲ್ಕತಾದ ಬೆಲ್ಲೆ ವ್ಯೂ ಆಸ್ಪತ್ರೆ ಮೂಲಗಳು ತಿಳಿಸಿವೆ.
"ಇದು ಸಾಧಾರಣ ಗಾತ್ರದ ಹೆಪ್ಪುಗಟ್ಟುವಿಕೆಯಿಂದಾಗಿ ಹೆಮರಾಜಿಕ್ ಸ್ಟ್ರೋಕ್ ಆಗಿದೆ, ಇದು 89 ವರ್ಷ ವಯಸ್ಸಿನ ರೋಗಿಗೆ ಅಪಾಯಕಾರಿಯಾಗಿದೆ" ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ(2004-2009ರ) ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಸೋಮನಾಥ್ ಚಟರ್ಜಿ ಯವರು ಸಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಯ ಮಾಜಿ ಸದಸ್ಯರಾಗಿರುವ ಸೋಮನಾಥ್ ಅತ್ಯುತ್ತಮ ಸಂಸದೀಯ ಪಟು ಕೂಡ ಆಗಿದ್ದರು.