Mohammed Shami : ಕ್ರಿಕೆಟ್‌ಗಾಗಿ ಮೊಹಮ್ಮದ್‌ ಶಮಿ ದೊಡ್ಡ ತ್ಯಾಗ..! ಇದಲ್ವಾ ದೇಶ ಭಕ್ತಿ ಅಂದ್ರೆ... ಗ್ರೇಟ್‌ ಗುರು ನೀನು..

ICC Champions Trophy 2025 : 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳೆದ ಗುರುವಾರ (ಫೆಬ್ರವರಿ 20, 2025) ಬಾಂಗ್ಲಾದೇಶ ವಿರುದ್ಧದ ಭಾರತ ತಂಡದ ಮೊದಲ ಪಂದ್ಯದಲ್ಲಿ ಮೊಹಮ್ಮದ್ ಶಮಿ ಉತ್ತಮವಾಗಿ ಆಡಿದರು, ಅಂದಿನ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ, ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡರು.

Written by - Krishna N K | Last Updated : Feb 23, 2025, 02:58 PM IST
    • ಬಾಂಗ್ಲಾದೇಶ ವಿರುದ್ಧದ ಭಾರತ ತಂಡದ ಮೊದಲ ಪಂದ್ಯದಲ್ಲಿ ಮೊಹಮ್ಮದ್ ಶಮಿ ಉತ್ತಮವಾಗಿ ಆಡಿದರು
    • ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡರು.
    • ಇಂದು ಸಹ ಭಾರತ ಮತ್ತು ಪಾಕ್‌ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
Mohammed Shami : ಕ್ರಿಕೆಟ್‌ಗಾಗಿ ಮೊಹಮ್ಮದ್‌ ಶಮಿ ದೊಡ್ಡ ತ್ಯಾಗ..! ಇದಲ್ವಾ ದೇಶ ಭಕ್ತಿ ಅಂದ್ರೆ... ಗ್ರೇಟ್‌ ಗುರು ನೀನು.. title=

IND vs PAK Mohammed Shami : ಇಂದು ಸಹ ಭಾರತ ಮತ್ತು ಪಾಕ್‌ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದೇ ವೇಳೆ ಅವರು, ಶಾಕಿಂಗ್‌ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ. ಶಮಿ ಕ್ರಿಕೆಟ್‌ಗಾಗಿ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಹೆಮ್ಮೆ ಪಡುತ್ತಿದ್ದಾರೆ..

2025 ರ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿತು. 5 ವಿಕೆಟ್ ಪಡೆದ ಮೊಹಮ್ಮದ್ ಶಮಿ, ತಮ್ಮ ಆಹಾರ ಕ್ರಮದ ಬಗ್ಗೆ ಮತ್ತು ಗಾಯದಿಂದಾಗಿ ವಿರಾಮ ತೆಗೆದುಕೊಂಡಾಗ ಎಷ್ಟು ತೂಕ ಇಳಿಸಿಕೊಂಡರು ಎಂಬುದರ ಕುರಿತು ಆಸಕ್ತಿದಾಯಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ..

ಇದನ್ನೂ ಓದಿ:ಭಾರತ ತಂಡದ ಈ ಆಟಗಾರ ಬೇಗನೆ ಔಟ್‌ ಆದ್ರೆ ಗೆಲ್ಲೋದು "ಪಾಕಿಸ್ತಾನ" ಟೀಂ..! ಯಾರದು ಗೊತ್ತೆ..?

ಸ್ಟಾರ್ ಸ್ಪೋರ್ಟ್ಸ್ ನಿರೂಪಕ ನವಜೋತ್ ಸಿಂಗ್ ಸಿಧು ಅವರೊಂದಿಗೆ ಮಾತನಾಡಿದ ಮೊಹಮ್ಮದ್ ಶಮಿ (Mohammed Shami), “2015 ರಿಂದ ನಾನು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಿದ್ದೇನೆ. ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಮಾಡುವುದಿಲ್ಲ. ಇದನ್ನು ಮಾಡುವುದು ತುಂಬಾ ಕಷ್ಟಕರವಾದರೂ, ಬರುಬರುತ್ತಾ ಇದು ತುಂಬಾ ಸುಲಭವಾಗುತ್ತದೆ.

ಗಾಯದ ಕಾರಣ ರಜೆಯಲ್ಲಿದ್ದಾಗ ನಾನು ಸುಮಾರು 9 ಕೆಜಿ ತೂಕ ಇಳಿಸಿಕೊಂಡೆ. ನನ್ನ ತೂಕ ಸುಮಾರು 90 ಕೆಜಿ ಇತ್ತು. ನನ್ನಲ್ಲಿರುವ ಒಳ್ಳೆಯ ವಿಷಯವೆಂದರೆ ನನಗೆ ರುಚಿಕರವಾದ ಆಹಾರಗಳ ಹಂಬಲವಿಲ್ಲ. ನಾನು ಯಾವಾಗಲೂ ಸಿಹಿತಿಂಡಿಗಳಿಂದ ದೂರವಿರುತ್ತೇನೆ ಎಂದು ಶಮಿ ತಿಳಿಸಿದ್ದಾರೆ.

ಇದನ್ನೂ ಓದಿ:ಈ ಪಾಕಿಸ್ತಾನಿ ಕ್ರಿಕೆಟರ್‌ ಪತ್ನಿಗೆ ವಿರಾಟ್‌ ಕೊಹ್ಲಿ ಎಂದರೆ ಎಲ್ಲಿಲ್ಲದ ಪ್ರೀತಿ! ಸೌಂದರ್ಯ ದೇವಂತೆಯಂತಿರುವ ಈಕೆ ಭಾರತದವರೇ.. ಯಾರು ಗೊತ್ತಾ?

ಕಳೆದ ಗುರುವಾರ (ಫೆಬ್ರವರಿ 20, 2025) 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅದ್ಭುತವಾಗಿ ಆಡಿದರು. ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ, ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News