ಚುರು: ಭಾರತ ದೇಶ ತಲೆಬಾಗಲು ಬಿಡುವುದಿಲ್ಲ. ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ರಾಜಸ್ಥಾನದ ಚುರುವಿನಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಏರ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಮೊದಲ ಬಾರಿ ಪ್ರಧಾನಿ ಮೋದಿಯವರು ಮಾತನಾಡಿದ್ದಾರೆ. ಅವರು ಇಂದು ಅವರು ರಾಜಸ್ಥಾನದಲ್ಲಿ ನಡೆದ ವಿಜಯ್ ಸಂಕಲ್ಪ ಯಾತ್ರೆಯಲ್ಲಿ ರಾಜಸ್ಥಾನೀ ಭಾಷೆಯಲ್ಲಿ ತಮ್ಮ ಭಾಷಣ ಆರಂಭಿಸಿದ ಮೋದಿ, ರಾಜಸ್ಥಾನದ ವಿವಿಧ ಗಣ್ಯರನ್ನು ಸ್ಮರಿಸಿದರು. ನಿಮ್ಮ ಈ ಉತ್ಸಾಹವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ದೇಶದ ವೀರಾಧಿವೀರರಿಗೆ ನಾನು ಶಿರ ಭಾಗಿ ನಮಿಸುತ್ತೇನೆ. ಈ ದೇಶವು ಸುರಕ್ಷಿತ ಕೈಯಲ್ಲಿದೆ ಎಂದು ಸೇನೆ ಕಾಯಕವನ್ನು ಶ್ಲಾಘಿಸಿದರು.
#WATCH PM Modi addresses a public rally in Churu, Rajasthan https://t.co/M6j8yfU38G
— ANI (@ANI) February 26, 2019
ಇದೇ ವೇಳೆ “ಸೌಗಂದ್ ಮುಜೇ ಹೈ ಯೇ ಮಿಟ್ಟಿ ಕೀ, ಈ ದೇಶ್ ನಹಿ ಮಿಟ್ನೇ ದೂಂಗಾ.. ಮೈ ದೇಶ್ ನಹೀ ರುಕ್ನೇ ದೂಂಗಾ, ದೇಶ್ ನಹೀ ಜುಕ್ನೇ ದೂಂಗಾ” ಎಂದು 2014ರಲ್ಲಿ ತಾವು ಹೇಳಿದ್ದನ್ನೇ ಮತ್ತೆ ಪುನರಾವರ್ತಿಸಿದರು.
ಭಾರತ ದೇಶ ತಲೆಬಾಗಲು ಬಿಡುವುದಿಲ್ಲ. ಭಾರತಕ್ಕೆ ಹಿನ್ನಡೆಯಾಗಲು ಬಿಡುವುದಿಲ್ಲ. ದೇಶ ಒಡೆಯಲು ಬಿಡುವುದಿಲ್ಲ, ದೇಶಕ್ಕಿಂತ ದೊಡ್ಡದು ಏನೂ ಇಲ್ಲ. ದೇಶದ ನಿರ್ಮಾಣದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಈ ಪ್ರಧಾನ ಸೇವಕನ ನಮನ. ಸ್ವಾತಂತ್ರದ 70 ವರ್ಷಗಳ ಬಳಿಕ ದೇಶದ ವೀರ ಹುತಾತ್ಮರಿಗೆ ರಾಷ್ಟ್ರೀಯ ಸಮರ ಸ್ಮಾರಕ (ನ್ಯಾಷನಲ್ ವಾರ್ ಮೆಮೋರಿಯಲ್) ಸಮರ್ಪಣೆ ಮಾಡಲಾಗಿದೆ ಎಂದು ಮೋದಿ ತಿಳಿಸಿದರು.
ರಾಷ್ಟ್ರೀಯ ಯುದ್ದ ಸ್ಮಾರಕವನ್ನು ವೀರ ಯೋಧರಿಗೆ ಮೀಸಲಿರಿಸಲಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಯೋಧರಿಗೋಸ್ಕರ ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿ ಮಾಡಿದೆವು. 20 ಲಕ್ಷಕ್ಕಿಂತ ಹೆಚ್ಚು ಯೋಧರ ಕುಟುಂಬಗಳಿಗೆ ಒಆರ್ ಒಪಿ ಲಾಭ ದೊರೆತಿದೆ ಎಂದು ಮೋದಿ ಹೇಳಿದ್ದಾರೆ.
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಈ ತತ್ವದೊಂದಿಗೆ ಮುನ್ನಡೆಯುತ್ತಿದ್ಧೇವೆ. ಈ ಮೂಲಕ ಸೈನಿಕರು, ರೈತರು ಮತ್ತು ವಿಜ್ಞಾನಿಗಳೇ ಈ ದೇಶದ ಬೆನ್ನೆಲುಬು ಎಂದು ಮೋದಿ ಹೇಳಿದರು.