Video : 9 ಸೆಕೆಂಡ್ ನಲ್ಲಿ ನೆಲಸಮವಾಯಿತು 337 ಅಡಿ ಎತ್ತರದ ಅವಳಿ ಗೋಪುರ

ಈ ಕಟ್ಟಡವನ್ನು ಉರುಳಿಸಲು 3700 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ. ಗೋಪುರ ಬಿದ್ದ ತಕ್ಷಣ ಆ ಪ್ರದೇಶದಲ್ಲಿ ಧೂಳಿನ ಮೋಡ ಹರಡಿತು.

Written by - Channabasava A Kashinakunti | Last Updated : Aug 28, 2022, 03:32 PM IST
  • ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 93
  • ಅಕ್ರಮವಾಗಿ ಕಟ್ಟಲಾಗಿದ್ದ ಸೂಪರ್‌ಟೆಕ್ ಅವಳಿ ಗೋಪುರ
  • ಇಂದು ನೆಲಸಮ ಮಾಡಲಾಗಿದೆ
Video : 9 ಸೆಕೆಂಡ್ ನಲ್ಲಿ ನೆಲಸಮವಾಯಿತು 337 ಅಡಿ ಎತ್ತರದ ಅವಳಿ ಗೋಪುರ title=

Noida Twin Towers Demolished : ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 93 ರಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಸೂಪರ್‌ಟೆಕ್ ಅವಳಿ ಗೋಪುರವನ್ನು ಇಂದು ನೆಲಸಮ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಇದನ್ನು ನೆಲಕ್ಕುರುಳಿಯೊಸಲಾಗಿದೆ.

 ಈ ಕಟ್ಟಡವನ್ನು ಉರುಳಿಸಲು 3700 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ. ಗೋಪುರ ಬಿದ್ದ ತಕ್ಷಣ ಆ ಪ್ರದೇಶದಲ್ಲಿ ಧೂಳಿನ ಮೋಡ ಹರಡಿತು.

ಇದನ್ನೂ ಓದಿ : ಭಾರತ-ಯುಎಇ ವಿಮಾನ ದರ ಹೆಚ್ಚಳಕ್ಕೆ ಆಕ್ರೋಶ: ಕೇಸ್ ದಾಖಲಿಸಿದ NRI ಅಸೋಸಿಯೇಶನ್

ರಿಮೋಟ್ ಬ್ಲಾಸ್ಟ್

ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಕೆಡವಲು, 3700 ಕೆಜಿ ಸ್ಫೋಟಕಗಳನ್ನು ರಿಮೋಟ್ ಮೂಲಕ ಸ್ಫೋಟಿಸಲಾಯಿತು. ಇದಕ್ಕಾಗಿ ಕಂಟ್ರೋಲ್ ರೂಂ ನಿರ್ಮಿಸಿ ಅಲ್ಲಿಂದ ಅಧಿಕಾರಿಗಳ ಸೂಚನೆ ಮೂಲಕ ಸ್ಫೋಟ ಮಾಡಲಾಗಿದೆ. ಇದಕ್ಕೂ ಮೊದಲು ಅವಳಿ ಗೋಪುರದ ಸುತ್ತಲಿನ ಸಂಪೂರ್ಣ ಪ್ರದೇಶವನ್ನು ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ. ನೋಯ್ಡಾ ಸೆಕ್ಟರ್ 93ರಲ್ಲಿ 800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಆಡಳಿತವು ಈಗಾಗಲೇ ಇಡೀ ಪ್ರದೇಶದಲ್ಲಿ ಸಲಹೆ ನೀಡುವ ಮೂಲಕ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಿದೆ.

 

ಆಕಾಶದಲ್ಲಿ ಧೂಳಿನ ಮೋಡ

ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳಿನ ಮೋಡ ಹರಡಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಇಲಾಖೆ ಈಗಾಗಲೇ ಹಲವು ರಸ್ತೆಗಳನ್ನು ಬಂದ್ ಮಾಡಿತ್ತು.

ಇದನ್ನೂ ಓದಿ : ದೇಶದ ಚಿತ್ರಣವನ್ನೇ ಬದಲಿಸಿದ ಸುಪ್ರೀಂಕೋರ್ಟ್ ನ 10 ಐತಿಹಾಸಿಕ ತೀರ್ಪುಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News