Divorce Case: ಮೊಬೈಲ್ನಲ್ಲಿ ಗಂಟೆಗಟ್ಟಲೇ ಪೋರ್ನ್ ವಿಡಿಯೋ ನೋಡುವ ಚಟವಿದ್ದ ಮಹಿಳೆಯೊಬ್ಬಳು ಪತಿಯ ಬಳಿ ಪ್ರತಿ ರಾತ್ರಿ ತನ್ನೊಂದಿಗೆ ಮೂರು ಬಾರಿ 10-15 ನಿಮಿಷಗಳ ಕಾಲ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಳಂತೆ. ಇದಕ್ಕೆ ಒಪ್ಪದ ಪತಿಯನ್ನು ನಪುಂಸಕ ಅಂತಾ ಹೀಯಾಳಿಸುತ್ತಾಳಂತೆ.
ಇದೀಗ ಪತ್ನಿಯ ಕಾಟಕ್ಕೆ ಬೇಸತ್ತಿರುವ ಪತಿ ಪಂಜಾಬ್ ಹರಿಯಾಣ ಹೈಕೋರ್ಟ್ಗೆ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾನೆಂದು ವರದಿಯಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರಿದ್ದ ನ್ಯಾಯಪೀಠವು ಈ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿದೆ.
ಇದನ್ನೂ ಓದಿ: 8th Pay Commission: ನೀವು ಸರ್ಕಾರಿ ಉದ್ಯೋಗಿಯೇ ಹಾಗಾದರೆ ನಿಮಗೊಂದು ಸಿಹಿ ಸುದ್ದಿ..! 25,000 ವರೆಗೆ ನಿಮ್ಮ ವೇತನ ಹೆಚ್ಚಳ..!
ಇದೀಗ ಈ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೆಂಡತಿ ತನ್ನ ಗಂಡನನ್ನು ನಪುಂಸಕ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ ಅಂತಾ ನ್ಯಾಯಾಲಯ ಹೇಳಿದೆ. ಇದಕ್ಕೂ ಮುನ್ನ ಜುಲೈ 12ರಂದು ಕೌಟುಂಬಿಕ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿತ್ತು. ಮಹಿಳೆಯ ಅತ್ತೆ "ಸೊಸೆ ನನ್ನ ಮಗನನ್ನು ನಪುಂಸಕ" ಎಂದು ಕರೆದಿದ್ದಾಳೆ ಅಂತಾ ಆರೋಪಿಸಿದ್ದರು.
ಪತಿಯನ್ನು ನಪುಂಸಕ ಅಂತಾ ಕರೆಯುವುದು ಅಥವಾ ಅವಳು ನಪುಂಸಕನಿಗೆ ಜನ್ಮ ನೀಡಿದ್ದಾಳೆಂದು ತಾಯಿಗೆ ಹೇಳುವುದು ಕ್ರೂರವಾದದ್ದು ಅಂತಾ ನ್ಯಾಯಾಲಯ ಹೇಳಿದೆ. ಅದೇ ರೀತಿ ಪತಿ ಮತ್ತು ಅತ್ತೆಯ ಹೇಳಿಕೆಯನ್ನು ಕುಟುಂಬ ನ್ಯಾಯಾಲಯವು ಒಪ್ಪಿಕೊಂಡಿದ್ದು, ಪತಿಯ ಪರವಾಗಿ ತೀರ್ಪು ನೀಡಿತ್ತು. ಹೀಗಾಗಿ ಪತ್ನಿ ಹೈಕೊರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾಳೆಂದು ವರದಿಯಾಗಿದೆ.
ಇದನ್ನೂ ಓದಿ: ಪ್ರೊ. ಜಿ.ಎನ್.ಸಾಯಿಬಾಬಾ ನಿಧನ; ಪ್ರಭುತ್ವ ಪ್ರಾಯೋಜಿತ ಕೊಲೆ..!
ಈ ಪ್ರಕರಣದ ವಿಚಾರಣೆ ನಡೆಸಿರುವ ಈಗ ಪಂಜಾಬ್ ಹರಿಯಾಣ ಹೈಕೋರ್ಟ್ ಕಳೆದ 6 ವರ್ಷಗಳಿಂದ ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಕಾರಣ ಅವರನ್ನು ಒಂದಾಗಿಸುವುದು ಅಸಾಧ್ಯವೆಂದು ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಂಡತಿಯ ಮೇಲ್ಮನವಿಯನ್ನು ವಜಾಗೊಳಿಸಲಾಗುತ್ತದೆ ಮತ್ತು ಕುಟುಂಬ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿಯಲಾಗುತ್ತದೆ ಅಂತಾ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.