ಪಾಟ್ನ: ರಾಜ್ಯದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಇದುವರೆಗೆ ಬಿಹಾರದಲ್ಲಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಈ ಹಿನ್ನೆಲೆಯಲ್ಲಿ ಪಾಟ್ನಾದ ಮಸೌರಿ ಪ್ರದೇಶಕ್ಕೆ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಸಂಸದ ರಾಮ ಕೃಪಾಳ್ ಯಾದವ್ ಅವರು ನೀರಿನೊಳಗೆ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
#WATCH Bihar: BJP MP Ram Kripal Yadav falls into the water after the makeshift boat he was in, capsized in Masaurhi, Patna district, during his visit to the flood affected areas yesterday. He was later rescued by the locals. (02.10.2019) pic.twitter.com/iwI4OdNGiH
— ANI (@ANI) October 3, 2019
ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಚಿಕ್ಕ ತೆಪ್ಪವೊಂದರಲ್ಲಿ ಸುಮಾರು 6 ರಿಂದ 10 ಜನರೊಂದಿಗೆ ತೆರಳಿದ್ದ ಸಂಸದ ರಾಮ ಕೃಪಾಳ್ ಅವರು, ಇದ್ದಕ್ಕಿದ್ದಂತೆ ತೆಪ್ಪ ನೀರಿನಲ್ಲಿ ಮುಳುಗಿದ ಕಾರಣ ನಿರಿಗೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಅವರನ್ನು ರಕ್ಷಿಸಿ ನೀರಿನಿಂದ ಹೊರಗೆ ಕರೆತಂದಿದ್ದಾರೆ.
ಇದೇ ವೇಳೆ, ಬಿಹಾರದ ನೈರುತ್ಯ ಜಿಲ್ಲೆಗಳಲ್ಲಿ ಅಕ್ಟೋಬರ್ 3 ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಾಟ್ನಾ, ವೈಶಾಲಿ, ಬೆಗುಸರಾಯ್ ಮತ್ತು ಖಗೇರಿಯಾ ಜಿಲ್ಲೆಗಳಲ್ಲಿ ಕಿತ್ತಳೆ ಎಚ್ಚರಿಕೆ ನೀಡಲಾಗಿದೆ.