ನವದೆಹಲಿ: ಕೇಂದ್ರ ಸರ್ಕಾರ ಜಲಾಯನ ಪ್ರದೇಶಗಳ ರಕ್ಷಣೆಯ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದೆ.
ಮಸೂದೆಯನ್ನು ಅಣೆಕಟ್ಟು ಸುರಕ್ಷತಾ ಮಸೂದೆ ಎಂದು ಹೇಳಲಾಗಿದ್ದು ಈ ಮಸೂದೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಲ್ಲಿನ ಅಣೆಕಟ್ಟುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ಅಣೆಕಟ್ಟಿನ ವೈಫಲ್ಯಕ್ಕೆ ಸಂಬಂಧಿಸಿದ ವಿಕೋಪಗಳನ್ನು ತಡೆಯಲು ನಿಗದಿತ ಅಣೆಕಟ್ಟುಗಳ ನಿಗಾವಹಿಸಲು, ತಪಾಸಣೆ, ಕಾರ್ಯಾಚರಣೆ ಮತ್ತು ನಿರ್ವಹಣೆ ವಿಚಾರವಾಗಿ ಮಸೂದೆ ಸಹಾಯಕಾರಿಯಾಗಲಿದೆ ಎಂದು ಹೇಳಲಾಗಿದೆ.ಕಾಂಗ್ರೆಸ್, ಟಿಡಿಪಿ ಮತ್ತು ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳ ಪ್ರತಿಭಟನೆಯ ಮಧ್ಯೆದ ನಡುವೆಯೂ ಮಸೂದೆಯನ್ನು ಪರಿಚಯಿಸಲಾಯಿತು.
ಈ ಮಸೂದೆ ಲೋಕಸಭೆ ಮತ್ತು ಸಂಸತ್ತಿನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಬಿ.ಜೆ.ಡಿ ಸದಸ್ಯ ಭಾರ್ತುಹರಿ ಮಹ್ತಾಬ್ ಮಸೂದೆಗೆ ವಿರೋಧಿಸಿ ಈ ವಿಷಯವು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.ಇನ್ನೊಂದೆಡೆಗೆ ಮಸೂದೆಯನ್ನು ಪರಿಚಯಿಸುವ ಶಾಸನಬದ್ಧ ಸಾಮರ್ಥ್ಯ ಸಂಸತ್ತು ಹೊಂದಿದೆ. ಎರಡು ರಾಜ್ಯಗಳು ಸಮ್ಮತಿಸಿದರೆ ಮಸೂದೆ ಮಂಡಿಸುವ ಸಾಮರ್ಥ್ಯವನ್ನು ಕೇಂದ್ರವು ಶಾಸಕಾಂಗ ಹೊಂದಿದೆ ಎಂದು ಸಚಿವರು ತಿಳಿಸಿದರು.
ಭಾರತದಲ್ಲಿ ಸುಮಾರು 5,200 ಬೃಹತ್ ಅಣೆಕಟ್ಟುಗಳಿವೆ ಮತ್ತು 450 ಕ್ಕಿಂತಲೂ ಹೆಚ್ಚು ನಿರ್ಮಾಣ ಹಂತದಲ್ಲಿದೆ. ಇದರ ಜೊತೆಗೆ, ಸಾವಿರಾರು ಮಧ್ಯಮ ಮತ್ತು ಸಣ್ಣ ಅಣೆಕಟ್ಟುಗಳಿವೆ.