VALENTINE'S DAY 2020: ವೆಲೆಂಟೈನ್ ಡೇ ದಿನದಂದು ಪ್ರೇಮಿ ಜೋಡಿಗಳು ಪರಸ್ಪರ ಪ್ರೇಮ ನಿವೇದನೆ ಮಾಡುತ್ತಾರೆ. ಅಷ್ಟೇ ಅಲ್ಲ ಜೊತೆಗೆ ಪರಸ್ಪರರಿಗೆ ಕೊಡುಗೆ ಕೂಡ ನೀಡುತ್ತಾರೆ. ಈ ಕೊಡುಗೆ ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿರುತ್ತದೆ. ಕೊಡುಗೆ ನೋಡಿ ಮುಖದ ಮೇಲೆ ಮಂದ ಹಾಸ್ಯ ಮೂಡುತ್ತದೆ.
ತಮ್ಮ ಪ್ರೇಯಸಿ ಅಥವಾ ಪ್ರಿಯಕರನಿಗಾಗಿ ಲವ್ ಬರ್ಡ್ಸ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಈ ದಿನವನ್ನು ಆಚರಿಸಲು ಯುವ ಪ್ರೇಮಿಗಳು ಒಂದು ತಿಂಗಳು ಮುಂಚಿತವಾಗಿ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ.
ವ್ಯಾಲೆಂಟೈನ್ ಇದೀಗ ಬಂದಾಗಿದೆ. ನೀವೂ ಕೂಡ ನಿಮ್ಮ 'ಸ್ಪೆಷಲ್'ಗೆ ಯಾವ ಗಿಫ್ಟ್ ನೀಡಬೇಕು ಎಂಬ ಆಲೋಚನೆಯಲ್ಲಿ ಮುಳುಗಿದ್ದೀರಾ? ಹಾಗಾದ್ರೆ, ಬನ್ನಿ ನಾವು ನಿಮ್ಮ ಈ ತೊಂದರೆಯನ್ನು ನಿವಾರಿಸುವೆವು. ನೀವು ನಿಮ್ಮ ಪ್ರೇಯಸಿ ಅಥವಾ ಪ್ರಿಯಕರನಿಗೆ ಯಾವ ಗಿಫ್ಟ್ ನೀಡಬಹುದು ಎಂಬುದನ್ನು ನಾವು ಸೂಚಿಸುವೆವು.
- ವ್ಯಾಲೆಂಟೈನ್ ಡೇ ದಿನ ಕೆಂಗುಲಾಬಿ ನೀಡಲು ಮರೆಯದಿರಿ. ಏಕೆಂದರೆ, ಸಂತ ವ್ಯಾಲೆಂಟೈನ್ ಈ ಪರಂಪರೆಯನ್ನು ಆರಂಭಿಸಿದ್ದಾರೆ. ಸಂತ ವ್ಯಾಲೆಂಟೈನ್ ಜೈಲಿನಲ್ಲಿರುವಾಗ ಜನರು ಅವರ ಭೇಟಿಗಾಗಿ ಬರುತ್ತಿದ್ದರು. ಜೊತೆಗೆ ಹೂವುಗಳನ್ನು ಕೂಡ ತರುತ್ತಿದ್ದರು. ಅಂದಿನಿಂದ ಕಪಲ್ಸ್ ಪರಸ್ಪರ ಗುಲಾಬಿ ಹೂವುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
- ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಆಭರಣಗಳ ಡಿಸೈನ್ ಗಳು ದೊರಕುತ್ತವೆ. ಅವುಗಳಲ್ಲಿ ಯಾವುದಾದರೊಂದು ಆಭರಣವನ್ನು ನೀವು ನಿಮ್ಮ ಪ್ರೆಯಸಿಗೆ ಉಡುಗೊರೆಯಾಗಿ ನೀಡಬಹುದು
- ಸಾಫ್ಟ್ ಟಾಯ್ ಕೂಡ ಒಂದು ವಿಕಲ್ಪವಾಗಿದ್ದು, ಯುವತಿಯರಿಗೆ ಇವು ತುಂಬಾ ಇಷ್ಟವಾಗುತ್ತವೆ. ಸಾಫ್ಟ್ ಟಾಯ್ ಹಿಡಿದು ಯುವತಿಯರು ಮಲಗಲೂ ಸಹ ಇಷ್ಟಪಡುತ್ತಾರೆ.
-ಹೂವುಗಳ ರೀತಿಯಲ್ಲಿ ಹುಡುಗಿಯರಿಗೆ ಚಾಕ್ಲೆಟ್ ಅಂದರೂ ಕೂಡ ಇಷ್ಟ. ಲವ್ ಗಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಚಾಕ್ಲೆಟ್ ಗಳೂ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತವೆ.
-ಪರ್ಫ್ಯೂಮ್ ಇಷ್ಟ ಇಲ್ಲ ಅನ್ನುವ ಯುವತಿಯರ ಸಂಖ್ಯೆ ತುಂಬಾ ವಿರಳವಾಗಿರುತ್ತದೆ. ನಿಮ್ಮ ಪ್ರೇಯಸಿಗೆ ಇಷ್ಟವಾಗುವ ಸುವಾಸನೆಯ ಪರ್ಫ್ಯೂಮ್ ನೀವು ಅವಳಿಗೆ ಗಿಫ್ಟ್ ನೀಡಿ .
- ಡ್ರೆಸ್ ಅಂದರೂ ಕೂಡ ಯುವತಿಯರಿಗೆ ಭಾರಿ ಇಷ್ಟ. ಇತ್ತೀಚಿಗೆ ಶಾರ್ಟ್ ಡ್ರೆಸ್ ಗಳ ಟ್ರೆಂಡ್ ನಡೆಯುತ್ತಿದೆ. ನಿಮ್ಮ ಪ್ರೇಯಸಿಗೆ ಇಷ್ಟವಾಗುವ ಡ್ರೆಸ್ ಅನ್ನೂ ಕೂಡ ನೀವು ಗಿಫ್ಟ್ ರೂಪದಲ್ಲಿ ನೀಡಬಹುದು.