ನವದೆಹಲಿ: ಮುಂಬರುವ ವಾಟ್ಸಾಪ್ ವೈಶಿಷ್ಟ್ಯಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. 2019 ಜನಪ್ರಿಯ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ಗೆ ವಿವಾದಾತ್ಮಕ ವರ್ಷವಾಗಿದೆ. ಈ ವರ್ಷ WhatsApp ಪ್ಲಾಟ್‌ಫಾರ್ಮ್ ಬಳಕೆದಾರರಿಗಾಗಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದರೆ, ಹಲವು ನ್ಯೂನ್ಯತೆಗಳಿಂದಾಗಿ ಅದು ಮತ್ತೊಮ್ಮೆ ಸುದ್ದಿಯಲ್ಲಿತ್ತು. ಈಗ, ನಾವು 2020 ಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದಲ್ಲಿ WhatsApp ಕೂಡ ಬಳಕೆದಾರರ ಅನುಭವವನ್ನು ಸುಧಾರಿಸುವುದನ್ನು ಮುಂದುವರೆಸುತ್ತದೆ ಮತ್ತು ನಕಾರಾತ್ಮಕ ಪ್ರಚಾರದಿಂದ ದೂರವಿರುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ ವಾಟ್ಸಾಪ್(WhatsApp) ಹೆಚ್ಚು ಕಾಯುತ್ತಿದ್ದ ಡಾರ್ಕ್ ಮೋಡ್ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಅವುಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು 2019 ರಲ್ಲಿ ಪರೀಕ್ಷಿಸಲಾಗಿದೆ.
ಮುಂಬರುವ ವಾಟ್ಸಾಪ್ ವೈಶಿಷ್ಟ್ಯಗಳ ನೋಟ ಇಲ್ಲಿದೆ:
1. ಆಪ್ತ ಸ್ನೇಹಿತರಿಗಾಗಿ ಸ್ಟೇಟಸ್ (Status for close friends):
ನಿಮ್ಮಲ್ಲಿ ಇನ್‌ಸ್ಟಾಗ್ರಾಮ್ ಬಳಸುತ್ತಿರುವವರಿಗೆ ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯುತ್ತದೆ. ಇದು ಮೂಲತಃ ಬಳಕೆದಾರರು ತಮ್ಮ ವಾಟ್ಸಾಪ್ ಸ್ಟೇಟಸ್ ಅನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಹೊಂದಿಸಲು ಅನುಮತಿಸುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ರೀತಿಯ ಆಯ್ಕೆ ಲಭ್ಯವಿದೆ ಮತ್ತು ಅವುಗಳನ್ನು ನೋಡಲು 'ಆಪ್ತ ಸ್ನೇಹಿತರನ್ನು' ಮಾತ್ರ ಅನುಮತಿಸುತ್ತದೆ.
2. ಡಾರ್ಕ್ ಮೋಡ್ (Dark Mode):
ವಾಟ್ಸಾಪ್ ಈಗ ಡಾರ್ಕ್ ಮೋಡ್ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವನ್ನು 2019 ರಲ್ಲಿ ಅನೇಕ ಸಂದರ್ಭಗಳಲ್ಲಿ ಲೇವಡಿ ಮಾಡಲಾಯಿತು ಮತ್ತು ಜಿಮೇಲ್, ಟ್ವಿಟರ್ ಮತ್ತು ಯೂಟ್ಯೂಬ್‌ನಂತಹ ಹಲವಾರು ಇತರ ಅಪ್ಲಿಕೇಶನ್‌ಗಳಿಗೆ ದಾರಿ ಮಾಡಿಕೊಟ್ಟಿದೆ. ವಾಟ್ಸಾಪ್ 2020 ರಲ್ಲಿ ಈ ವೈಶಿಷ್ಟ್ಯವನ್ನು ಹೊರತರುವ ನಿರೀಕ್ಷೆ ಹೆಚ್ಚಿದೆ. ಇದು ಬಳಕೆದಾರರಿಗೆ ವೈಟ್ ಅಂಡ್ ಬ್ಲಾಕ್ ಬ್ಯಾಕ್ ಗ್ರೌಂಡ್ ಹಿನ್ನೆಲೆಯ ನಡುವೆ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
3. ಆಂಡ್ರಾಯ್ಡ್‌ನಲ್ಲಿ ಫೇಸ್ ಅನ್‌ಲಾಕ್ (Face Unlock on Android):
2019 ರಲ್ಲಿ ಫಿಂಗರ್‌ಪ್ರಿಂಟ್ ದೃಡೀಕರಣವನ್ನು ಪರಿಚಯಿಸುವ ಮೂಲಕ ವಾಟ್ಸಾಪ್ ಪ್ಲಾಟ್‌ಫಾರ್ಮ್‌ನ ಸುರಕ್ಷತೆಯನ್ನು ಸುಧಾರಿಸಿದೆ. ಇದೀಗ 2020 ರಲ್ಲಿ ಫೇಸ್ ಅನ್‌ಲಾಕ್ ಅನ್ನು ಹೊರತರುವ ನಿರೀಕ್ಷೆಯಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್ ಅನ್‌ಲಾಕ್ ಕಾರ್ಯನಿರ್ವಹಿಸುವಂತೆಯೇ ವಾಟ್ಸಾಪ್‌ನಲ್ಲೂ ಈ ವೈಶಿಷ್ಟ್ಯವು ಕಾರ್ಯನಿರ್ವಹಿಸುತ್ತದೆ.
4. ಲಾಸ್ಟ್ ಸೀನ್ ಅನ್ನು ಆಯ್ದ ಸ್ನೇಹಿತರು ಮಾತ್ರ ನೋಡುವ ಆಯ್ಕೆ (Last seen for Select friends):
ಇದು ವಾಟ್ಸಾಪ್ ಬಳಕೆದಾರರು ತಮ್ಮ ಸಂಪರ್ಕಗಳ ಆಯ್ಕೆಯನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಈ ಮೂಲಕ ನಿಮ್ಮ ವಾಟ್ಸಾಪ್ ಲಾಸ್ಟ್ ಸೀನ್ ಅನ್ನು ಆಯ್ದ ಸ್ನೇಹಿತರು ಮಾತ್ರ ನೋಡಬಹುದಾಗಿದೆ.
5. ಬಹು ಸಾಧನಗಳ ಬೆಂಬಲ (Multiple devices support):
ಒಂದಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಲಾಗಿನ್ ಆಗಲು ಬಳಕೆದಾರರಿಗೆ ಇದು ಅನುಮತಿಸುತ್ತದೆ. ಇದೀಗ, ನೀವು ಒಂದು ಸಮಯದಲ್ಲಿ ಕೇವಲ ಒಂದು ಸಾಧನದಲ್ಲಿ ವಾಟ್ಸಾಪ್ ಅನ್ನು ಬಳಸಬಹುದು. ಈ ವೈಶಿಷ್ಟ್ಯವು ವಾಟ್ಸಾಪ್ ವೆಬ್‌ನಿಂದ ಭಿನ್ನವಾಗಿರುತ್ತದೆ, ಅದು ಡೆಸ್ಕ್‌ಟಾಪ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಅನ್ನು ಪ್ರತಿಬಿಂಬಿಸುತ್ತದೆ.