50 ಪೈಸೆಯ 200 ನಾಣ್ಯಗಳ ಸಂಗ್ರಹಣೆಯಲ್ಲಿ ತೊಡಗಿದ ಸುಪ್ರೀಂ ಕೋರ್ಟ್ ವಕೀಲ, ಕಾರಣ ಏನು ಗೊತ್ತಾ..?

ಸುಪ್ರೀಂ ಕೋರ್ಟ್ ವಕೀಲರು 50 ಪೈಸೆಯ ಒಟ್ಟು 200 ನಾಣ್ಯ ಸಂಗ್ರಹಣೆಗಾಗಿ ಕಲೆಕ್ಷನ್ ಡ್ರೈವ್ ಆರಂಭಿಸಿದ್ದಾರೆ. ವಕೀಲ ರೀಪಕ್ ಕಂಸಲ್ ಗೆ  ಸುಪ್ರೀಂ ಕೋರ್ಟ್ ರೂ.100 ದಂಡ ವಿಧಿಸಿದೆ. ರೀಪಕ್ ಅವರು ಕೋರ್ಟ್ ರಿಜಿಸ್ಟರ್ ನ ಪ್ರಕರಣಗಳ ಲಿಸ್ಟಿಂಗ್ ನಲ್ಲಿ ಪಕ್ಷಪಾತ ನಡೆಸಲಾಗಿದೆ  ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.

Last Updated : Jul 17, 2020, 02:40 PM IST
50 ಪೈಸೆಯ 200 ನಾಣ್ಯಗಳ ಸಂಗ್ರಹಣೆಯಲ್ಲಿ ತೊಡಗಿದ ಸುಪ್ರೀಂ ಕೋರ್ಟ್ ವಕೀಲ, ಕಾರಣ ಏನು ಗೊತ್ತಾ..? title=

ನವದೆಹಲಿ: ವಕೀಲ ರಿಪಕ್ ಕನ್ಸಾಲ್ ಅವರು ನ್ಯಾಯಾಲಯದ ರಜಿಸ್ಟರ್ ನ ಲಿಸ್ಟಿಂಗ್ ನಲ್ಲಿ  ಪಕ್ಷಪಾತ ನಡೆಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ಅವರಿಗೆ 100 ರೂಪಾಯಿ ದಂಡ ವಿಧಿಸಿದೆ. ದಂಡ ವಿಧಿಸಿದ ನಂತರ, ಅನೇಕ ವಕೀಲರು ಕನ್ಸಾಲ್ ಅವರನ್ನು ಬೆಂಬಲಿಸಿ 50-50 ನಾಣ್ಯಗಳನ್ನು ಸಂಗ್ರಹಣೆಯಲ್ಲಿ ತೊಡಗಿದ್ದು, ಸಾಂಕೇತಿಕವಾಗಿ ವಿಧಿಸಲಾಗಿರುವ ದಂಡಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಪ್ರಕರಣಗಳ ರಿಜಿಸ್ಟರ್ ನಲ್ಲಿ 'ಪಿಕ್ ಅಂಡ್ ಚೂಸ್' ನೀತಿಯ ಆಧಾರದ ಮೇಲೆ ಪ್ರಕರಣಗಳ ಲಿಸ್ಟಿಂಗ್ ನಡೆಸಲಾಗುತ್ತಿದೆ ಎಂದು ಕಾನ್ಸಲ್ ತರ್ಕ ಮಂಡಿಸಿದ್ದರು. ಇದರಿಂದ ಹಲವು ಪ್ರಕರಣಗಳು ಹಲವು ದಿನಗಳ ಕಾಲ ಲಿಸ್ಟಿಂಗ್ ನಲ್ಲಿಯೇ ಉಳಿದುಕೊಳ್ಳುತ್ತವೆ ಮತ್ತು ಕೆಲ ಪ್ರಕರಣಗಳು ದಾಖಲಿಸಲಾದ ಕೆಲವೇ ಗಂಟೆಗಳಲ್ಲಿ ಇತ್ಯರ್ಥಕ್ಕೆ ಬರುತ್ತವೆ ಎಂದು ಆರೋಪಿಸಿದ್ದರು. 

ದಂಡ ವಿಧಿಸಲಾದ ಎರಡನೇ ದಿನವೇ ಆರಂಭಿಸಲಾಗಿದೆ ಈ ಅಭಿಯಾನ
ಕೋರ್ಟ್ ನ್ಯಾಯವಾದಿ ಕನ್ಸಾಲ್ ಅವರ ಅರ್ಜಿ ತಿರಸ್ಕರಿಸ್ ಅವರ ಮೇಲೆ ದಂಡ ವಿಧಿಸಿದ ಎರಡನೇ ದಿನವೇ 50 ಪೈಸೆಗಳ ನಾಣ್ಯ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. 100 ರೂ. ಮೌಲ್ಯದ ಒಟ್ಟು 200 ಐವತ್ತು ಪೈಸೆಗಳ ನಾಣ್ಯಗಳು ಸಂಗ್ರಹವಾಗುತ್ತಲೇ ಅವುಗಳನ್ನು ರಜಿಸ್ಟರ್ ಗೆ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.

ವಾಟ್ಸ್ ಆಪ್ ಗ್ರೂಪ್ ಕೂಡ ಆರಂಭಗೊಂಡಿದೆ
ಇದೆ ಪರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ವಿರೋಧ ವ್ಯಕ್ತಪಡಿಸಲು ಬಯಸುವ ವಕೀಲರಿಗಾಗಿ ವಾತ್ಸಾಪ್ ಗ್ರೂಪ್ ಕೂಡ ಆರಂಭಿಸಲಾಗಿದೆ. ಇದುವರೆಗೆ ಸುಮಾರು 200 ವಕೀಲರು ಈ ಗ್ರೂಪ್ ನ ಸದ್ಯಸ್ಯತ್ವವನ್ನು ಸ್ವೀಕರಿಸಿ ಕನ್ಸಾಲ್ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

'ಒನ್ ನೇಶನ್, ಒನ್ ರೇಶನ್ ಕಾರ್ಡ್' ಕುರಿತಾದ ಪ್ರಕರಣ
ಕನ್ಸಾಲ್ 'ಒನ್ ನೇಶನ್, ಒನ್ ರೇಶನ್ ಕಾರ್ಡ್'ಗೆ ಸಂಬಧಿಸಿದ ಅರ್ಜಿ ರಿಜಿಸ್ಟರ್ ನಲ್ಲಿ ಲಿಸ್ಟೆಡ್ ಇಲ್ಲದೆ ಇರುವುದನ್ನು ಕಂಡು ತಮ್ಮ ಅರ್ಜಿ ದಾಖಲಿಸಿದ್ದರು. 

Trending News