P&K Fertilisers : ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ : ರಸಗೊಬ್ಬರಗಳ ಮೇಲಿನ ಸಬ್ಸೀಡಿ ಮತ್ತಷ್ಟು ಹೆಚ್ಚಳ

'ಪೋಷಕಾಂಶ ಆಧಾರಿತ ಸಬ್ಸಿಡಿ ದರ'ಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

Last Updated : Jun 16, 2021, 05:24 PM IST
  • 2021-22ನೇ ವರ್ಷದ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರ
  • ರಸಗೊಬ್ಬರ ಇಲಾಖೆಯ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
  • 'ಡೀಪ್ ಓಷನ್ ಮಿಷನ್' ನ ಅಂದಾಜು ವೆಚ್ಚವು 5 ವರ್ಷಗಳ ಅವಧಿಗೆ 4,077 ಕೋಟಿ ರೂ.
P&K Fertilisers : ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ : ರಸಗೊಬ್ಬರಗಳ ಮೇಲಿನ ಸಬ್ಸೀಡಿ ಮತ್ತಷ್ಟು ಹೆಚ್ಚಳ title=

ನವದೆಹಲಿ : 2021-22ನೇ ವರ್ಷದ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರಗಳಿಗೆ 'ಪೋಷಕಾಂಶ ಆಧಾರಿತ ಸಬ್ಸಿಡಿ ದರ'ಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹಿನ್ನಲೆಯಲ್ಲಿ ದೇಶದ ರೈತರಿಗೆ ಕೆಲಸ ರಸಗೊಬ್ಬರಗಳ ಮೇಲೆ ಸಬ್ಸಿಡಿ ಮತ್ತಷ್ಟು ಹೆಚ್ಚಾಗಿ, ರಸಗೊಬ್ಬರ ಬೆಲೆ ಕಡಿತಗೊಂಡಂತೆ ಆಗಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ನೇತೃತ್ವದಲ್ಲಿ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಇಂದಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, 2021-22ನೇ ವರ್ಷದ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ 'ಪೋಷಕಾಂಶ ಆಧಾರಿತ ಸಬ್ಸಿಡಿ ದರ'ಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇದನ್ನೂ ಓದಿ : ಎರಡು ಡೋಸ್ ಗಳ ಕೋವಿಶೀಲ್ಡ್ ಕಾಲಮೀತಿ ಕುರಿತು ಆರೋಗ್ಯ ಸಚಿವರು ಹೇಳಿದ್ದೇನು?

ಸಂಪನ್ಮೂಲಗಳಿಗಾಗಿ ಆಳ ಸಾಗರವನ್ನು ಅನ್ವೇಷಿಸಲು ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಗಾಗಿ ಆಳ ಸಮುದ್ರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ 'ಆಳ ಸಾಗರ ಮಿಷನ್'(Deep Ocean Mission) ಕುರಿತ ಭೂ ವಿಜ್ಞಾನ ಸಚಿವಾಲಯದ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಜೂನ್ 16 ರಂದು ಅನುಮೋದನೆ ನೀಡಿದೆ. 'ಡೀಪ್ ಓಷನ್ ಮಿಷನ್' ನ ಅಂದಾಜು ವೆಚ್ಚವು 5 ವರ್ಷಗಳ ಅವಧಿಗೆ 4,077 ಕೋಟಿ ರೂ.ಗಳಾಗಲಿದೆ ಎಂದು ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಎಕ್ಸ್ ಪ್ರೆಸ್ ಹೆದ್ದಾರಿಗಳಲ್ಲಿ ತಪ್ಪಿಯೂ ಈ ತಪ್ಪು ಮಾಡಬಾರದು..!

3 ವರ್ಷಗಳ (2021-2024) ಮೊದಲ ಹಂತದಲ್ಲಿ ಸರ್ಕಾರ 2,823.40 ಕೋಟಿ ರೂ. ಖರ್ಚು ಮಾಡುತ್ತದೆ. 'ಡೀಪ್ ಓಷನ್ ಮಿಷನ್' ಸರ್ಕಾರದ ಬ್ಲೂ ಎಕಾನಮಿ ಉಪಕ್ರಮಗಳನ್ನು ಬೆಂಬಲಿಸುವ ಮಿಷನ್ ಮೋಡ್ ಯೋಜನೆಯಾಗಿದ್ದು, ಭೂ ವಿಜ್ಞಾನ ಸಚಿವಾಲಯ (MOES) ಈ ಬಹು ಸಾಂಸ್ಥಿಕ ಮಹತ್ವಾಕಾಂಕ್ಷೆಯ ಮಿಷನ್ ಅನ್ನು ಅನುಷ್ಠಾನಗೊಳಿಸುವ ನೋಡಲ್ ಸಚಿವಾಲಯವಾಗಲಿದೆ.

ಇದನ್ನೂ ಓದಿ : ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ ? ಐದೇ ನಿಮಿಷದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು e-Pan

ಇದಲ್ಲದೆ, ಕೇಂದ್ರ ಸಚಿವ ಸಂಪುಟ(Union Cabinet)ವು ಪೋಷಕಾಂಶ ಆಧಾರಿತ ಸಬ್ಸಿಡಿ ಮತ್ತು ಒಳನಾಡು ಹಡಗು ಮಸೂದೆಗೆ ತನ್ನ ಅನುಮೋದನೆಯನ್ನು ನೀಡಿತು. ಇತರ ಪ್ರಮುಖ ನಿರ್ಧಾರಗಳ ಪೈಕಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ, 2021-22ರ ಫೋಸ್ಫಾಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಹೆಚ್ಚಿನ ಪೋಷಕಾಂಶ ಆಧಾರಿತ ಸಬ್ಸಿಡಿ ದರಗಳಿಗೆ ಅನುಮೋದನೆ ನೀಡಿತು.

ಇದನ್ನೂ ಓದಿ : CBSE 12th Board Result 2021 Formula: 30:30:40 ರ ಸೂತ್ರದಲ್ಲಿ ಸಿದ್ಧವಾಗಲಿದೆಯೇ ರಿಸಲ್ಟ್?

ಡಿ-ಅಮೋನಿಯಾ ಫಾಸ್ಫೇಟ್ (DAP) ನಂತಹ ಸಂಕೀರ್ಣ ರಸಗೊಬ್ಬರಗಳ ಚೀಲಕ್ಕೆ ಸರ್ಕಾರ ಸಬ್ಸಿಡಿಯನ್ನು 700 ರೂ.ಗಳಷ್ಟು ಹೆಚ್ಚಿಸಿದೆ. ಇನ್ನು, ಡಿಎಪಿಯ ಪ್ರತಿಯೊಂದು ಚೀಲದ ಬೆಲೆ ರೂ 2,400 ಆಗಿರುತ್ತದೆ. ಇದಕ್ಕಾಗಿ, ಸಬ್ಸಿಡಿ ಬೆಂಬಲವನ್ನು ಹೆಚ್ಚಿಸಲು ಸರ್ಕಾರವು ಹೆಚ್ಚುವರಿ 14,000ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ.

ಇದನ್ನೂ ಓದಿ : Twitterಗೆ ನೀಡಲಾಗಿದ್ದ ಕಾನೂನು ಕ್ರಮ ವಿನಾಯ್ತಿ ಹಿಂಪಡೆತ, ಕೇಂದ್ರ ಸರ್ಕಾರದ ಮೊದಲ ಪ್ರತಿಕ್ರಿಯೆ ಇದು

ಈ ನಿರ್ಧಾರ ತೆಗೆದುಕೊಳ್ಳುವ ಮೊದಲು, ಸರ್ಕಾರವು ಮೇ ತಿಂಗಳಲ್ಲಿ ಡಿಎಪಿಗೆ ಸಬ್ಸಿಡಿ(Nutrient-Based Subsidy)ಯ ತನ್ನ ಪಾಲನ್ನು ಪ್ರತಿ ಚೀಲಕ್ಕೆ 500 ರಿಂದ 1,200ರೂ.ಗಳಿಗೆ ಶೇಕಡಾ 140ರಷ್ಟು ಹೆಚ್ಚಿಸಿದೆ. ಇದರೊಂದಿಗೆ, ಏಪ್ರಿಲ್ ನಿಂದ ಕಂಪನಿಗಳು ಘೋಷಿಸಿದ ಬೆಲೆಗಳಲ್ಲಿ ಶೇಕಡಾ 58 ರಷ್ಟು ಹೆಚ್ಚಳವನ್ನು ಸರ್ಕಾರ ಹಿಂದಕ್ಕೆ ತಂದಿತು.

ಇದನ್ನೂ ಓದಿ : ಪ್ರಚೋದನಕಾರಿ ಭಾಷಣ ಮಾಡಿದ ಆರೋಪ - Mithun Chakraborty ವಿಚಾರಣೆ ನಡೆಸಿದ ಪೊಲೀಸರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News